ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾರ್ಥ ಬಿಡಿ, ಬಿಜೆಪಿ ಶಿವಸೇನೆಗೆ ಭಾಗವತ್ ಕಿವಿ ಮಾತು

|
Google Oneindia Kannada News

ಮುಂಬೈ,ನವೆಂಬರ್ 19: ಸ್ವಾರ್ಥ ಒಳ್ಳೆಯದಲ್ಲ, ಇದರಿಂದ ಎರಡೂ ಪಕ್ಷಗಳಿಗೂ ನಷ್ಟವಾಗಲಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೂಚನೆ ನೀಡಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನುದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ.

ನಾಗಪುರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, "ಸ್ವಾರ್ಥ ಅತ್ಯಂತ ಕೆಟ್ಟದ್ದು, ಅದು ಎಲ್ಲರಿಗೂ ಗೊತ್ತು. ಆದರೆ ಕೆಲವು ಮಂದಿ ಮಾತ್ರ ಅದನ್ನು ತ್ಯಜಿಸುತ್ತಾರೆ, ಹಲವರು ಅದನ್ನೇ ಅಳವಡಿಸಿಕೊಳ್ಳುತ್ತಾರೆ" ಎಂದು ಪರೋಕ್ಷವಾಗಿ ಬಿಜೆಪಿ, ಶಿವಸೇನೆಗೆ ತಿವಿದಿದ್ದಾರೆ.

ಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿದ ಶಿವಸೇನಾಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿದ ಶಿವಸೇನಾ

ಎರಡೂ ಪಕ್ಷಗಳ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು, "ಒಂದೇ ವಿಷಯಕ್ಕೆ ಇಬ್ಬರು ಜಗಳವಾಡಿದರೆ ಅದು ಇಬ್ಬರಿಗೂ ನಷ್ಟವಾಗುತ್ತದೆ. ಅದು ಗೊತ್ತಿದ್ದೂ ಆ ದಾರಿಯನ್ನು ತುಳಿಯುತ್ತಾರೆ ಎಂದರು. ಎರಡೂ ಪಕ್ಷಗಳು ಹಿಂದುತ್ವದ ಆಧಾರದ ಮೇಲೆ ಹುಟ್ಟಕೊಂಡಿವೆ.

ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಬಾರದು ಎಂದು ಹೇಳಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 102 ಸ್ಥಾನ ಗೆದ್ದಿದ್ದರೆ, ಶಿವಸೇನೆ 56 ಸ್ಥಾನಗಳನ್ನು ಗೆದ್ದಿದೆ.

Leave Selfishness, Talks To BJP, Shiv Sena

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಬಿಜೆಪಿ-ಶಿವಸೇನಾ, ಬಳಿಕ ಅಧಿಕಾರ ಹಂಚಿಕೆ ಬಿಕ್ಕಟ್ಟಿನಿಂದಾಗಿ ಮೈತ್ರಿ ಕಳೆದುಕೊಂಡಿವೆ. ಸದ್ಯ ಕಾಂಗ್ರೆಸ್, ಎನ್ ಸಿಪಿ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದರೂ ಅದು ಯಶಸ್ವಿಯಾಗಿಲ್ಲ.

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು, ಇನ್ನೇನು ಸರ್ಕಾರ ರಚಿಸಿಯೇ ಬಿಟ್ವಿ ಎಂಬ ಹುಮ್ಮಸ್ಸಿನಲ್ಲಿದ್ದ ಶಿವಸೇನೆಗೆ ಶರದ್ ಪವಾರ್ ಹೇಳಿಕೆ ಭಾರೀ ನಿರಾಸೆ ಉಂಟು ಮಾಡಿದೆ. ಈಗ ತನ್ನ ಸ್ಥಿತಿಗೆ ಬಿಜೆಪಿಯೇ ಮೂಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.

English summary
RSS chief Mohan Bhagwat has warned that it is not good selfishness and will result in loss to both parties. Both the Shiv Sena and the BJP have made the statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X