• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ: 13 ನಕ್ಸಲರು ಎನ್‌ಕೌಂಟರ್‌ನಲ್ಲಿ ಹತ್ಯೆ

|
Google Oneindia Kannada News

ಮುಂಬೈ, ಮೇ 21: ಮಹಾರಾಷ್ಟ್ರದಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಕಾದಾಟದಲ್ಲಿ 13 ನಕ್ಸಲರು ಸಾವನ್ನಪ್ಪಿದ್ದಾರೆ. ಪೂರ್ವ ವಿದರ್ಭದ ಗಡ್ಚಿರೋಲಿಯ ಪೊಟೆಗಾಂವ್ ಮತ್ತು ರಜೋಲಿ ನಡುವಿನ ಕಾಡಿನಲ್ಲಿ ಶುಕ್ರವಾರ ಭದ್ರತಾ ಪಡೆ ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಸಿ-60 ವಿಭಾಗದ ಸಿಬ್ಬಂದಿಗಳು ಹಳ್ಳಿಯೊಂದರ ಬಳಿ ಶಿಬಿರ ಮಾಡಿಕೊಂಡಿದ್ದ ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳು, ಗಣನೀಯ ಪ್ರಮಾಣದ ಸಾಹಿತ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಗಡ್ಚಿರೋಲಿಯ ಡಿಐಜಿ ಸಂದೀಪ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ಯಶಸ್ಸು ದೊರೆತಿದ್ದು ಎನ್‌ಕೌಂಟರ್‌ನಲ್ಲಿ ಮತ್ತಷ್ಟು ನಕ್ಸಲರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಈ ಭಾಗ ಕಾಡಿನಲ್ಲಿ ನಕ್ಸಲರ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ನಂತರ ನಾವು ಕಾರ್ಯಾಚರಣೆಯನ್ನು ಆರಂಭಿಸಿದೆವು. ಇಲ್ಲಿಯ ವರೆಗೂ 13 ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೂಡ ಹುಟುಕಾಟವನ್ನು ಮುಂದುವರಿಸಲಾಗಿದೆ ಎಂದು ಡಿಐಜಿ ಸಂದೀಪ್ ಪಾಟೀಲ್ ಮಾಹಿತಿಯನ್ನು ನೀಡಿದ್ದಾರೆ.

English summary
13 Maoists gunned down in encounter in a forest between Potegaon and Rajoli in eastern Vidarbha's Gadchiroli on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X