ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ನಿರ್ಬಂಧದೊಂದಿಗೆ ಗಣೇಶ ಚತುರ್ಥಿ ಆಚರಣೆಗೆ ಮುಂಬೈನ ಲಾಲ್‌ಬೌಚಾ ರಾಜ ಮಂಡಲ ಸಜ್ಜು

|
Google Oneindia Kannada News

ಮುಂಬೈ, ಆ.01: ಕೊರೊನಾವೈರಸ್ ಸಾಂಕ್ರಾಮಿಕದ ಮೂರನೇ ಅಲೆಯ ಮುನ್ಸೂಚನೆಗಳ ನಡುವೆ ಮತ್ತು ಮಹಾರಾಷ್ಟ್ರವು ಅಧಿಕ ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಲಿರುವ ನಡುವೆ ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯು ಈ ವರ್ಷ ಸಾಂಪ್ರದಾಯಿಕ ರೀತಿಯಲ್ಲಿ ಗಣೇಶ ಚತುರ್ಥಿ ಆಚರಣೆಯನ್ನು ನಡೆಸಲು ಮುಂದಾಗಿದೆ.

ಈ ವರ್ಷ ಸಾಂಪ್ರದಾಯಿಕ ರೀತಿಯಲ್ಲಿ ಗಣೇಶ ಚತುರ್ಥಿ ಆಚರಣೆಯನ್ನು ನಡೆಸುತ್ತದೆ ಮತ್ತು ಎಲ್ಲಾ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಮತ್ತು ನಿರ್ಬಂಧಗಳನ್ನು ಪಾಲಿಸಲಾಗುತ್ತದೆ ಎಂದು ಸಮಿತಿಯು ತಿಳಿಸಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

ಕಳೆದ ವರ್ಷ, ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯು ಗಣೇಶ ಚತುರ್ಥಿ ಆಚರಣೆಯನ್ನು ರದ್ದು ಮಾಡಿತ್ತು. ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯ ಗಣೇಶ ಚತುರ್ಥಿ ಆಚರಣೆಯು ಬಹಳ ಪ್ರಸಿದ್ದವಾಗಿದೆ.

Lalbaugcha Raja Mandal in Mumbai to Celebrate Ganesh Chaturthi With Covid Restrictions

ಈ ಗಣೇಶೋತ್ಸವಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ. ಆದರೆ ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ಹಲವಾರು ಕಾರ್ಯಕ್ರಮಗಳು ರದ್ದಾದಂತೆಯೇ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯು ಲಕ್ಷಾಂತರ ಮಂದಿ ಸೇರಿ ಆಚರಿಸುವ ಗಣೇಶೋತ್ಸವ ರದ್ದು ಮಾಡಿತ್ತು. ಹಾಗೆಯೇ ಈ ಕಾರ್ಯಕ್ರಮದ ಬದಲಾಗಿ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯು ರಕ್ತದಾನ ಹಾಗೂ ಪ್ಲಾಸ್ಮಾ ದಾನ ಶಿಬಿರವನ್ನು ಆಯೋಜಿಸಿತ್ತು.

ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯ

ಕೋವಿಡ್‌ ಕಾಣಿಸಿಕೊಂಡ ಆರಂಭದಲ್ಲಿ ಅದರ ಚಿಕಿತ್ಸೆಗೆ ಸಂಬಂಧಿಸಿ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿತ್ತು. ಇದರ ಭಾಗವಾಗಿ ದೆಹಲಿಯಲ್ಲಿ ಮೊದಲು ಪ್ಲಾಸ್ಮಾ ಥೆರಪಿ ನಡೆಸಲು ಆರಂಭಿಸಿತ್ತು. ಈ ಬೆನ್ನಲ್ಲೇ ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿದ್ದರು. ಹಾಗೆಯೇ ಬಳಿಕ ಮುಖ್ಯಮಂತ್ರಿ ಕೊರೊನಾ ಸೋಂಕಿಗೆ ಒಳಗಾದವರು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ದೇಶದಾದ್ಯಂತ ಪ್ಲಾಸ್ಮಾ ದಾನ ಮಾಡುವುದು ಹೆಚ್ಚಿಸಲಾಗಿತ್ತು. ಹಾಗೆಯೇ ಕೋವಿಡ್‌ ಕಾರಣದಿಂದಾಗಿ ರಕ್ತದ ಕೊರತೆ ಕಂಡು ಬಂದಿದ್ದರ ಹಿನ್ನೆಲೆ ಹಲವಾರು ಸಂಘ ಸಂಸ್ಥೆಗಳು ರಕ್ತ ದಾನ ಕಾರ್ಯಕ್ರಮ ನಡೆಸಲು ಮುಂದಾಗಿದ್ದವು. ಇದರಂತೆ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಳಿಯು ರಕ್ತದಾನ ಹಾಗೂ ಪ್ಲಾಸ್ಮಾ ದಾನ ಶಿಬಿರವನ್ನು ಆಯೋಜಿಸಿತ್ತು.

Lalbaugcha Raja Mandal in Mumbai to Celebrate Ganesh Chaturthi With Covid Restrictions

ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಗಣೇಶ ಮೂರ್ತಿಗಳ ಎತ್ತರವನ್ನು ನಾಲ್ಕು ಅಡಿಗಳವರೆಗೆ ನಿರ್ಬಂಧಿಸಲು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸಾರ್ವಜನಿಕ ಆಚರಣೆಗಳಲ್ಲಿ ಗಣಪತಿ ವಿಗ್ರಹಗಳ ಎತ್ತರವನ್ನು ನಾಲ್ಕು ಅಡಿಗಳಿಗೆ ಮತ್ತು ಮನೆಗಳಲ್ಲಿರುವ ಎರಡು ಅಡಿಗಳಿಗೆ ಸೀಮಿತಗೊಳಿಸಲಾಗಿದೆ. ಹಾಗೆಯೇ ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆ ಜನರು ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಮೂಲಕ ಮತ್ತು ಜನಸಂದಣಿಯನ್ನು ತಪ್ಪಿಸುವ ಮೂಲಕ ಹಬ್ಬಗಳನ್ನು ನಡೆಸುವಂತೆ ಸರ್ಕಾರ ಜನರನ್ನು ಒತ್ತಾಯಿಸಿದೆ. ಗಣೇಶೋತ್ಸವ ಮಂಡಳಗಳಿಗೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಲು ಸರ್ಕಾರ ಸೂಚಿಸಿದೆ.

ಗಣೇಶ ಚತುರ್ಥಿ, ಹತ್ತು ದಿನಗಳ ಹಬ್ಬ, ಹಿಂದೂ ಚಂದ್ರನ ಸೌರ ಪಂಚಾಂಗದ ನಾಲ್ಕನೇ ದಿನ ಭಾದ್ರಪದ ಆರಂಭ, ಈ ವರ್ಷ ಸೆಪ್ಟೆಂಬರ್ 10 ರಂದು ಆರಂಭವಾಗಲಿದೆ. ಗಣೇಶ ದೇವರ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ಮಂಡಲಗಳಿಗೆ ಸೇರುವ ಮೂಲಕ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಇದನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶಾಲಾ ಶುಲ್ಕದಲ್ಲಿ ಶೇ.15 ಕಡಿತಗೊಳಿಸವುದಾಗಿ ಪ್ರಕಟಿಸಿದ ಮಹಾರಾಷ್ಟ್ರ ಸರ್ಕಾರಶಾಲಾ ಶುಲ್ಕದಲ್ಲಿ ಶೇ.15 ಕಡಿತಗೊಳಿಸವುದಾಗಿ ಪ್ರಕಟಿಸಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸ್ಥಿತಿಗತಿ

ಕೋವಿಡ್‌ ಸೋಂಕು ಏರಿಕೆ, ಮೂರನೇ ಕೋವಿಡ್‌ ಅಲೆಯ ಭೀತಿಯ ನಡುವೆ ಕೋವಿಡ್ ನಿಯಮಗಳ ಅನುಸರಣೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಗಣೇಶ ಚತುರ್ಥಿ ಆಚರಣೆಯನ್ನು ನಡೆಸುವುದು ಕಠಿಣ ಸವಾಲಾಗಿ ಪರಿಣಮಿಸಬಹುದು. ಕುಂಭಮೇಳದಿಂದಾಗಿ ಉಂಟಾದ ಕೋವಿಡ್‌ ಪ್ರಕರಣಗಳ ಜಿಗಿತಕ್ಕೆ ಕಾರಣವಾದಂತೆ ಈ ಕಾರ್ಯಕ್ರಮಗಳಲ್ಲಿ ನಿಯಮ ತಪ್ಪಿದರೆ ಕೋವಿಡ್‌ ಪ್ರಕರಣಗಳ ಏರಿಕೆ ತೀವ್ರತರವಾದ ಪರಿಣಾಮವನ್ನು ಉಂಟು ಮಾಡಬಹುದು.

ಈ ನಡುವೆ ಮಹಾರಾಷ್ಟ್ರದಲ್ಲಿ ಶನಿವಾರ 6,959 ಪ್ರಕರಣಗಳು ದಾಖಲಾಗಿದೆ. ಹಾಗೆಯೇ 225 ಹೊಸ ಕೋವಿಡ್ -19 ಸಾವುಗಳನ್ನು ವರದಿಯಾಗಿದೆ. 7,467 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 63,03,715 ಕ್ಕೆ ಏರಿದೆ. ಕೋವಿಡ್‌ ಸಾವಿನ ಸಂಖ್ಯೆ 1,32,791 ಕ್ಕೆ ತಲುಪಿದೆ. ಚೇತರಿಕೆಯ ಸಂಖ್ಯೆ ಈಗ 60,90,786 ರಷ್ಟಿದ್ದು, ರಾಜ್ಯದಲ್ಲಿ 76,755 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರಕ್ಕೆ ಹೋಲಿಸಿದರೆ ಶನಿವಾರ, ಮಹಾರಾಷ್ಟ್ರದಲ್ಲಿ ಹೊಸ ಕೊರೊನಾ ವೈರಸ್‌ ಪ್ರಕರಣಗಳಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಗುರುವಾರ 6,600 ಹೊಸ ಪ್ರಕರಣಗಳು ಮತ್ತು 231 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 76,755 ಸಕ್ರಿಯ ರೋಗಿಗಳಲ್ಲಿ, ಪುಣೆ ಜಿಲ್ಲೆಯು 15,674 ಕೋವಿಡ್‌ ಸಕ್ರಿಯ ಪ್ರಕರಣಗಳನ್ನು ದಾಖಲಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Lalbaugcha Raja Mandal in Mumbai to Celebrate Ganesh Chaturthi With Covid Restrictions. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X