ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಸಿಪಿ ಮೊದಲ ಪಟ್ಟಿ ಪ್ರಕಟ, ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ

|
Google Oneindia Kannada News

ಮುಂಬೈ, ಮಾರ್ಚ್ 14: ಲೋಕಸಭೆ ಚುನಾವಣೆ 2019ಗಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರದಂದು ಪ್ರಕಟಿಸಿದೆ.

ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್

ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮೊದಲ ಪಟ್ಟಿಯಲ್ಲಿ 12 ಮಂದಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಪಕ್ಷದ ಎರಡನೇ ಪಟ್ಟಿಯನ್ನು ಶುಕ್ರವಾರದೊಳಗೆ ಬಹಿರಂಗಪಡಿಸುವ ಸಾಧ್ಯತೆಯಿದೆ. ಮೊದಲ ಪಟ್ಟಿಯಲ್ಲಿ ಸ್ವಾಭಿಮಾನಿ ಶೇತ್ಕಾರಿ ಸಂಘಟನೆಗೆ ಒಂದು ಸ್ಥಾನ ನೀಡಲಾಗಿದ್ದು, ಹತ್ಕಾನಂಗಲೆ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗಿದೆ.

52 ವರ್ಷಗಳ ಬಳಿಕ ಚುನಾವಣಾ ರಾಜಕೀಯ ತೊರೆದ ಪವಾರ್ 52 ವರ್ಷಗಳ ಬಳಿಕ ಚುನಾವಣಾ ರಾಜಕೀಯ ತೊರೆದ ಪವಾರ್

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶರದ್ ಪವಾರ್ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಬದಲಿಗೆ ಮೊಮ್ಮಗ ಪಾರ್ಥ್ ಪವಾರ್ ಸ್ಪರ್ಧಿಸಲಿದ್ದಾರೆ ಎಂದು ಈಗಾಗಲೇ ಘೋಷಿಸಿದ್ದಾರೆ. ಪವಾರ್ ಕುಟುಂಬದ ಪ್ರಭಾವಿ ನಾಯಕಿ ಸುಪ್ರಿಯಾ ಸುಳೆ ಅವರು ಈ ಬಾರಿ ಕೂಡಾ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Lok Sabha Election 2019: NCP candidates list out, fields Supriya Sule from Baramati

2019ರ ಲೋಕಸಭೆ ಚುನಾವಣೆಗಾಗಿ ಎನ್ ಸಿಪಿ ಮೊದಲ ಪಟ್ಟಿ
ಬಾರಾಮತಿ : ಸುಪ್ರಿಯಾ ಸುಳೆ
ಥಾಣೆ : ಆನಂದ್ ಪರಾಂಜಪೆ
ಕಲ್ಯಾಣ್ : ಬಾಬಾಜಿ ಪಾಟೀಲ್
ಮುಂಬೈ ಈಶಾನ್ಯ: ಸಂಜಯ್ ದಿನ ಪಾಟೀಲ್
ಕೋಲ್ಹಾಪುರ್ : ಧನಂಜಯ್ ಮಹಾದಿಕ್
ರಾಯ್ ಗಡ್: ಸುನಿಲ್ ತತ್ಕೆ
ಜಲಂಗಾವ್: ಗಿಲಬ್ರಾವ್ ದೇವಕರ್
ಪರ್ಭಾನಿ: ರಾಜೇಶ್ ವಿಟೇಕರ್
ಬುಲ್ಧಾನಾ : ರಾಜೇಂದ್ರ ಶಿಂಗಾನೆ
ಸತಾರಾ: ಉದಯನ್ರಾಜೆ ಭೋಸಲೆ
ಲಕ್ಷದೀಪ್ : ಮೊಹಮ್ಮದ್ ಫೈಜಲ್

ಲೋಕಸಭೆ ಚುನಾವಣೆ: ಎನ್ ಸಿಪಿ-ಕಾಂಗ್ರೆಸ್ ದೋಸ್ತಿ ಖಚಿತಲೋಕಸಭೆ ಚುನಾವಣೆ: ಎನ್ ಸಿಪಿ-ಕಾಂಗ್ರೆಸ್ ದೋಸ್ತಿ ಖಚಿತ

ಮಹಾರಾಷ್ಟ್ರದಲ್ಲಿ 8 ಕೋಟಿ ಮತದಾರರಿದ್ದು, 48 ಸಂಸದರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಲಿದೆ. ಉತ್ತರಪ್ರದೇಶದ ನಂತರ ಅತಿ ಹೆಚ್ಚು ಸಂಸದರನ್ನು ಹೊಂದಿರುವ ರಾಜ್ಯವಾಗಿದೆ.

2014ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಕ್ರಮವಾಗಿ 26 ಹಾಗೂ 21 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕ್ರಮವಾಗಿ 2 ಹಾಗೂ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 23 ಹಾಗೂ ಶಿವಸೇನಾ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

English summary
The Nationalist Congress Party has released its first list of candidates for the Lok Sabha election 2019. NCP supremo and former union minister Sharad Pawar had on Tuesday said that he has decided not to contest Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X