ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಕಜಾ ಮುಂಡೆ ಸೋಷಿಯಲ್ ಸ್ಟೇಟಸಿನಿಂದ ಮೋದಿ ಮಾಯ

|
Google Oneindia Kannada News

ಮುಂಬೈ, ಡಿಸೆಂಬರ್ 02: ಕೇಂದ್ರದ ಮಾಜಿ ಸಚಿವ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ, ಬಿಜೆಪಿ ನಾಯಕಿ, ಮಾಜಿ ಸಚಿವೆ ಪಂಕಜಾ ಮುಂಡೆ ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್ ಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೆಗೆದು ಹಾಕಿದ್ದಾರೆ. ಬಿಜೆಪಿ ಸದಸ್ಯ ಎಂಬ ಮಾಹಿತಿಯೂ ಇಲ್ಲವಾಗಿದೆ.

ನವೆಂಬರ್ 28ರಿಂದ ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಚಿತ್ರಣದ ಜೊತೆಗೆ ಪಂಕಜಾ ಕೂಡಾ ಹೊಸ ರೀತಿಯಲ್ಲಿ ಸಾಮಾಜಿಕ ಜಾಲ ತಾಣಾ ಮೂಲಕ ತಮ್ಮ ಬೆಂಬಲಿಗರೊಂದಿಗೆ ಚರ್ಚೆಯಲ್ಲಿದ್ದಾರೆ. ಡಿಸೆಂಬರ್ 12ರಂದು ಎಲ್ಲಕ್ಕೂ ಉತ್ತರ ಸಿಗಲಿದೆ ಎಂದಿದ್ದಾರೆ.

ಡಿಸೆಂಬರ್ 12ರಂದು ಗೋಪಿನಾಥ್ ಮುಂಡೆ ಅವರ 60ನೇ ಜನ್ಮದಿನಾಚರಣೆಯನ್ನು ಬೀಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಲು ಮುಂದಾಗಿದ್ದು, ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Maha BJP leader Pankaja Munde removes WhatsApp image of PM Modi

ಫೇಸ್ ಬುಕ್‍ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದು, "ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಲಿನ ನಂತರ ಭೇಟಿಯಾಗುವಂತೆ ಬೆಂಬಲಿಗರಿಂದ ಹಲವಾರು ಕರೆಗಳು ಹಾಗೂ ಸಂದೇಶಗಳು ಬಂದಿದ್ದರೂ ರಾಜ್ಯದಲ್ಲಿ ಪರಿಸ್ಥಿತಿಯಿಂದ ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ.

"ನೀವು ನನ್ನಲ್ಲಿ ಸಮಯಕ್ಕಾಗಿ ಕೇಳುತ್ತಿದ್ದೀರಿ. ನಾನು ನಿಮಗೆ 8 ರಿಂದ 10 ದಿನ ನೀಡುತ್ತೇನೆ. ಮುಂದೇನು ಮಾಡಬೇಕು, ಎತ್ತ ಸಾಗಬೇಕು, ಜನರಿಗೆ ನಾವೇನು ಮಾಡಬಹುದು, ಜನರೇನು ನಿರೀಕ್ಷಿಸುತ್ತಾರೆ ಎಂದು ನಾವು ಆತ್ಮಾವಲೋಕನ ಮಾಡಬೇಕು'' ಎಂದು ಮರಾಠಿಯಲ್ಲಿ ಬರೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿತಮ್ಮ ಕಸಿನ್ ಧನಂಜಯ್ ಮುಂಡೆ(ಎನ್‍ಸಿಪಿ ಅಭ್ಯರ್ಥಿ) ವಿರುದ್ಧ 30,000 ಮತಗಳ ಅಂತರದಿಂದ ಸೋಲು ಕಂಡಿದ್ದ ಪಂಕಜಾ ಅವರು ರಾಜಕೀಯದಲ್ಲಿ ಹೊಸ ಹೆಜ್ಜೆ ಹಿಡಲಿದ್ದಾರೆ ಎಂಬ ನಿರೀಕ್ಷೆಯಿದೆ. ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿದ್ದರು.

English summary
BJP leader Pankaja Munde, daughter of Maharashtra BJP leader late Gopinath Munde allegedly has removed her Twitter bio and WhatsApp display image which of Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X