ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಕ್ ಬೌನ್ಸ್ ಪ್ರಕರಣ: ನಟಿ ಕೋಯ್ನಾ ಮಿತ್ರಾಗೆ 6 ತಿಂಗಳು ಜೈಲು

|
Google Oneindia Kannada News

ಮುಂಬೈ, ಜುಲೈ 22: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನಟಿ ಕೊಯ್ನಾ ಮಿತ್ರಾ ದೋಷಿ ಎಂದು ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಸಾಬೀತಾಗಿದ್ದು, 6 ತಿಂಗಳ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

2013ರಲ್ಲಿ ಮಾಡೆಲ್ ಪೂನಂ ಸೇಥಿ ಎಂಬುವರಿಂದ 22 ಲಕ್ಷ ರುಪಾಯಿ ಪಡೆದುಕೊಂಡಿದ್ದ, ಕೊಯ್ನಾ ಆರಂಭಿಕ ಪಾವತಿ ರೂಪದಲ್ಲಿ 3 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು. ಆದರೆ, ಚೆಕ್ ಎನ್ ಕ್ಯಾಶ್ ಆಗಿರಲಿಲ್ಲ. ಚೆಕ್ ಬೌನ್ಸ್ ಆಗಿದ್ದರಿಂದ ಪೂನಂ ದೂರು ನೀಡಿದ್ದರು. 4.64 ಲಕ್ಷ ರು ಪಾವತಿಸಲು ಸೂಚಿಸಲಾಗಿದ್ದು, 1.64 ಲಕ್ಷ ಬಡ್ಡಿ ಕೇಳಲಾಗಿತ್ತು ಎಂದು ಮುಂಬೈ ಮಿರರ್ ವರದಿ ಮಾಡಿದೆ.

Koena Mitra sentenced to 6 months jail in cheque-bouncing case

2013ರ ಜುಲೈ 19ರಂದು ಸೇಥಿ ಅವರು ಮಿತ್ರಾಗೆ ಲೀಗಲ್ ನೋಟಿಸ್ ಕಳಿಸಿದ್ದರು. Negotiable Instruments Act ಪ್ರಕಾರ ದೂರಿನ ಅನ್ವಯ ಕ್ರಮ ಜರುಗಿಸುವ ಮೊದಲು ನೋಟಿಸ್ ಜಾರಿ ಮಾಡಬೇಕಾಗುತ್ತದೆ.

ಅಕ್ಟೋಬರ್ 10, 2013ರಂದು ಕೋರ್ಟಿನಲ್ಲಿ ದೂರು ಸಲ್ಲಿಸಿದ್ದರು. ಆದರೆ, "ಸೇಥಿಗೆ 22 ಲಕ್ಷ ನೀಡುವಷ್ಟು ಸಾಮರ್ಥ್ಯವಿಲ್ಲ, ನನ್ನ ಚೆಕ್ ಗಳನ್ನು ಕದ್ದಿದ್ದಾಳೆ" ಎಂದು ನಟಿ ಮಿತ್ರಾ ಪ್ರತಿವಾದಿಸಿದ್ದರು. ಆದರೆ, ಮಿತ್ರಾ ಡಿಫೆನ್ಸ್ ವಾದಕ್ಕೆ ಸರಿಯಾದ ಸಾಕ್ಷ್ಯ ಒದಗಿಸದ ಕಾರಣ ಈಗ ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ಅಂಧೇರಿಯ ಮೆಟ್ರೋಪಾಲಿಟನ್ ಕೋರ್ಟ್ ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ಅವರು ಕೊಯ್ನಾ ಅವರ ವಾದವನ್ನು ತಿರಸ್ಕರಿಸಿ, ಆರು ತಿಂಗಳು ಜೈಲು ಹಾಗೂ 4.64 ಲಕ್ಷ ರೂಪಾಯಿ ದಂಡ ನೀಡುವಂತೆ ಶಿಕ್ಷೆ ವಿಧಿಸಿದ್ದಾರೆ.

English summary
Bollywood actress Koena Mitra has been convicted by a metropolitan magistrate's court in a case of cheque bouncing. She was also sentenced to simple imprisonment of six months, earlier this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X