ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಮಹಾರಾಷ್ಟ್ರ ರಾಜಕೀಯ ಏರಿಳಿತ: ದಿನವೆಲ್ಲಾ ನಡೆದಿದ್ದು ಏನೇನು?

|
Google Oneindia Kannada News

ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಸಂಭವಿಸಿದ್ದು, ಇಂದು ಬೆಳ್ಳಂಬೆಳಿಗ್ಗೆ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆ ಮಾಡಿವೆ.

ನಿನ್ನೆ ಸಂಜೆಯಷ್ಟೆ ಎನ್‌ಸಿಪಿ-ಶೀವಸೇನಾ-ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದವು. ಅದರಂತೆ ಉದ್ಧವ್ ಠಾಕ್ರೆಯನ್ನು ಸಿಎಂ ಎಂದು ಸಹ ಹೆಸರಿಸಲಾಗಿತ್ತು. ಆದರೆ ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿಜೆಪಿ-ಎನ್‌ಸಿಪಿ ಬಂಡಾಯ ಶಾಸಕರೊಂದಿಗೆ ಸೇರಿ ಬೆಳ್ಳಂಬೆಳಿಗ್ಗೆ ಸರ್ಕಾರ ರಚನೆ ಮಾಡಿಯೇ ಬಿಟ್ಟಿವೆ.

ನಿನ್ನೆ ರಾತ್ರಿ ಸಭೆ ನಡೆಸಿ ನಿದ್ದೆಗೆ ಹೋಗಿದ್ದ ಶಿವಸೇನಾ-ಕಾಂಗ್ರೆಸ್‌ ಮುಖಂಡರು ಇಂದು ಬೆಳಿಗ್ಗೆ ಏಳುವ ಹೊತ್ತಿಗೆ ಸರ್ಕಾರ ರಚನೆ ಆಗಿಬಿಟ್ಟಿದೆ. ಶರದ್ ಪವಾರ್ ಅಳಿಯ ಎನ್‌ಸಿಪಿಯ ಕೆಲವು ಶಾಸಕರನ್ನು ತನ್ನೊಂದಿಗೆ ಕರೆದೊಯ್ದು ಬಿಜೆಪಿಯೊಂದಿಗೆ ಕೈ ಮಿಲಾಯಿಸಿದ್ದಾರೆ.

LIVE Update: Maharashtra Polictical Developments

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ಣವೀಸ್ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರವಾಣ ವಚನ ಸ್ವೀಕರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಕ್ಷಣ-ಕ್ಷಣದ ಮಾಹಿತಿ 'ಒನ್‌ಇಂಡಿಯಾ ಕನ್ನಡ'ದಲ್ಲಿ.

Newest FirstOldest First
3:45 PM, 23 Nov

ಶಿವಸೇನಾ ಮುಖಂಡ ಸಂಜಯ್ ರಾವತ್ ಮಾತನಾಡಿ, 'ಅಜಿತ್ ಪವಾರ್ ಜೊತೆ ಹೋಗಿದ್ದ ಐದು ಶಾಸಕರು ಈಗಾಗಲೇ ಎನ್‌ಸಿಪಿ ಗೆ ವಾಪಸ್ ಬಂದಿದ್ದಾರೆ' ಎಂದಿದ್ದಾರೆ. 'ಅಜಿತ್ ಪವಾರ್ ಅವರೇ ಎನ್‌ಸಿಪಿ ಗೆ ವಾಪಸ್ ಆಗುವ ಸಂಭವ ಇದೆ' ಎಂದೂ ಅವರು ಹೇಳಿದ್ದಾರೆ.
1:23 PM, 23 Nov

ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮಾತನಾಡಿ, 'ಅವರು (ಬಿಜೆಪಿ) ಶೀವಸೇನಾ ವನ್ನು ಮುರಿಯುವ ಪ್ರಯತ್ನ ಮಾಡಲಿ. ಮಹಾರಾಷ್ಟ್ರದ ಜನ ಎಲ್ಲವನ್ನೂ ನೋಡುತ್ತಿದ್ದಾರೆ, ಅವರು ನಿದ್ದೆ ಮಾಡುತ್ತಿಲ್ಲ' ಎಂದರು.
1:20 PM, 23 Nov

ತನಿಖಾ ಸಂಸ್ಥೆಗಳ ಭಯದಿಂದಾಗಿ ಆತ (ಅಜಿತ್ ಪವಾರ್) ಬಿಜೆಪಿ ಜೊತೆ ಕೈ ಸೇರಿಸಿದರಾ ಎಂಬುದು ಗೊತ್ತಿಲ್ಲ. ನನ್ನ ಮೂಲಗಳ ಪ್ರಕಾರ 10-12 ಎನ್‌ಸಿಪಿ ಶಾಸಕರು ರಾಜಭವನಕ್ಕೆ ಹೋಗಿದ್ದರು. ಅದರಲ್ಲಿ ಮೂವರು ಈಗಾಗಲೇ ನನ್ನ ಜೊತೆ ಈ ಸುದ್ದಿಗೋಷ್ಠಿಯಲ್ಲಿದ್ದಾರೆ- ಶರದ್ ಪವಾರ್
1:12 PM, 23 Nov

ಸಂಜೆ ನಾಲ್ಕು ಗಂಟೆಗೆ ಎನ್‌ಸಿಪಿ ಶಾಸಕರ ಸಭೆ ಕರೆದಿದ್ದು ಸಭೆಯಲ್ಲಿ ಎನ್‌ಸಿಪಿ ಹೊಸ ಶಾಸಕಾಂಗ ನಾಯಕನ್ನು ಆಯ್ಕೆ ಮಾಡಿಕೊಳ್ಳಲಿದೆ. ಜೊತೆಗೆ ನಿಯಮದ ಅನ್ವಯ ಅಜಿತ್ ಪವಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು-ಶರದ್ ಪವಾರ್
1:08 PM, 23 Nov

ರಾಜ್ಯಪಾಲರು ಅವರಿಗೆ (ಬಿಜೆಪಿ-ಎನ್‌ಸಿಪಿ ಬಂಡಾಯ ಶಾಸಕರು) ಬಹುಮತ ಸಾಬೀತು ಪಡಿಸಲು ಸಮಯ ನೀಡಿದೆ. ಅಂದು ಅವರು ಬಹುಮತ ಸಾಬೀತು ಮಾಡಲು ವಿಫಲರಾಗುತ್ತಾರೆ. ಆ ನಂತರ ನಾವು ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುತ್ತೇವೆ- ಶರದ್ ಪವಾರ್, ಎನ್‌ಸಿಪಿ ಮುಖಂಡ
1:03 PM, 23 Nov

ಎಲ್ಲ ಪಕ್ಷಗಳು ತಮ್ಮ ಶಾಸಕರ ಸಹಿಯನ್ನು ತೆಗೆದುಕೊಂಡಿರುತ್ತವೆ. ಅದೇ ರೀತಿಯ ಪಟ್ಟಿಯೊಂದನ್ನು ಇಟ್ಟುಕೊಂಡು ಅಜಿತ್ ಪವಾರ್ ರಾಜ್ಯಪಾಲರ ಬಳಿ ಹೋಗಿದ್ದಾರೆ: ಶರದ್ ಪವಾರ್
12:56 PM, 23 Nov

ಏನೋ ಮಾತನಾಡುವುದು ಇದೆಯೆಂದು ಹೇಳಿ ಕರೆಸಿಕೊಂಡು ನಮ್ಮನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿ ಪ್ರಮಾಣ ವಚನ ಕಾರ್ಯಕ್ರಮ ಮಾಡಲಾಯಿತು. ನಾನು ಹೊರಬಂದ ಕೂಡಲೇ ಶರದ್ ಪವಾರ್ ಮನೆಗೆ ಧಾವಿಸಿ ಬಂದೆ. ನಾನು ಶರದ್ ಪವಾರ್ ಪರ ಇದ್ದೇನೆ- ರಾಜೇಂದ್ರ ಶಿಂಘಾನೆ, ಎನ್‌ಸಿಪಿ ಶಾಸಕ
Advertisement
12:54 PM, 23 Nov

ಯಾವ ಶಾಸಕರು ಅಜಿತ್ ಪವಾರ್ ಜೊತೆ ಹೋಗಿದ್ದಾರೋ ಅಥವಾ ಹೋಗಲಿಚ್ಚಿಸಿದ್ದಾರೋ ಅವರಿಗೆ ತಿಳಿಸಬಯಸುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆ ಎಂಬುದಿದೆ. ಅದನ್ನು ಹೇರಿದಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ- ಶರದ್ ಪವಾರ್
12:52 PM, 23 Nov

ನಮ್ಮ ಬಳಿ ಸಂಖ್ಯೆ ಇದ್ದು, ಕೆಲವು ಪಕ್ಷೇತರರು ಸಹ ನಮಗೆ ಬೆಂಬಲ ನೀಡುತ್ತಿದ್ದಾರೆ ಹಾಗಾಗಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ. ಎನ್‌ಸಿಪಿ-ಬಿಜೆಪಿ ಮೈತ್ರಿಗೆ ನಮ್ಮ ಒಪ್ಪಿಗೆ ಇಲ್ಲ. ಅದು ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ-ಶರದ್ ಪವಾರ್
12:51 PM, 23 Nov

ಮಹಾರಾಷ್ಟ್ರ ರಾಜಕರಾಣದಲ್ಲಿ ಮತ್ತೆ ತಿರುವು ಪಡೆದುಕೊಳ್ಳುತ್ತಿದೆ. ಶೀವಸೇನಾ-ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬಳಿ ಸಂಖ್ಯೆ ಇದ್ದು, ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
12:26 PM, 23 Nov

ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಎನ್‌ಸಿಪಿ ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ.
11:55 AM, 23 Nov

ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, 'ಹಿಂದುತ್ವದ ಚಳವಳಿಯನ್ನು ಇಬ್ಭಾಗ ಮಾಡಲು ಯತ್ನಿಸಿದರೆ ನಿಮ್ಮನ್ನೇ ಇಬ್ಭಾಗ ಮಾಡಲಾಗುವುದು' ಎಂದು ಹೇಳಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿ ಅವರ ಟ್ವೀಟ್ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆಯೇ ಎಂದು ವಿಶ್ಲೇಷಿಸಲಾಗುತ್ತಿದ್ದು. ಎನ್‌ಸಿಪಿಯು ಬಿಜೆಪಿಯ ಹಿಂದುತ್ವದ ವಿರುದ್ಧ ನೀಡಿದ್ದ ಹೇಳಿಕೆಗಳ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಈ ಟ್ವೀಟ್ ಮಾಡಿದ್ದಾರೆ.
Advertisement
11:25 AM, 23 Nov

ಸಂಜೆ 4:30 ಕ್ಕೆ ಎನ್‌ಸಿಪಿ ಶಾಸಕರ ಸಭೆಯನ್ನು ಎನ್‌ಸಿಪಿ ಮುಖಂಡ ಶರದ್ ಪವಾರ್ ಕರೆದಿದ್ದಾರೆ.
11:14 AM, 23 Nov

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಕುಟುಂಬ ಮತ್ತು ಪಕ್ಷ ಇಭ್ಬಾಗವಾಗಿದೆ' ಎಂದು ಬರೆದುಕೊಂಡಿದ್ದಾರೆ. ಸುಪ್ರಿಯಾ ಸುಳೆ ಸಹ ಪವಾರ್ ಕುಟುಂಬಕ್ಕೆ ಸೇರಿದವರಾಗಿದ್ದು, ಶರದ್ ಪವಾರ್ ಪುತ್ರಿಯೇ ಆಗಿದ್ದಾರೆ.
11:11 AM, 23 Nov

ಬಿಜೆಪಿಯು ಈಗ ಕೈ ಜೋಡಿಸಿರುವ ಅಜಿತ್ ಪವಾರ್ ಮೇಲೆ ಇಡಿ ಪ್ರಕರಣ ದಾಖಲಿಸಿದೆ. ಅಕ್ರಮ ಆಸ್ತಿ, ಹಣ ವರ್ಗಾವಣೆ ಕೇಸುಗಳು ಅಜಿತ್ ಪವಾರ್ ಮೇಲೆ ಇವೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಅಜಿತ್ ಪವಾರ್ ಅನ್ನು ಮೈತ್ರಿಗೆ ಒಪ್ಪಿಸಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
11:10 AM, 23 Nov

ಮಹಾರಾಷ್ಟ್ರ ಬೆಳವಣಿಗೆ ಬಗ್ಗೆ ಶರದ್ ಪವಾರ್ ಅವರಿಗೆ ಯಾವುದೇ ತಿಳುವಳಿಕೆ ಇಲ್ಲ ಎಂದು ಕಾಂಗ್ರೆಸ್ ನಂಬಿದೆ. ಅವರು ತಮ್ಮ ರಾಜಕೀಯ ಇತಿಹಾಸದ ಮೇಲೆ ಕಪ್ಪು ಚುಕ್ಕೆ ಇಟ್ಟುಕೊಳ್ಳುವಂತೆ ಕೆಲಸ ಮಾಡುವುದಿಲ್ಲವೆಂದು ಕಾಂಗ್ರೆಸ್‌ಗೆ ಗೊತ್ತಿದೆ: ತಾರೀಖ್ ಅನ್ವರ್, ಕಾಂಗ್ರೆಸ್ ಮುಖಂಡ
11:07 AM, 23 Nov

ಕಾಂಗ್ರೆಸ್ ಮುಖಂಡರು ಮುಂಬೈನಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮುಂಬೈನ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದಾರೆ.
11:03 AM, 23 Nov

'ನಾವು ಹಾಜರಾತಿಗೆಂದು ಸಹಿ ಮಾಡಿ ಕೊಟ್ಟಿದ್ದ ಪತ್ರವನ್ನೇ ರಾಜ್ಯಪಾಲರಿಗೆ ನೀಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಮ್ಮ ಶಾಸಕರು ಅಜಿತ್ ಪವಾರ್ ಜೊತೆಗೆ ಇಲ್ಲ' ಎಂದು ಎನ್‌ಸಿಪಿ ಮುಖಂಡ ನವಾಬ್ ಮಲ್ಲಿಕ್
10:54 AM, 23 Nov

ನಮ್ಮ ಮೈತ್ರಿಗೆ (ಬಿಜೆಪಿ-ಶಿವಸೇನಾ) ಸ್ಪಷ್ಟ ಬಹುಮತ ನೀಡಲಾಗಿತ್ತು. ಆದರೆ ಶೀವಸೇನೆಯು ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಯಿತು. ಹೀಗಾಗಿ ರಾಷ್ಟ್ರಪತಿ ಆಡಳಿತ ಹೇರಿಕೆ ಆಗಿತ್ತು. ಆದರೆ ಈಗ ಸ್ಥಿರ ಸರ್ಕಾರ ರಚನೆ ಮಾಡಲೆಂದು ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ- ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್
10:47 AM, 23 Nov

ನವೆಂಬರ್ 30 ಕ್ಕೆ ಬಹುಮತ ಸಾಬೀತು ಮಾಡುವುದಾಗಿ ದೇವೇಂದ್ರ ಫಡ್ಣವೀಸ್ ಹೇಳಿದ್ದಾರೆ.
10:44 AM, 23 Nov

ಬಿಜೆಪಿ ಮತ್ತು ಅಜಿತ್ ಪವಾರ್ ಬೆನ್ನಿಗೆ ಚೂರಿ ಚುಚ್ಚಿದ್ದಾರೆ ಎಂದು ಶಿವಸೇನಾ ಹೇಳಿದೆ. ಶಿವಸೇನಾದ ಸಂಜಯ್ ರಾವತ್ ಹೇಳಿದ್ದಾರೆ. ಎನ್‌ಸಿಪಿ-ಶೀವಸೇನಾ-ಕಾಂಗ್ರೆಸ್‌ ನ ಎಲ್ಲ ಸಭೆಗಳಲ್ಲಿ ಹಾಜರಿದ್ದ ಅಜಿತ್ ಪವಾರ್ ಕೊನೆಗೆ ನಮಗೆ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು.
10:40 AM, 23 Nov

ಎನ್‌ಸಿಪಿಯು ಸರ್ಕಾರ ರಚನೆಗೆ ಬೆಂಬಲ ನೀಡಿರುವ ಬಗ್ಗೆ ರಾಜ್ಯಪಾಲರು ಪತ್ರ ಪಡೆದಿದ್ದಾರಾ? ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಿ ಬಿಜೆಪಿ-ಎನ್‌ಸಿಪಿ ಬಂಡಾಯ ಶಾಸಕರಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
10:28 AM, 23 Nov

ಮಹಾರಾಷ್ಟ್ರದಲ್ಲಿ ಪಕ್ಷಗಳ ಬಲಾಬಲ ಇಂತಿದೆ. ಬಿಜೆಪಿ-105, ಎನ್‌ಸಿಪಿ-54, ಶಿವಸೇನಾ- 56, ಕಾಂಗ್ರೆಸ್- 44, ಇತರೆ-29. ಸರ್ಕಾರ ರಚನೆ ಮಾಡಲು 145 ಶಾಸಕರ ಬಲ ಬೇಕಿದ್ದು. ಸರ್ಕಾರ ರಚಿಸಿರುವ ಬಿಜೆಪಿ-ಎನ್‌ಸಿಪಿ ಬಂಡಾಯ ಶಾಸಕರ ಬಳಿ ಈಗ 132 ಸಂಖ್ಯೆ ಇದೆ.
10:24 AM, 23 Nov

ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿಯ ಶರದ್ ಪವಾರ್ ಅವರು ಮಧ್ಯಾಹ್ನ 12:30 ಕ್ಕೆ ಸುದ್ದಿಗೋಷ್ಠಿ ಮಾಡಲಿದ್ದಾರೆ.
10:19 AM, 23 Nov

ಬಿಜೆಪಿಯೊಂದಿಗೆ ಸರ್ಕಾರ ರಚಿಸಿಸುವ ನಿರ್ಣಯ ಅಜಿತ್ ಪವಾರ್ ವೈಯಕ್ತಿಕವಾದುದು ಅದಕ್ಕೂ ಎನ್‌ಸಿಪಿಗೂ ಸಂಬಂಧವಿಲ್ಲ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
10:16 AM, 23 Nov

ಅಜಿತ್ ಪವಾರ್ ಜೊತೆ ಎನ್‌ಸಿಪಿಯ 22 ಜನ ಶಾಸಕರು ಇದ್ದಾರೆ. ಬಿಜೆಪಿಯು 105 ಶಾಸಕರ ಬಲವನ್ನು ಹೊಂದಿದೆ. ಬಹುಮತಕ್ಕೆ 145 ಶಾಸಕರ ಅವಶ್ಯಕತೆ ಇದ್ದು, ಬಿಜೆಪಿಯು ಕೆಲವೇ ದಿನಗಳಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾಗಿದೆ.
10:14 AM, 23 Nov

ನಿನ್ನೆ ರಾತ್ರಿಯೇ ಬಿಜೆಪಿಯು ರಾಜ್ಯಪಾಲರನ್ನು ಸಂಪರ್ಕಿಸಿ ಸರ್ಕಾರ ರಚನೆಗೆ ಅವಕಾಶ ಕೋರಿದೆ. ಅಂತೆಯೇ ರಾಜ್ಯಪಾಲರು ರಾಷ್ಟ್ರಪತಿ ಕಾರ್ಯಾಲಯ ಸಂಪರ್ಕಿಸಿ, ಇಂದು ಬೆಳಿಗ್ಗೆ 5:15 ಕ್ಕೆ ಮಹರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯಮಾಡಲಾಗಿದೆ.
10:13 AM, 23 Nov

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ಣವೀಸ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

English summary
Live updates of Maharashtra political developments. Shockingly NCP-BJP make alliance and form government today morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X