ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಜಾವೇದ್‌ ಅಖ್ತರ್‌ಗೆ ಲೀಗಲ್ ನೋಟಿಸ್

|
Google Oneindia Kannada News

ಮುಂಬೈ, ಸೆಪ್ಟೆಂಬರ್ 22: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲಗಲಿ ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ವಕೀಲರೊಬ್ಬರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಒಂದು ವೇಳೆ ಅವರು ನೋಟಿಸ್ ಸ್ವೀಕರಿಸಿದ ಏಳು ದಿನಗಳಲ್ಲಿ "ಬೇಷರತ್ತಾಗಿ ಲಿಖಿತ ಕ್ಷಮೆ ಕೇಳಲು" ನಿರಾಕರಿಸಿದರೆ ಅಖ್ತರ್‌ ಅವರ ವಿರುದ್ಧ 100 ಕೋಟಿ ರೂಪಾಯಿಗಳ ಕ್ರಿಮಿನಲ್ ಮಾನನಷ್ಟವನ್ನು ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

ಮಾನನಷ್ಟ ಮೊಕದ್ದಮೆ; ಹೈಕೋರ್ಟಲ್ಲಿ ನಟಿ ಕಂಗನಾಗೆ ಹಿನ್ನಡೆ ಮಾನನಷ್ಟ ಮೊಕದ್ದಮೆ; ಹೈಕೋರ್ಟಲ್ಲಿ ನಟಿ ಕಂಗನಾಗೆ ಹಿನ್ನಡೆ

ಜಾವೇದ್ ಅಖ್ತರ್(76) ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಆರ್ ಎಸ್ ಎಸ್ ಅನ್ನು ತಾಲಿಬಾನ್ ಗೆ ಹೋಲಿಸಿದ್ದರು. 'ತಾಲಿಬಾನಿಗಳು ಅನಾಗರಿಕರು, ಅವರ ಕೆಲಸಗಳು ಖಂಡನೀಯ, ಆದರೆ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷದ್ ಮತ್ತು ಭಜರಂಗದಳವನ್ನು ಬೆಂಬಲಿಸುವ ಎಲ್ಲರೂ ಒಂದೇ' ಎಂದು ಹೇಳಿಕೆ ನೀಡಿದ್ದ ಸಿನಿಮಾ ಲೇಖಕ ಜಾವೇದ್ ಅಖ್ತರ್ ಅವರು ಕ್ಷಮೆ ಕೇಳಬೇಕು ಎಂದು ಹೋರಾಟ ಆರಂಭವಾಗಿದೆ.

Lawyer Sends Legal Notice To Javed Akhtar

ಜಾವೇದ್ ಅಖ್ತರ್‌ ಅವರು ಆರ್ ಎಸ್ಎಸ್ ವಿರುದ್ಧ ನೀಡಿದ ಹೇಳಿಕೆಗಳನ್ನು ಹಿಂಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ವಕೀಲ ಸಂತೋಷ್ ದುಬೆ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ತಾಲಿಬಾನಿಗಳು ಅನಾಗರಿಕರು, ಅವರ ಕೆಲಸಗಳು ಖಂಡನೀಯ, ಆದರೆ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷದ್ ಮತ್ತು ಭಜರಂಗದಳವನ್ನು ಬೆಂಬಲಿಸುವ ಎಲ್ಲರೂ ಒಂದೇ' ಎಂದು ಹೇಳಿಕೆ ನೀಡಿದ್ದ ಗೀತ ರಚನೆಕಾರ, ಸಿನಿಮಾ ಲೇಖಕ ಜಾವೇದ್ ಅಖ್ತರ್ ಅವರು ಕ್ಷಮೆ ಕೇಳಬೇಕು ಎಂದು ಹೋರಾಟ ಆರಂಭವಾಗಿದೆ.

ಸಂದರ್ಶನದ ವೇಳೆ ತಾಲಿಬಾಲಿಗಳು, ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷದ್ ಮತ್ತು ಭಜರಂಗದಳವನ್ನು ಬೆಂಬಲಿಸುವ ಎಲ್ಲರೂ ಒಂದೇ ಎಂದು ಜಾವೇದ್ ಅಖ್ತರ್ ಹೇಳಿಕೆ ನೀಡಿದ್ದಾರೆ. ಆ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜಾವೇದ್ ಅಖ್ತರ್ ಮುಂಬೈನ ಜುಹು ಮನೆಯ ಮುಂದೆ ಬಿಜೆಪಿಯ ಯುವ ನಾಯಕರು, ಇನ್ನು ಕೆಲವರು ಹೋರಾಟ ಆರಂಭಿಸಿದ್ದರು.

ಸಂಕಷ್ಟ ಅಂತ ಬಂದಾಗ ಆರ್‌ಎಸ್‌ಎಸ್ ಸಹಾಯ ಮಾಡತ್ತೆ, ಆದರೆ ಜಾವೇದ್ ಅವರು ತಾಲಿಬಾನ್‌ಗಳಿಗೆ ಆರ್‌ಎಸ್‌ಎಸ್‌ನ್ನು ಹೋಲಿಕೆ ಮಾಡಿದ್ದಾರೆ, ಹೀಗಾಗಿ ಅವರು ಕ್ಷಮೆ ಕೇಳಲೇಬೇಕು. ಇದು ಖಂಡನೀಯ. ಸೂಕ್ಷ್ಮವ್ಯಕ್ತಿಯಾಗಿ ಜಾವೇದ್ ಅಖ್ತರ್ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು" ಎಂದು ಹೋರಾಟ ಮಾಡುವವರು ಆರೋಪ ಮಾಡಿದ್ದಾರೆ.

ಭಾರತ ಜಾತ್ಯಾತೀತ ದೇಶ. ಇಲ್ಲಿನ ಜನಸಂಖ್ಯೆ ಕೂಡ ಜಾತ್ಯಾತೀತವಾಗಿದೆ. Rss, ವಿಶ್ವ ಹಿಂದು ಪರಿಷತ್ ಮುಂತಾದವನ್ನು ಬೆಂಬಲಿಸುವವರು 1930ರ ಸಮಯದ ನಾಜೀಗಳ ಐಡಿಯಾಗಳನ್ನು ಇಟ್ಟುಕೊಂಡಿದ್ದಾರೆ" ಎಂದು ಜಾವೇದ್ ಅಖ್ತರ್ ಹೇಳಿದ್ದರು.

ಜಾವೇದ್ ಅಖ್ತರ್ ಅವರು ಈ ಹಿಂದೆ ಕೂಡ ಕೆಲ ವಿವಾದ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಬಯೋಪಿಕ್‌ 'ಪಿಎಂ ನರೇಂದ್ರ ಮೋದಿ' ಟ್ರೇಲರ್‌ನಲ್ಲಿ ತನ್ನ ಹೆಸರು ಇರೋದು ನೋಡಿ ಜಾವೇದ್ ಅಖ್ತರ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ ನಿರ್ಮಾಪಕ ಸಂದೀಪ್ ಎಸ್ ಸಿಂಗ್ "ಜಾವೇದ್ ಅಖ್ತರ್ ಅವರು '1947: ಅಥ್‌' ಚಿತ್ರಕ್ಕಾಗಿ ಬರೆದಿರುವ 'ಈಶ್ವರ್ ಅಲ್ಲಾ.. ', 'ಸುನೋ ಘರ್ ಸೆ ದುನಿಯಾ ಡಾಲೋನ್..' ಎಂಬ ಸಮೀರ್ ಬರೆದಿರುವ 'ದಸ್' ಚಿತ್ರದ ಹಾಡನ್ನು ಬಳಸಿಕೊಂಡಿದ್ದರು.

ಇನ್ನೊಮ್ಮೆ ಕೋಮು ದ್ವೇಷ ಕೆರಳುವಂತೆ ಹೇಳಿಕೆ ನೀಡಿರುವ ತನ್ವೀರ್‌ ಪೀರ ಹಾಶಿಮ್‌ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಾವೇದ್ ಅಖ್ತರ್ ಒತ್ತಾಯಿಸಿದ್ದರು.

English summary
A city-based lawyer on Wednesday sent a legal notice to lyricist Javed Akhtar for allegedly making "false and defamatory" remarks against the Rashtriya Swayamsevak Sangh (RSS) in an interview to a news channel, and sought an apology from him over it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X