ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್

|
Google Oneindia Kannada News

ಮುಂಬೈ ಆಗಸ್ಟ್ 19: ಮುಂಬೈನಲ್ಲಿ ಗೋವಿಂದರು (ಶ್ರೀಕೃಷ್ಣನ ಭಕ್ತರು) 50 ಅಡಿ ಎತ್ತರದ ದಹಿ ಮಡಿಕೆಯನ್ನು ಒಡೆದು ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. ಮುಂಬೈನಲ್ಲಿ ಮೊಸರು ಮಡಿಕೆ ಹೊಡೆಯುವ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿ ನಗರದ ಗೋವಿಂದರು ಅತಿ ಎತ್ತರದ ಮಾನವ ಪಿರಮಿಡ್‌ಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಜೈ ಜವಾನ್ ಗೋವಿಂದ ಪಾಠಕ್ ತಂಡವು ಇತ್ತೀಚಿನ ದಹಿ ಹಂಡಿ ಉತ್ಸವದಲ್ಲಿ ಅತಿ ಎತ್ತರದ ಮಾನವ ಪಿರಮಿಡ್ ಅನ್ನು ರಚಿಸುವಲ್ಲಿ ವಿಜೇತರಾಗಿ ಹೊರಹೊಮ್ಮಿದೆ. ಭಾರತ ತಂಡ ಸ್ಪೇನ್ ಮತ್ತು ಚೀನಾವನ್ನು ಹಿಂದಿಕ್ಕಿ ಪ್ರತಿಷ್ಠಿತ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪ್ರವೇಶಿಸಿದೆ.

ಅತಿ ಎತ್ತರದ ಮಾನವ ಪಿರಮಿಡ್ ವಿಶ್ವ ದಾಖಲೆ

ಭಾರತದ ಜೈ ಜವಾನ್ ಗೋವಿಂದ ಪಾಠಕ್ ತಂಡವು ಅತಿ ಎತ್ತರದ ಮಾನವ ಪಿರಮಿಡ್ ಅನ್ನು ರೂಪಿಸುವಲ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ಇದೇ ಮೊದಲಲ್ಲ. ಆಗಸ್ಟ್ 2012 ರಲ್ಲಿ ಥಾಣೆಯಲ್ಲಿ 13.34 ಮೀ (43.79 ಅಡಿ) ಎತ್ತರದ ಮಾನವ ಪಿರಮಿಡ್ ಅನ್ನು ರಚಿಸಿದರು.

 ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸು: ಮುಂಬೈ ತಂಡ ಸೇರಲಿದ್ದಾರ ರವೀಂದ್ರ ಜಡೇಜಾ? ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸು: ಮುಂಬೈ ತಂಡ ಸೇರಲಿದ್ದಾರ ರವೀಂದ್ರ ಜಡೇಜಾ?

ಅಕ್ಟೋಬರ್ 2012 ರಲ್ಲಿ ಸ್ಪೇನ್‌ನಲ್ಲಿ ತಂಡ, ಜುಲೈ 2015ರಲ್ಲಿ ಚೀನಾದ ತಂಡವು ಈ ದಾಖಲೆಯನ್ನು ಸರಿಗಟ್ಟಿತು. ಈ ಬಾರಿ (2022) ಮೊಸರು ಮಡಿಕೆ ಹೊಡೆಯುವ ಉತ್ಸವದಲ್ಲಿ, ಜೈ ಜವಾನ್ ಗೋವಿಂದ ಪಾಠಕ್ ತಂಡವು 50 ಅಡಿ ಎತ್ತರದ ಮಾನವ ಪಿರಮಿಡ್ ಅನ್ನು ರಚಿಸುವ ಮೂಲಕ ತನ್ನ ಕಿರೀಟವನ್ನು ಮರಳಿ ಪಡೆದಿದೆ.

Krishna Janmashtami: World record tallest human pyramid in Mumbai

ಜೈ ಜವಾನ್ ಗೋವಿಂದ ಪಾಠಕ್ ತಂಡ ಹೊಸ ದಾಖಲೆ

ಜೈ ಜವಾನ್ ಗೋವಿಂದ ಪಾಠಕ್ ತಂಡವು ವಿಶ್ವದ ಅತಿ ಎತ್ತರದ ಮಾನವ ಪಿರಮಿಡ್ ಅನ್ನು ರಚಿಸುವಲ್ಲಿ ತನ್ನದೇ ಆದ ದಾಖಲೆಯನ್ನು ಮೀರಿಸಿದೆ. ಈ ಬಾರಿ ಅವರು ತಮ್ಮ ಹಿಂದಿನ ಪ್ರಯತ್ನಕ್ಕಿಂತ ಸರಿಸುಮಾರು 7 ಅಡಿ ಹೆಚ್ಚು ಎತ್ತರದ ಪಿರಮಿಡ್ ಮಾಡಿದ್ದಾರೆ. ಅತಿ ಎತ್ತರದ ಮಾನವ ಪಿರಮಿಡ್ ರಚನೆಯಲ್ಲಿ ಹೊಸ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕೆಲವು ಕಾಲ ಭಾರತಕ್ಕೆ ಸೇರಲಿದೆಯಂತೆ. ವಿಶ್ವದಾಖಲೆಯ ಯತ್ನದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ. ಈ ದೃಶ್ಯ ಮೋಡಿ ಮಾಡುವಂತಿದೆ. ಏಕೆಂದರೆ ಜನರು ಒಬ್ಬರ ಮೇಲೊಬ್ಬರು ನಿಲ್ಲುವುದು ಧೈರ್ಯಶಾಲಿ ಕಾರ್ಯವಾಗಿದೆ. ಈ ವೇಳೆ ಮಡಿಕೆಯನ್ನು 14 ವರ್ಷದ ಗೋವಿಂದ ಎಂಬುವವರು ಒಡೆದಿದ್ದಾರೆ.

Krishna Janmashtami: World record tallest human pyramid in Mumbai

ಮೊಸರು ಮಡಿಕೆ ಹೊಡೆಯುವ ಹಬ್ಬಕ್ಕೆ ಅಪಾರ ಜನಸ್ತೋಮ

ಮುಂಬೈನ ವಿವಿಧ ಭಾಗಗಳಲ್ಲಿ, ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಆಚರಿಸುವ ಮೊಸರು ಮಡಿಕೆ ಹೊಡೆಯುವ ಹಬ್ಬವನ್ನು ಜನರನ್ನು ಆಕರ್ಷಿಸಲು ನಡೆಯುತ್ತದೆ. ಅಲ್ಲಿ ಯುವಕರು ಗೋವಿಂದಸ್, ವರ್ಣರಂಜಿತ ವೇಷಭೂಷಣಗಳನ್ನು ಧರಿಸಿ, ಮಾನವ ಪಿರಮಿಡ್ ಮಾಡಿ ಗಾಳಿಯಲ್ಲಿ ತೂಗಾಡುವ ಮಣ್ಣಿನ ಮಡಕೆಯನ್ನು ತಲುಪುತ್ತಾರೆ ಮತ್ತು ಅದನ್ನು ಒಡೆಯುತ್ತಾರೆ. ಸುರಕ್ಷತಾ ಹಗ್ಗಗಳ ವ್ಯವಸ್ಥೆಗಳ ಹೊರತಾಗಿ ಉಳಿದವರು ಸ್ಟ್ಯಾಂಡ್‌ಬೈನಲ್ಲಿರುತ್ತಾರೆ ಮತ್ತು ಯಾವುದೇ ಘಟನೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತದೆ. ದಹಿ ಹಂಡಿ ಉತ್ಸವಕ್ಕಾಗಿ ಬಹುಮಾನವಾಗಿ ಹಣವನ್ನು ನೀಡಲಾಗುತ್ತದೆ.

English summary
Govindas (devotees of Lord Krishna) broke a 50 feet high curd pot in Mumbai and set a Guinness record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X