ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನ ರೈಲು ನಿಲ್ದಾಣದಲ್ಲೇ ಹೆರಿಗೆ; ನೆರವಿಗೆ ಬಂದ 1 ರೂ ಕ್ಲಿನಿಕ್

|
Google Oneindia Kannada News

ಮುಂಬೈ, ಜುಲೈ 3: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ. ಮುಂಬೈನ 1 ರೂಪಾಯಿ ಕ್ಲಿನಿಕ್ ಮಹಿಳೆಯ ನೆರವಿಗೆ ಬಂದಿದೆ.

 ಆಸ್ಪತ್ರೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡ ಗರ್ಭಿಣಿ ಆಸ್ಪತ್ರೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡ ಗರ್ಭಿಣಿ

29 ವರ್ಷದ ಮಹಿಳೆಯೊಬ್ಬರು ಹೆರಿಗೆಗೆಂದು ಮುಂಬೈನ ಕಾಮಾ ಆಸ್ಪತ್ರೆಗೆ ರೈಲಿನಲ್ಲಿ ಪಯಣಿಸುತ್ತಿದ್ದರು. ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈಲುಗಳ ಸಂಚಾರವೂ ಅಸ್ತವ್ಯಸ್ತವಾಗಿದೆ. ಈ ಸಂದರ್ಭದಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ದೊಂಬಿವಿಲಿ ರೈಲ್ವೆ ನಿಲ್ದಾಣ ಬರುತ್ತಿದ್ದಂತೆ ಹೆರಿಗೆ ನೋವೂ ಹೆಚ್ಚಾಗಿದೆ. ಮಳೆ ಹೆಚ್ಚಿರುವುದರಿಂದ ನಿಲ್ದಾಣದಲ್ಲಿ ಎಂದಿಗಿಂತಲೂ ಅತಿ ಹೆಚ್ಚೇ ಜನರು ತುಂಬಿಕೊಂಡಿದ್ದರು. ಹೆರಿಗೆ ನೋವಿನಿಂದ ನಿಲ್ದಾಣದಲ್ಲೇ ಮಹಿಳೆ ಒದ್ದಾಡಲು ಆರಂಭಿಸಿದ್ದರು. ವಿಷಯ ತಿಳಿದ 1 ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್ ಗಳು ಆ ಕ್ಷಣವೇ ಸ್ಥಳಕ್ಕೆ ಆಗಮಿಸಿ ಹೆರಿಗೆಯನ್ನು ಮಾಡಿಸಿದ್ದಾರೆ. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

lady passenger delivered a baby on a platform of Dombivli railway station in mumbai

ಅತಿ ಕಡಿಮೆ ಬೆಲೆಗೆ, ಸರಿಯಾದ ಸಮಯಕ್ಕೆ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲೆಂದೇ ಮುಂಬೈನಲ್ಲಿ 1 ರೂಪಾಯಿ ಕ್ಲಿನಿಕ್ ರೂಪುಗೊಂಡಿದ್ದು, ಈ ರೀತಿ ಜನರ ಸಹಾಯಕ್ಕೆ ನಿಂತ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಇದೇ ಏಪ್ರಿಲ್ ನಲ್ಲಿ ಥಾಣೆ ರೈಲು ನಿಲ್ದಾಣದಲ್ಲೂ ಇಂಥದ್ದೇ ಪ್ರಕರಣ ನಡೆದಿದ್ದು, ಆಗಲೂ 1 ರೂಪಾಯಿ ವೈದ್ಯರೇ ಮಹಿಳೆಗೆ ಹೆರಿಗೆ ಮಾಡಿಸಿದ್ದರು. ಕೇವಲ ಒಂದು ರೂಪಾಯಿಯ ಟೋಕನ್ ಹಣಕ್ಕೆ ವೈದ್ಯಕೀಯ ಸೇವೆಯನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿರುವುದರಿಂದ ಜನರ ಮೆಚ್ಚುಗೆಯನ್ನೂ ಗಳಿಸಿದೆ.

English summary
A 29-year-old lady passenger traveling towards Cama Hospital delivered a baby boy on a platform of Dombivli railway station of Mumbai today. Doctor & nurse of One Rupee Clinic attended them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X