ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ

|
Google Oneindia Kannada News

ಮುಂಬೈ, ಜನವರಿ 17: ಹೆಸರಾಂತ ಭಾರತೀಯ ಶಾಸ್ತ್ರೀಯ ಸಂಗೀತಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರು ಕೊನೆಯುಸಿರೆಳೆದಿದ್ದಾರೆ. ಭಾನುವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

"ಇಂದು ಬೆಳಗ್ಗೆ ಅವರು ಚೆನ್ನಾಗಿದ್ದರು. ಮನೆಯಲ್ಲಿ ಮಾವನವರನ್ನು ನೋಡಿಕೊಳ್ಳಲು 24 ಗಂಟೆಗಳ ನರ್ಸ್ ಒಬ್ಬರಿರುತ್ತಾರೆ. ಭಾನುವಾರ ಮಧ್ಯಾಹ್ನ 12: 37ರ ಸುಮಾರಿಗೆ ಮಸಾಜ್ ಸಮಯದಲ್ಲಿ ಅವರು ವಾಂತಿ ಮಾಡಿದರು ನಂತರ ಕಣ್ಣು ಕತ್ತಲೆ ಕಟ್ಟಿದಂತೆ ನಿಧಾನವಾಗಿ ಕಣ್ಮುಚ್ಚಿದರು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು ಆದರೆ, ಅಷ್ಟರಲ್ಲಿ ನಮ್ಮನೆಲ್ಲ ಅಗಲಿದ್ದರು'' ಎಂದು ಉಸ್ತಾದ್ ಮುಸ್ತಫಾ ಅವರ ಸೊಸೆ ನಮ್ರತಾ ಗುಪ್ತಾ ಖಾನ್ ಪಿಟಿಐಗೆ ತಿಳಿಸಿದ್ದಾರೆ.

ರಾಂಪುರ್-ಸಹಸ್ವಾನ್ ಘರಾನಾಗೆ ಸೇರಿದ ಉಸ್ತಾದ್ ಮುಸ್ತಫಾ ಅವರಿಗೆ 199ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ, 2003ರಲ್ಲಿ ಸಂಗೀತ ನಾಟಕ ಅಕಾಡೆಮಿ ಮತ್ತು 2018ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ. ಉತ್ತರ ಪ್ರದೇಶದ ಬದಾಯುನ್‌ನಲ್ಲಿ ಜನಿಸಿದ ಅವರು ಸಂಗೀತಗಾರರ ಕುಟುಂಬದಿಂದ ಬಂದವರು. ಇನಾಯತ್ ಹುಸೇನ್ ಖಾನ್ ಅವರ ಪುತ್ರಿ ಉಸ್ತಾದ್ ಮುಸ್ತಫಾ ಅವರ ತಾಯಿ.

Legendary musician Ustad Ghulam Mustafa Khan dies

ಬರೋಡಾ ದರ್ಬಾರ್ ಗಾಯಕರಾಗಿದ್ದ ಉಸ್ತಾದ್ ಫಿದಾ ಹುಸೇನ್ ಖಾನ್, ನಾಸಿರ್ ಹುಸೇನ್ ಖಾನ್ ಅವರಿಂದ ಮೊದಲಿಗೆ ಸಂಗೀತ ಪಾಠ ಕಲಿತ ಮುಸ್ತಫಾ ಅವರು ರಾಂಪುರ, ಗ್ವಾಲಿಯರ್ ಹಾಗೂ ಸಹಸ್ವಾನ್ ಘರಾನಾದಲ್ಲಿ ಗುರುತಿಸಿಕೊಂಡರು.

ಹಲವು ದಿಗ್ಗಜರಿಗೆ ಗುರು:
ಆಶಾ ಭೋಂಸ್ಲೆ, ಮನ್ನಾಡೆ, ವಹೀದಾ ರೆಹಮಾನ್, ಗೀತಾ ದತ್, ಎ.ಆರ್ ರೆಹಮಾನ್, ಹರಿಹರನ್, ಶಾನ್, ಸೋನು ನಿಗಮ್, ಸಾಗರಿಕಾ, ಅಲಿಷಾ ಚಿನಯ್, ಶಿಲ್ಪಾ ರಾವ್ ಮುಂತಾದವರಿಗೆ ನೇರವಾಗಿ ಕೆಲವರಿಗೆ ಪರೋಕ್ಷವಾಗಿ ಮಾನಸಿಕ ಗುರುವಾಗಿದ್ದರು.

ಪದ್ಮಭೂಷಣ ಮುಷ್ತಾಕ್ ಹುಸೇನ್ ಖಾನ್ ಅವರ ಪುತ್ರಿ ಅಮಿನಾ ಬೇಗಂ ಅವರನ್ನು ವರಿಸಿದ ಮುಸ್ತಫಾ ಅವರಿಗೆ ನಾಲ್ವರು ಪುತ್ರರು ಮುರ್ತಜಾ, ಮುಸ್ತಫಾ, ಖಾದಿರ್, ರಬ್ಬಾನಿ ಹಾಗೂ ಹಸನ್ ಎಲ್ಲರೂ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಉಸ್ತಾದ್ ಮುಸ್ತಫಾ ಅವರ ನಿಧನದ ವಾರ್ತೆಗೆ ಭಾರತರತ್ನ ಲತಾ ಮಂಗೇಶ್ಕರ್ ಅವರು ಕಂಬನಿ ಮಿಡಿದ್ದಾರೆ. ವಿಶಾಲ್ ದಡ್ಲಾನಿ, ಎ. ಆರ್ ರೆಹಮಾನ್, ಉಸ್ತಾದ್ ಅಮ್ಜದ್ ಅಲಿ ಖಾನ್ ಮುಂತಾದವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಂತಾಕ್ರೂಜ್(ಪಶ್ಚಿಮ) ಕಬರಿಸ್ತಾನದಲ್ಲಿ ಇಂದು ಸಂಜೆ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

English summary
Legendary Indian classical musician Ustad Ghulam Mustafa Khan died at the age of 90 today. Lata Mangeshkar, AR Rahman and Vishal Dadlani offered their condolences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X