ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೋರೆಗಾಂವ್ ಪ್ರಕರಣ: ಐಪಿಎಸ್‌ ಅಧಿಕಾರಿಗಳಾದ ಪರಮ್‌, ಶುಕ್ಲಾಗೆ ಆಯೋಗದ ಸಮನ್ಸ್‌

|
Google Oneindia Kannada News

ನವದೆಹಲಿ, ಅಕ್ಟೋಬರ್‌ 22: ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ಹಾಗೂ ರಶ್ಮಿ ಶುಕ್ಲಾಗೆ ಸಮನ್ಸ್‌ ನೀಡಲು ಕೋರೆಗಾಂವ್ ಭೀಮಾ ವಿಚಾರಣಾ ಆಯೋಗವು ಶುಕ್ರವಾರ ಆದೇಶವನ್ನು ಹೊರಡಿಸಿದೆ.

ಜನವರಿ 1, 2018 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸಾಕ್ಷಿಗಳಾಗಿ ಹಾಜರಾಗುವಂತೆ ಸಮನ್ಸ್ ನೀಡಲು ಆದೇಶ ಹೊರಡಿಸಿದೆ. ದ್ವಿ ಸದಸ್ಯ ಆಯೋಗದ ಮುಖ್ಯಸ್ಥರಾಗಿರುವ ನಿವೃತ್ತ ನ್ಯಾಯಮೂರ್ತಿ ಜೆ ಎನ್ ಪಟೇಲ್ ಈ ಆದೇಶವನ್ನು ಹೊರಡಿಸಿದ್ದಾರೆ. ಐಪಿಎಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ಹಾಗೂ ರಶ್ಮಿ ಶುಕ್ಲಾಗೆ ನವೆಂಬರ್‌ ಎಂಟರೊಳಗೆ ಈ ಸಮನ್ಸ್‌ಗೆ ಪ್ರತಿಕ್ರಿಯೆ ನೀಡಬೇಕಾಗಿದೆ.

ಸ್ಟಾನ್ ಸ್ವಾಮಿ ನಿಧನ: ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟಸ್ಟಾನ್ ಸ್ವಾಮಿ ನಿಧನ: ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟ

ಭೀಮಾ ಕೋರೆಗಾಂವ್‌ ಹಿಂಸಾಚಾರ ನಡೆದ ಸಂದರ್ಭದಲ್ಲಿ ಐಪಿಎಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆಗಿದ್ದರು. ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿ ತಿಳಿಸಿದೆ. ರಶ್ಮಿ ಶುಕ್ಲಾ ಈ ಪ್ರಕರಣ ನಡೆದ ಸಂದರ್ಭದಲ್ಲಿ ಪುಣೆ ಪೊಲೀಸ್ ಆಯುಕ್ತರಾಗಿದ್ದರು. ಪ್ರಸ್ತುತ ಹೈದರಾಬಾದ್‌ನಲ್ಲಿ ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾನಿರ್ದೇಶಕರು ಆಗಿದ್ದಾರೆ.

 Koregaon Bhima case: Commission to summon senior IPS officers Param, Rashmi Shukla

ಎಲ್ಗಾರ್ ಪರಿಷತ್‌ ಅನ್ನು ಪುಣೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2017 ರ ಡಿಸೆಂಬರ್‌ 31 ರಂದು ನಡೆಲಾಗಿತ್ತು. ಭೀಮಾ ಕೋರೆಗಾಂವ್‌ ಯುದ್ಧದ 200 ವರ್ಷಕ್ಕೂ ಮುನ್ನ ಈ ಎಲ್ಗಾರ್ ಪರಿಷತ್‌ ಅನ್ನು ಪುಣೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾಗಿತ್ತು. 2018 ರ ಆಗಸ್ಟ್‌ನಲ್ಲಿ ಪರಮ್‌ ಬೀರ್‌ ಸಿಂಗ್‌ ಪತ್ರಿಕಾಗೋಷ್ಠಿ ನಡೆಸಿದ್ದು, ಎಲ್ಗಾರ್ ಪರಿಷತ್‌ನಲ್ಲಿ ಬಂಧನ ಮಾಡಲಾದ ವ್ಯಕ್ತಿಯಲ್ಲಿ ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿರುವ ದಾಖಲೆಗಳು ದೊರೆತಿದೆ ಎಂದು ಹೇಳಿದ್ದರು.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿ?ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಎಲ್ಲಿ?

ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಸಾಕ್ಷಿಗಳಾಗಿ ಪರಮ್‌ ಬೀರ್‌ ಸಿಂಗ್‌ ಹಾಗೂ ರಶ್ಮಿ ಶುಕ್ಲಾರನ್ನು ಕರೆಯಬೇಕು ಎಂದು ಕೋರೆಗಾಂವ್ ಭೀಮಾ ವಿಚಾರಣಾ ಆಯೋಗದ ವಕೀಲ ಆಶೀಶ್‌ ಸತ್ಪುಟೆ ಶುಕ್ರವಾರ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಆಯೋಗವು ಅನುಮೋದಿಸಿದ್ದು, ರಾಜ್ಯ ಗೃಹ ಇಲಾಖೆಗೆ ರವಾನಿಸಲು ಆದೇಶ ನೀಡಿದೆ. ಈ ನಡುವೆ ಪ್ರಸ್ತುತ ಪರಮ್‌ ಬೀರ್‌ ಸಿಂಗ್‌ ಹಾಗೂ ರಶ್ಮಿ ಶುಕ್ಲಾ ಇಬ್ಬರು ಬೇರೆ ಬೇರೆ ವಿವಾದದಲ್ಲಿ ಸಿಲುಕಿ ಕೊಂಡಿದ್ದಾರೆ.

ಲೆಟರ್ ಬಾಂಬ್: ಏನಿದು ಪರಮ್ ಬೀರ್ ಸಿಂಗ್ v/s ಅನಿಲ್ ದೇಶಮುಖ್ ಗಲಾಟೆಲೆಟರ್ ಬಾಂಬ್: ಏನಿದು ಪರಮ್ ಬೀರ್ ಸಿಂಗ್ v/s ಅನಿಲ್ ದೇಶಮುಖ್ ಗಲಾಟೆ

ವಿವಾದದಲ್ಲಿ ಸಿಲುಕಿರುವ ಶುಕ್ಲಾ ಹಾಗೂ ಸಿಂಗ್‌

ಮಾರ್ಚ್‌ನಲ್ಲಿ ಪರಮ್‌ ಬೀರ್‌ ಸಿಂಗ್‌ ಮಾಜಿ ಗೃಹ ಸಚಿವ ಹಾಗೂ ಎನ್‌ಸಿಪಿ ನಾಯಕ ಅನಿಲ್‌ ದೇಶ್ಮುಖ್‌ ವಿರುದ್ಧವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪತ್ರ ಬರೆದಿದ್ದು, ಆ ಬಳಿಕ ಪರಮ್‌ ಬೀರ್‌ ಸಿಂಗ್‌ರನ್ನು ಮುಂಬೈ ಪೊಲೀಸ್‌ ಆಯುಕ್ತರ ಹುದ್ದೆಯಿಂದ ತೆಗೆಯಲಾಗಿದೆ. ಎನ್‌ಸಿಪಿ ನಾಯಕ ಅನಿಲ್‌ ದೇಶ್ಮುಖ್‌ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಪರಮ್‌ ಬೀರ್‌ ಸಿಂಗ್‌ ಮಾಡಿದ್ದರು. ಮುಂಬೈನಲ್ಲಿರುವ 1,750 ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 40-50 ಕೋಟಿ ಸೇರಿ ಪ್ರತಿ ತಿಂಗಳು ನೂರು ಕೋಟಿ ಸಂಗ್ರಹ ಮಾಡುವಂತೆ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಜೆಗೆ ಅನಿಲ್‌ ದೇಶ್ಮುಖ್‌ ಹೇಳಿದ್ದರು ಎಂದು ಪರಮ್‌ ಬೀರ್‌ ಸಿಂಗ್‌ ಆರೋಪ ಮಾಡಿದ್ದರು. ಈ ನಡುವೆ ಮಹಾರಾಷ್ಟ್ರದಲ್ಲಿ ಪರಮ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳವು ತನಿಖೆಯನ್ನು ನಡೆಸುತ್ತಿದೆ. ಈ ನಡುವೆ ಅಕ್ರಮವಾಗಿ ಫೋನ್‌ ಟ್ಯಾಪಿಂಗ್‌ ಮಾಡಿದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ರಾಜ್ಯ ಗುಪ್ತಚರ ಇಲಾಖೆಯ (ಎಸ್‌ಐಡಿ) ಮಾಜಿ ಆಯುಕ್ತೆ ರಶ್ಮಿ ಶುಕ್ಲಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ. ರಶ್ಮಿ ಶುಕ್ಲಾ ಎಸ್‌ಐಡಿ ಆಗಿದ್ದ ಸಂದರ್ಭದಲ್ಲಿ ಈ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Koregaon Bhima case: Commission to summon senior IPS officers Param Bir Singh, Rashmi Shukla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X