ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರ ಓಡಾಟದ ಮಾಹಿತಿಯನ್ನು ಸ್ಥಳೀಯರೇ ನಕ್ಸಲರಿಗೆ ನೀಡಿದ್ರಾ?

|
Google Oneindia Kannada News

ಗಾಡ್ಛಿರೋಲಿ, ಮೇ 2: ಮಹಾರಾಷ್ಟ್ರದ ಗಾಡ್ಚಿರೋಲಿಯಲ್ಲಿ ಐಇಡಿ ಸ್ಫೋಟಿಸಿ 15 ಜವಾನರು ಮೃತಪಟ್ಟಿದ್ದರು. ಯೋಧರ ಸಾವಿಗೆ ಸ್ಥಳೀಯರೇ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದ ಗಡಿ ಗಾಡ್ಚಿರೋಲಿಯಲ್ಲಿ ಭದ್ರತಾ ಪಡೆಯ ಕಮಾಂಡೋಗಳಿದ್ದ ಪೊಲೀಸರ ವಾಹನವನ್ನು ಸುಧಾರಿತ ಬಾಂಬ್ ಸಾಧನದಿಂದ ಸ್ಫೋಟಿಸಿ ಯೋಧರನ್ನು ಬಲಿತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: ವಾಹನ ಸ್ಫೋಟಿಸಿ ಭದ್ರತಾ ಪಡೆಯ 16 ಯೋಧರ ಹತ್ಯೆ ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: ವಾಹನ ಸ್ಫೋಟಿಸಿ ಭದ್ರತಾ ಪಡೆಯ 16 ಯೋಧರ ಹತ್ಯೆ

ಯೋದರ ಚಟುವಟಿಕೆಗಳ ಬಗ್ಗೆ ಸ್ಥಳೀಯರೇ ನಕ್ಸಲರಿಗೆ ಮಾಹಿತಿ ನೀಡುತ್ತಿದ್ದರು ಎನ್ನುವ ವಿಚಾರ ಬಹಿರಂಗಗೊಂಡಿದೆ.

Locals may have leaked information about QRT jawans’ movement to Naxals

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕ್ಯೂಆರ್‌ಟಿ ಟೀಮ್ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ನಕ್ಸಲರಿಗೆ ಗೊತ್ತಾಗಲು ಹೇಗೆ ಸಾಧ್ಯ. ಸ್ಥಳೀಯರು ನೀಡಿದ ಮಾಹಿತಿಯಿಂದಲೇ ಈ ಕೃತ್ಯ ನಡೆದಿದೆ ಎಂದಿದ್ದಾರೆ. ಮಹಾರಾಷ್ಟ್ರದ ಡಿಜಿಪಿ, ಐಜಿಪಿ, ಎಸ್‌ಪಿ, ಜಿಲ್ಲಾಧಿಕಾರಿ ಸೇರಿದಂತೆ ಅನೇಕರು ಸ್ಫೋಟಗೊಂಡ ಸ್ಥಳಕ್ಕೆ ತೆರಳದ್ದಾರೆ.

ಸ್ಥಳದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ನಕ್ಸಲರು ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ 27 ಯಂತ್ರಗಳಿಗೆ ಮತ್ತು 30 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಳೆದ 18 ದಿನಗಳಲ್ಲಿ 25 ಯೋಧರು ಬಲಿಯಾಗಿದ್ದಾರೆ.

English summary
Day after 15 policemen and a civilian were killed in a daring Naxal attack in Maharashtra's Gadchiroli district, it has been learned that some locals could have helped the Maoists in carrying out strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X