ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಲೋಕ ಸೀಟು ಹಂಚಿಕೆ ಅಂತಿಮ: ಬಿಜೆಪಿಗೆ 25, ಶಿವಸೇನೆ 23

|
Google Oneindia Kannada News

ಮುಂಬೈ, ಫೆಬ್ರವರಿ 18: ಮುಂದಿನ ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಸ್ಥಾನ ಹಂಚಿಕೆ ವಿಚಾರವಾಗಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಶಿವಸೇನೆ ಸೋಮವಾರ ಅಂತಿಮ ಒಪ್ಪಂದಕ್ಕೆ ಬಂದಿವೆ. ಮುಂಬೈನಲ್ಲಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ ನಂತರ ಸೀಟು ಹಂಚಿಕೆ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ಒಟ್ಟು 48 ಲೋಕಸಬಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ 25 ಸ್ಥಾನಗಳಿಗೆ ಹಾಗೂ ಶಿವಸೇನೆ 23 ಸ್ಥಾನಗಳಿಗೆ ಸ್ಪರ್ಧೆ ಮಾಡಲಿವೆ. "ಶಿವಸೇನೆ ಮತ್ತು ಅಕಾಲಿ ದಳ ನಮ್ಮ ಹಳೆಯ ಮಿತ್ರರು. ನಮ್ಮ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿದ್ದವು ಎಂಬುದೀಗ ಹಳೆಯ ವಿಚಾರ. ನಮ್ಮ ಮೈತ್ರಿ ಕೂಟವು ಮಹಾರಾಷ್ಟ್ರದಲ್ಲಿ ಕನಿಷ್ಠ 45 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ.

ಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭ

ಉದ್ಧವ್ ಠಾಕ್ರೆ ಮಾತನಾಡಿ, ಶಿವಸೇನೆ ಹಾಗೂ ಬಿಜೆಪಿ ಹಳೆ ಮಿತ್ರ ಪಕ್ಷಗಳು. ಕಳೆದ ಮೂವತ್ತು ವರ್ಷಗಳಿಂದ ಶಿವಸೇನೆ ಹಾಗೂ ಬಿಜೆಪಿಯನ್ನು ಜನರು ನೋಡುತ್ತಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಒಟ್ಟಾಗಿ ಇದ್ದೇವೆ. ಆದರೆ ಈಚಿನ ಐದು ವರ್ಷಗಳಲ್ಲಿ ಕೆಲವು ಗೊಂದಲ ಆಗಿತ್ತು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದಂತೆ ನಾನೀಗಲೂ ಸರಕಾರಕ್ಕೆ ಆಗಾಗ ಮಾರ್ಗದರ್ಶನ ಮಾಡುತ್ತಿದ್ದೇನೆ ಎಂದರು.

Lok Sabha elections 2019: BJP gets 25 seats, Sena 23 in Maharashtra

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 24 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಸ್ಥಾನದಲ್ಲಿ ಸ್ಪರ್ಧಿಸಿತ್ತು. 4 ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲಾಗಿತ್ತ್. ಆದರೆ 2014ರಲ್ಲೇ ನಡೆದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು.

ಚೌಕೀದಾರ ಕಳ್ಳ ಎಂದಿದ್ದು ಈ ಬಾರಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಚೌಕೀದಾರ ಕಳ್ಳ ಎಂದಿದ್ದು ಈ ಬಾರಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಒಟ್ಟು 288 ಸ್ಥಾನಗಳ ಪೈಕಿ 260 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಶಿವಸೇನೆ 282ರಲ್ಲಿ ಸ್ಪರ್ಧಿಸಿದ್ದವು. ಆ ಪೈಕಿ ಬಿಜೆಪಿ 122 ಮತ್ತು ಶಿವಸೇನೆ 63ರಲ್ಲಿ ಜಯ ಸಾಧಿಸಿದ್ದರೆ, ಆ ನಂತರ ಒಟ್ಟಾಗಿ ಸರಕಾರ ರಚಿಸಿದ್ದವು. ಆದರೆ ಅದು ಸಲೀಸಾಗಿ ಸಾಗುತ್ತಿಲ್ಲ.

English summary
Allies BJP and Shiv Sena, often seen taking potshots at each other, finalised a seat-sharing pact for 2019 Lok Sabha elections on Monday. The deal was reached after BJP president Amit Shah met Shiv Sena chief Uddhav Thackeray at his residence in Mumbai.The BJP will contest 25 of the 48 Lok Sabha seats in Maharashtra while Shiv Sena will fight on 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X