ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಧಾನದ ಸುದ್ದಿ: ಮಹಾರಾಷ್ಟ್ರದಲ್ಲಿ ಕೊವಿಡ್-19 ಗೆದ್ದ ವೃದ್ಧ ದಂಪತಿ

|
Google Oneindia Kannada News

ಮುಂಬೈ, ಏಪ್ರಿಲ್ 28: ಕೊರೊನಾವೈರಸ್. ಈ ಹೆಸರು ಕೇಳಿದರೆ ಜನರು ಬೆಚ್ಚಿ ಬೀಳುವಂತಾ ಸ್ಥಿತಿ ದೇಶದಲ್ಲಿ ಸೃಷ್ಟಿಯಾಗಿದೆ. ಕೊವಿಡ್-19 ಸೋಂಕು ಅಂದರೆ ಸಾವಿಗೆ ಇನ್ನೊಂದು ಹೆಸರು ಎನ್ನುವಂತಾ ದುಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದ ನಡುವೆ ಮಹಾಮಾರಿ ಕೊವಿಡ್-19 ಸೋಂಕಿನ ವಿರುದ್ಧ ವೃದ್ಧ ದಂಪತಿ ಹೋರಾಡಿ ಗೆದ್ದಿರುವುದ ಸ್ಪೂರ್ತಿದಾಯಕವಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತ ವೃದ್ಧ ದಂಪತಿಯು 10 ದಿನಗಳಲ್ಲಿ ಗುಣಮುಖರಾಗಿದ್ದು, ರೋಗದ ಬಗ್ಗೆ ಆತಂಕಗೊಂಡ ಜನರಲ್ಲಿ ಕೊಂಚ ಧೈರ್ಯ ತುಂಬುವಂತಿದೆ. ಲಾತೂರಿನ ವಿಲಾಸ್ ರಾವ್ ದೇಶಮುಖ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ದಂಪತಿ ದಾಖಲಾಗಿದ್ದರು.

 Maharashtra: A 105-year-old man and his 95-year-old wife beat COVID

 ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ

105 ವರ್ಷದ ವೃದ್ಧ ವ್ಯಕ್ತಿ ಮತ್ತು 95 ವರ್ಷದ ಆತನ ಪತ್ನಿಗೆ ಸೋಂಕು ನಿವಾರಕ ಔಷಧಿಗಳ ಜೊತೆಗೆ ಆಕ್ಸಿಜನ್ ವ್ಯವಸ್ಥೆ ಅಡಿಯಲ್ಲಿ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. 10 ದಿನಗಳಲ್ಲಿ ಇಬ್ಬರು ವೃದ್ಧ ದಂಪತಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣ:

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ ಘೋಷಿಸಿರುವ ಕಟ್ಟುನಿಟ್ಟಿನ ನಿಯಮಗಳು ಮೇ 1ರವರೆಗೂ ಜಾರಿಯಲ್ಲಿ ಇರಲಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 66358 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 895 ಮಂದಿ ಪ್ರಾಣ ಬಿಟ್ಟಿದ್ದು, 67,752 ಸೋಂಕಿತರು ಗುಣಮುಖರಾಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 44,100,85 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 36,69,548 ಸೋಂಕಿತರು ಗುಣಮುಖರಾಗಿದ್ದು, 6,72,434 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Maharashtra: A 105-year-old man and his 95-year-old wife beat COVID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X