ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ತೆರೆದ ಶಾಲೆಗೆ ಬಂದಿದ್ದು ಕೇವಲ 5 ವಿದ್ಯಾರ್ಥಿಗಳು!

|
Google Oneindia Kannada News

ಮುಂಬೈ, ನವೆಂಬರ್.24: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಶಾಲಾ-ಕಾಲೇಜುಗಳನ್ನು ಪುನಾರಂಭಗೊಳಿಸಲಾಗಿದೆ. ರಾಜ್ಯದ ಶೇ.35ರಷ್ಟು ಶಾಲೆಗಳನ್ನು ಮಾತ್ರ ತೆರೆಯುವುದಕ್ಕೆ ಸರ್ಕಾರವು ಅನುಮತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಸೋಮವಾರ 100 ಶಾಲೆಗಳ ಪೈಕಿ ಕೇವಲ 35 ಶಾಲೆಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿತ್ತು. ಈ ವೇಳೆ ಶೇ.5ರಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.

ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!

ರಾಜ್ಯ ಶಿಕ್ಷಣ ಇಲಾಖೆಯು 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ-ಕಾಲೇಜು ತೆರೆಯುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಕೊವಿಡ್-19 ನಿಯಮ ಮತ್ತು ಮಾರ್ಗಸೂಚಿಗಳ ಶಿಸ್ತುಬದ್ಧ ಪಾಲನೆಗೆ ಆದೇಶಿಸಿತ್ತು. ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಜೊತೆಗೆ ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿಗೆ ಒತ್ತಾಯಿಸುವಂತಿಲ್ಲ ಎಂತಲೂ ಸೂಚಿಸಲಾಗಿತ್ತು.

Maharashtra: After 8 Months 35 Percent Schools Reopened: Only 5 Percent Students Attend


ಮಹಾನಗರಗಳಲ್ಲಿ ಈ ವರ್ಷ ತೆರೆಯಲ್ಲ ಶಾಲೆ:

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಬೈ, ನವಮುಂಬೈ, ಥಾಣೆ ಮತ್ತು ಪಾನ್ವೆಲ್ ನಲ್ಲಿ 2020ರ ವರ್ಷಾಂತ್ಯದವರೆಗೂ ಶಾಲಾ-ಕಾಲೇಜುಗಳನ್ನು ತೆರೆಯದಿರಲು ಸರ್ಕಾರವು ಆದೇಶಿಸಿದೆ. ರಾಜ್ಯದಲ್ಲಿರುವ ಒಟ್ಟು ಶಾಲೆಗಳ ಪೈಕಿ ಶೇ.35ರಷ್ಟು ಶಾಲೆಗಳನ್ನು ಮಾತ್ರ ತೆರೆಯುವುದಕ್ಕೆ ಅನುಮತಿ ನೀಡಲಾಗಿತ್ತು ಎಂದು ಮಹಾರಾಷ್ಟ್ರದ ಶಿಕ್ಷಣ ಆಯುಕ್ತ ವಿಶಾಲ್ ಸೋಲಂಕಿ ಹೇಳಿದ್ದಾರೆ.

ನವೆಂಬರ್.23ರಂದು ರಾಜ್ಯದ 25866 ಶಾಲೆಗಳ ಪೈಕಿ 9127 ಶಾಲೆಗಳ ಪುನಾರಂಭಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 59,27,456 ವಿದ್ಯಾರ್ಥಿಗಳ ಪೈಕಿ ಶೇ.5ರಷ್ಟು ಅಂದರೆ 2,99,193 ವಿದ್ಯಾರ್ಥಿಗಳು ಮಾತ್ರ ಶಾಲಾ-ಕಾಲೇಜುಗಳಿಗೆ ಹಾಜರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೂ 1,41,720 ಬೋಧಕ ಮತ್ತು 44313 ಬೋಧಕೇತರ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. 1353 ಬೋಧಕ ಮತ್ತು 290 ಬೋಧಕೇತರ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

English summary
Maharashtra: After 8 Months 35 Percent Schools Reopened: Only 5 Percent Students Attend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X