ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ನೋಟಾ ಮುಂದೆ ನೆಲಕಚ್ಚಿದ ಬಿಗ್ ಬಾಸ್ ಮಾಜಿ ಸ್ಪರ್ಧಿ!

|
Google Oneindia Kannada News

ಮುಂಬೈ, ಅಕ್ಟೋಬರ್ 25: ಬಾಲಿವುಡ್ ನ ವಿವಾದಿತ ನಟ, ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಏಜಾಜ್ ಖಾನ್ ಅವರ ಚುನಾವಣಾ ರಾಜಕೀಯ ಎಂಟ್ರಿಯ ಆರಂಭದಲ್ಲೇ ಮುಗ್ಗರಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆ ಬಯಸಿ ಮುಂಬೈನ ಬೈಕುಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಏಜಾಜ್ ಗೆ ಭಾರಿ ಸೋಲುಂಟಾಗಿದೆ.

ದಕ್ಷಿಣ ಮುಂಬೈನ ಬೈಕುಲಾದಲ್ಲಿ ಸ್ಪರ್ಧಿಸಿದ್ದ ಏಜಾಜ್ ಅವರು ಶಿವಸೇನಾದ ಯಾಮಿನಿ ಯಶ್ವಂತ್ ಜಾಧವ್ ವಿರುದ್ಧ ಸೋಲು ಕಂಡಿದ್ದಾರೆ. ಸೋಲು ನಿರೀಕ್ಷಿತವಾಗಿದ್ದರೂ ನೋಟಾಗಿಂತ ಕಡಿಮೆ ಮತ ಪಡೆದು ಹೀನಾಯ ಸೋಲನ್ನು ಅನುಭವಿಸಿದ್ದಾರೆ.

ಯಾಮಿನಿ ಯಶವಂತ್ 51180 ಮತ(41.03%), ಕಾಂಗ್ರೆಸ್ಸಿನ ಅಣ್ಣಾ ಮಧು ಚವಾಣ್ 24139 ಮತ (19.35%) ಗಳಿಸಿದರೆ, ನೋಟಾ 2791 ಮತ ಬಂದಿವೆ. ಏಜಾಜ್ ಖಾನ್ 2174 ಮಾತ್ರ ಗಳಿಸಲು ಸಾಧ್ಯವಾಗಿದೆ.

Maha Polls 2019: Actor Ajaz Khan had embarrassing defeat to NOTA

ಬಿಗ್ ಬಾಸ್ 7ರ ಸ್ಪರ್ಧಿಯಾಗಿದ್ದ ಏಜಾಜ್ ಖಾನ್ ಅವರು ನಿಷೇಧಿತ ಸೈಕೋಟ್ರೋಪಿಕ್ ಪದಾರ್ಥ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಎಚ್ಚರಿಕೆ ನೀಡಲಾಗಿತ್ತು. ನಂತರ ಮಾದಕ ದ್ರವ್ಯ ಹೊಂದಿದ್ದ ಕಾರಣಕ್ಕೆ ಬಂಧಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ 'ಆಕ್ಷೇಪಾರ್ಹ' ವಿಡಿಯೋಗಳನ್ನು ತಯಾರಿಸಿ ಮತ್ತು ಅಪ್‌ಲೋಡ್ ಮಾಡಿದ ಆರೋಪದಲ್ಲಿ ಮುಂಬೈನ ಸೈಬರ್ ಅಪರಾಧ ಪೊಲೀಸರು ನಟ ಅಜಾಜ್ ಖಾನ್ ಅವರನ್ನು ಬಂಧಿಸಲಾಗಿತ್ತು. 39 ವರ್ಷದ ಏಜಾಜ್ ಖಾನ್, 'ಸಿಂಗಂ ರಿಟರ್ನ್ಸ್', 'ರಕ್ತ ಚರಿತ್ರ', 'ಬುಡ್ಡ ಹೋಗಯಾ ತೇರಾ ಬಾಪ್' ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರು ಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರು

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಮತದಾನ ನಡೆದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿದ್ದವು. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು.

ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ? ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?

ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿದ್ದವು. 288 ಸ್ಥಾನಗಳ ಪೈಕಿ ಬಿಜೆಪಿ 105, ಶಿವಸೇನಾ 56, ಎನ್ಸಿಪಿ 54, ಕಾಂಗ್ರೆಸ್ 44, ಎಂಎನ್ಎಸ್ 1.

English summary
Maha Polls 2019: Former Bigg Boss contestant Ajaz Khan was contesting election from South Mumbai's Byculla as an independent candidate had embarrassing defeat to NOTA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X