ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಏಕನಾಥ್ ಶಿಂಧೆ ಪುತ್ರ ಸಿಎಂ ಕುರ್ಚಿ ಮೇಲೆ ಕುಳಿತಿರುವ ಫೋಟೋ ವೈರಲ್

|
Google Oneindia Kannada News

ಮುಂಬೈ ಸೆಪ್ಟೆಂಬರ್ 24: ಲೋಕಸಭೆ ಸದಸ್ಯ ಶ್ರೀಕಾಂತ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕುರ್ಚಿಯ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದೆ. ವಿರೋಧ ಪಕ್ಷಗಳು ಈ ಫೋಟೋವನ್ನು ಹಂಚಿಕೊಂಡು ಕಿಡಿ ಕಾರಿವೆ. ಆದರೆ ಶ್ರೀಕಾಂತ್ ಶಿಂಧೆ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದು ಅವರ ನಿವಾಸದಲ್ಲಿ ತೆಗೆದ ಫೋಟೋ ಎಂದು ವಿವಾದವನ್ನು ತಳ್ಳಿಹಾಕಿದ್ದಾರೆ. ಅವರು ತಮ್ಮ ತಂದೆಗೆ ಗೊತ್ತುಪಡಿಸಿದ ಯಾವುದೇ ಅಧಿಕೃತ ಕುರ್ಚಿಯಲ್ಲಿ ಕುಳಿತುಕೊಳ್ಳಲಿಲ್ಲ. ಅದು ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ಆಗಿರಲಿಲ್ಲ. ಇದು ಥಾಣೆಯಲ್ಲಿರುವ ಅವರ ಖಾಸಗಿ ನಿವಾಸ ಮತ್ತು ಕಚೇರಿಯಾಗಿದೆ ಎಂದು ಶ್ರೀಕಾಂತ್ ಶಿಂಧೆ ಅವರು ಹೇಳಿಕೊಂಡಿದ್ದಾರೆ.

ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋದ ಮುಂದೆ ಶ್ರೀಕಾಂತ್ ಕುರ್ಚಿಯ ಮೇಲೆ ಕುಳಿತಿರುವ ಚಿತ್ರವನ್ನು ಎನ್‌ಸಿಪಿ ವಕ್ತಾರ ರವಿಕಾಂತ್ ವರ್ಪೆ ಟ್ವೀಟ್ ಮಾಡಿದ್ದಾರೆ. ಫೋಟೋ ಕೆಳಗೆ ಇರಿಸಲಾಗಿರುವ ಬೋರ್ಡ್ ಮತ್ತು ಕುರ್ಚಿಯ ಹಿಂದೆ 'ಮಹಾರಾಷ್ಟ್ರ ಸರ್ಕಾರ-ಮುಖ್ಯಮಂತ್ರಿ' ಎಂದು ಬರೆಯಲಾಗಿದೆ. ಹೀಗಾಗಿ ಶ್ರೀಕಾಂತ್ ಅವರನ್ನು ಸೂಪರ್ ಸಿಎಂ ಎಂದು ಕರೆದ ಎನ್‌ಸಿಪಿ ನಾಯಕ ರವಿಕಾಂತ್, "ಇದು ಯಾವ ರೀತಿಯ ರಾಜಧರ್ಮ?" ಎಂದು ಪ್ರಶ್ನೆ ಮಾಡಿದ್ದಾರೆ.

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಸಿಎಂ ಕುರ್ಚಿಯ ಬಗ್ಗೆ ಟ್ವೀಟ್ ಮಾಡಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ. "ಏಕನಾಥ್ ಶಿಂಧೆ ಅವರ ಮಗ (ಶ್ರೀಕಾಂತ್ ಶಿಂಧೆ) ಮಂತ್ರಿಯೂ ಅಲ್ಲ, ಶಾಸಕನೂ ಅಲ್ಲ. ಆದರೂ ಅವರು ಮಹಾರಾಷ್ಟ್ರದ ಸಿಎಂ ಖುರ್ಚಿ ಮೇಲೆ ಕುಳಿತಿದ್ದಾರೆ. ಅವರೇ ಅಧಿಕಾರದಲ್ಲಿರಬೇಕೆಂಬ ಹಸಿವಿನಿಂದ ಕುಳಿತಿರಬೇಕು" ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

Maharashtra: A photo of Eknath Shindes son sitting on the CMs chair has gone viral

ಚಿತ್ರದಲ್ಲಿ ಅವರ ಹಿಂದೆ ಕಂಡುಬರುವ ಬೋರ್ಡ್ ಇರುವುದನ್ನು ಕಾಣಬಹುದು. ಶ್ರೀಕಾಂತ್ ಶಿಂಧೆ ಅವರು ತಮ್ಮ ನಿವಾಸದಿಂದ ನಡೆಸುವ ಮುಖ್ಯಮಂತ್ರಿಗಳ ವರ್ಚುವಲ್ ಸಭೆಗಳ ಕಾರಣ ಅಲ್ಲಿಗೆ ಬೋರ್ಡ್ ತರಲಾಗಿದೆ ಎಂದು ಹೇಳಿ ಸಮಜಾಯಿಸಿ ನಿಡಿದ್ದಾರೆ. ಮುಖ್ಯಮಂತ್ರಿಗಳು ಒಂದೇ ಸ್ಥಳದಲ್ಲಿ ಕೂರುವುದಕ್ಕಿಂತ ಭಿನ್ನವಾಗಿ ನನ್ನ ತಂದೆ ದಿನಕ್ಕೆ 18 ರಿಂದ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನನ್ನ ತಂದೆ ಯಾವಾಗಲೂ ಪ್ರಯಾಣಿಸುತ್ತಲೇ ಇರುತ್ತಾರೆ. "ಮುಖ್ಯಮಂತ್ರಿ ಮತ್ತು ನಾನು ಈ ಕಚೇರಿಯನ್ನು ಜನರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತೇವೆ. ನಾನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಅಥವಾ ಕಚೇರಿಯಲ್ಲಿ ಇರಲಿಲ್ಲ "ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

English summary
A photo of Lok Sabha Member Srikanth Shinde sitting on Maharashtra Chief Minister Eknath Shinde's chair has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X