ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಮೊದಲೇ ಸ್ವಯಂ ನಿವೃತ್ತಿ ಘೋಷಿಸಬೇಕಿತ್ತು: ಶಿವಸೇನಾ

|
Google Oneindia Kannada News

ಮುಂಬೈ, ಮಾರ್ಚ್ 23: ಚುನಾವಣಾ ಕಣದಿಂದ ಕೆಳಗಿಳಿಯುವಂತೆ ಪಕ್ಷ ಒತ್ತಡ ಹೇರುವಂತಾಗುವ ಬದಲು ಎಲ್‌ಕೆ ಅಡ್ವಾಣಿ ಅವರು ಸ್ವತಃ ನಿವೃತ್ತಿ ಘೋಷಿಸಬೇಕಿತ್ತು ಎಂದು ಶಿವಸೇನಾ ಹೇಳಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಅಡ್ವಾಣಿ ಅವರು ಪಕ್ಷಕ್ಕೆ ನೀಡಿದ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ ಮತ್ತು ಪಕ್ಷದ ಯುವ ಮುಖಗಳು ಅವರನ್ನು ಆದರ್ಶಪ್ರಾಯ ವ್ಯಕ್ತಿಯನ್ನಾಗಿ ಸದಾ ನೆನಪಿಸುತ್ತವೆ. ಪಕ್ಷದಲ್ಲಿ 75 ವರ್ಷ ಮೀರಿದ ಹಿರಿಯರು ವಿಶ್ರಾಂತಿ ಪಡೆದುಕೊಳ್ಳಬೇಕು ಎಂಬ ಬಿಜೆಪಿ ಹೇಳಿಕೆ ನೀಡಿದಾಗಲೇ ಅಡ್ವಾಣಿ ಅವರು ಅದರ ಸುಳಿವನ್ನು ಪಡೆದುಕೊಳ್ಳಬೇಕಿತ್ತು.

ಆ ಸಂದರ್ಭದಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್‌ರಾಜ್ ಮಿಶ್ರಾ ಮತ್ತು ಇತರೆ ಹಿರಿಯ ಮುಖಂಡರು ಸಕ್ರಿಯ ರಾಜಕಾರಣದಲ್ಲಿ ಇನ್ನು ಉಳಿಯುವುದಿಲ್ಲ ಎಂಬುದು ಅರ್ಥವಾಗುವಂತೆ ಇತ್ತು ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿದೆ.

LK Advani should have retired himself rather that bjp forcing him to step down shiv sena

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ನಿವೃತ್ತಿಯಾಗಲೇಬೇಕು. ಆದರೆ, ಹೆಮ್ಮೆಯೊಂದಿಗೆ ನಿವೃತ್ತರಾಗುವುದು ಒಳಿತು ಎಂದು ಸಂಪಾದಕೀಯ ಹೇಳಿದೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಜತೆಗೆ ಅದ್ವಾಣಿ ಅವರನ್ನು ತೀವ್ರವಾಗಿ ಪ್ರಶಂಸಿಸಿದೆ. ಅಡ್ವಾಣಿ ಮತ್ತು ವಾಜಪೇಯಿ ಅವರು ಪಕ್ಷದ ರಾಮ ಮತ್ತು ಲಕ್ಷ್ಮಣರಂತೆ ಇದ್ದರು. ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ವಾಜಪೇಯಿ ಅವರ ಮರಣಾನಂತರ ಅಡ್ವಾಣಿ ಅವರು ಕ್ಯಾಮೆರಾ ಕಣ್ಣಿನಿಂದ ಹಿಂದೆ ಸರಿದರು. ಈ ಇಬ್ಬರ ಸ್ಥಾನವನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಂದರು ಎಂದು ಹೇಳಿದೆ.

ಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆ ಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆ

ಅಡ್ವಾಣಿ ಅವರನ್ನು ಭಾರತದ ರಾಜಕೀಯದ ಭೀಷ್ಮ ಎಂದು ಹೋಲಿಸಿರುವ ಪತ್ರಿಕೆ, ಅವರ ಮಾರ್ಗದರ್ಶನ ಶಿವಸೇನಾಕ್ಕೆ ಯಾವಾಗಲೂ ಅಗತ್ಯವಾಗಿದೆ ಎಂದು ಹೇಳಿದೆ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಶಿವಸೇನಾ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ತನ್ನ ಹಿರಿಯ ನಾಯಕರಾದ ಸೀತಾರಾಂ ಕೇಸರಿ, ನರಸಿಂಹ ರಾವ್, ಮನಮೋಹನ್ ಸಿಂಗ್ ಅವರನ್ನು ನಡೆಸಿಕೊಂಡ ಬಗೆಯನ್ನು ಟೀಕಿಸಿದೆ. ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡಿದ ನರಸಿಂಹ ರಾವ್ ಅವರನ್ನು ಅವರ ಸಾವಿನ ನಂತರ ಅವಮಾನಿಸಲಾಯಿತು. ಮನಮೋಹನ್ ಸಿಂಗ್ ಅವರ ಸುಗ್ರೀವಾಜ್ಞೆ ಪತ್ರವನ್ನು ರಾಹುಲ್ ಗಾಂಧಿ ಹರಿದು ಹಾಕಿದ್ದರು ಎಂದು ಅದು ಆರೋಪಿಸಿದೆ.

English summary
Shiv Sena in its mouthpiece 'Saamana' said that, BJP senior leader LK Advani should have retired himself with pride.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X