ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಡ್ರಗ್ ಪ್ರಕರಣ: ಸಾಕ್ಷಿದಾರ ಕಿರಣ್ ಗೋಸಾವಿ ಶರಣು?

|
Google Oneindia Kannada News

ಮುಂಬೈ ಅಕ್ಟೋಬರ್ 25: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಹಲವಾರು ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಮುಂಬೈ ಕ್ರೂಸ್ ಹಡಗು ದಾಳಿಯಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದ ಮತ್ತು ವೀಡಿಯೋ ಮಾಡಿಕೊಂಡಿದ್ದ ಕಿರಣ್ ಗೋಸಾಮಿ ತಾವು ಎನ್‌ಸಿಬಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾರೆ. ಎನ್‌ಡಿಟಿವಿಗೆ ಅನೇಕ ಪ್ರಶ್ನೆಗಳನ್ನು ಮಾಡಿದ ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅವರು ಲಕ್ನೋದಲ್ಲಿ ಶೀಘ್ರದಲ್ಲೇ ಶರಣಾಗುವುದಾಗಿ ತಿಳಿಸಿದ್ದಾರೆ. "ನಾನು ಅರ್ಧ ಗಂಟೆಯೊಳಗೆ ಲಕ್ನೋದಲ್ಲಿ ಶರಣಾಗುತ್ತೇನೆ" ಎಂದು ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವ್ಯಕ್ತಿ ಕಾಣೆಯಾಗಿದ್ದಾನೆ ಹೇಳಲಾಗುತ್ತಿದೆ ಜೊತೆಗೆ ಯಾರ ವಿರುದ್ಧ ಲುಕ್‌ಔಟ್ ನೋಟಿಸ್ ಅನ್ನು ಪೋಸ್ಟ್ ಮಾಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬೈನಲ್ಲಿ ಪ್ರಕರಣ ದಾಖಲಾಗಿರುವಾಗ ಲಕ್ನೋದಲ್ಲಿ ಏಕೆ ಶರಣಾಗುತ್ತಿದ್ದೀರಿ ಎಂದು ಕೇಳಿದಾಗ, ಕೆಪಿ ಗೋಸಾವಿ ಅವರು ನಗರದಲ್ಲಿ ಜೀವ ಬೆದರಿಕೆ ಇದೆ ಎಂದು ಎಂದು ಹೇಳಿಕೊಂಡಿದ್ದಾರೆ. ಖಾಸಗಿ ತನಿಖಾಧಿಕಾರಿ ಕೆಪಿ ಗೋಸಾವಿ ಕ್ರೂಸ್ ಹಡಗು ದಾಳಿಯ ಸಮಯದಲ್ಲಿ ಮತ್ತು ನಂತರ ಆರ್ಯನ್ ಖಾನ್ ಜೊತೆ ಎನ್‌ಸಿಬಿ ಕಚೇರಿಯಲ್ಲಿ ಹಾಜರಿದ್ದರು. ಎರಡೂ ಸ್ಥಳಗಳಲ್ಲಿ ಆರ್ಯನ್ ಖಾನ್ ಅವರೊಂದಿಗೆ ಅವರು ಸೆಲ್ಫಿ ಮತ್ತು ವೀಡಿಯೊಗಳನ್ನು ಮಾಡಿರುವುದು ಭಾರೀ ವೈರಲ್ ಆಗಿದೆ.

ಪ್ರಕರಣದಲ್ಲಿ ಗೋಸಾವಿ ಪಾತ್ರ

ಕಿರಣ್ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸ್ವತಂತ್ರ ಸಾಕ್ಷಿದಾರ ಎಂದು ಕರೆದಿದೆ. ಈತ ಆರ್ಯನ್ ಖಾನ್ ನೊಂದಿಗೆ ಘಟನೆ ವೇಳೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಆತನಿಂದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆಲು ಡೀಲ್ ಮಾಡಿಕೊಂಡಿದ್ದರು ಎಂದು ಆತನ ವೈಯಕ್ತಿಕ ಅಂಗರಕ್ಷಕ ಪ್ರಬಾಕರ್ ಹೇಳಿಕೊಂಡಿದ್ದಾನೆ.

 Kiran Gosavi, Witness In Drugs-On-Cruise Case, To Surrender In Lucknow

ಪ್ರಭಾಕರ್ ಆರೋಪವೇನು?

ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಅಂಗರಕ್ಷಕನಾಗಿ ಕೆಲಸ ಮಾಡುವ ಪ್ರಭಾಕರ್‌ ಎಂಬಾತ ನಿನ್ನೆಯಷ್ಟೇ ಸ್ಪೋಟಕ ಹೇಳಿಯನ್ನ ನೀಡಿದ್ದನು. ಪ್ರಭಾಕರ್ ಹೇಳುವಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕಿರಣ್ ಗೋಸಾವಿಯೊಂದಿಗೆ ಪ್ರಕರಣ ಕೈಬಿಡಲು 25 ಕೋಟಿ ರು ಡೀಲ್ ನಡೆದಿದೆ. ಕಿರಣ್ ಗೋಸಾವಿ ದಾಳಿಯಾದಾಗಿನಿಂದಲೂ ಸಮಿರ್ ವಾಂಖೆಡೆಯೊಂದಿಗಿದ್ದರು. ಕಿರಣ್ ಸಮೀರ್ ಪರವಾಗಿ 25 ಕೋಟಿ ರು ಹಣದ ವ್ಯವಹಾರ ಮಾಡಿಕೊಳ್ಳುತ್ತಿದ್ದರು. ಈ ಒಪ್ಪಂದ ಕೊನೆಗೆ 18 ಕೋಟಿ ರುಗೆ ಬಂದು ತಲುಪಿತು. ಈ ವೇಳೆ ಕಿರಣ್ ಈ ಹಣದಲ್ಲಿ 8 ಕೋಟಿ ರು ಸಮೀರ್ ವಾಂಖೆಡೆಗೆ ಸೇರುತ್ತದೆ. ಉಳಿದಂತೆ ಇತರರಿಗೆ ಸೇರುತ್ತದೆ ಎಂದು ಹೇಳಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣ ಬೇರೆ ಹಾದಿ ಹಿಡಿದೆ. ಈ ವೇಳೆ ಕಿರಣ್ ಗೋಸಾವಿ ತಲೆಮರಿಸಿಕೊಂಡಿದ್ದರು. ಪ್ರಭಾಕರ್ ಆರೋಪದಿಂದಾಗಿ ಪ್ರಕರಣ ಮತ್ತಷ್ಟು ಚುರುಕುಗೊಂಡಿದೆ.

ನವಾಬ್ ಮಲಿಕ್ ಆರೋಪ

ಎನ್‌ಸಿಪಿ ನಾಯಕ ನವಾಬ್ ಮಲಿಕ್ ಕೂಡ ಸಮೀರ್ ವಾಂಖೆಡೆ ಮೇಲೆ ಸುಲಿಗೆ ಆರೋಪ ಮಾಡಿದವರಲ್ಲಿ ಒಬ್ಬರು. ದುಬೈನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸಮೀರ್ ಅವರು ಬಾಲಿವುಡ್ ಖ್ಯಾತರಿಂದ ಹಣ ಸಂಗ್ರಹಿಸಲು ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಲ್ಲದೇ ಸಮೀರ್ ವಾಂಖೆಡೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕ ಪ್ರಶ್ನೆಗಳನ್ನು ಎತ್ತಲಾಗಿದೆ. ನವಾಬ್ ಮಲಿಕ್ ಅವರು ಇತ್ತೀಚಿನ ಟ್ವೀಟ್‌ನಲ್ಲಿ ಸಮೀರ್ ಅವರ ಮೊದಲ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಮೀರ್ ಅವರ ಮೊದಲ ಮದುವೆ ಮುಸ್ಲಿಂ ಹುಡುಗಿಯೊಂದಿಗೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಚಿತ್ರವನ್ನು ಸಹ ಪೋಸ್ಟ್ ಮಾಡಲಾಗಿದೆ. ಇದಲ್ಲದೆ ಅವರ ಜನ್ಮ ಪ್ರಮಾಣಪತ್ರದ ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ. ಅದರಲ್ಲಿ ಸಮೀರ್ ಹೆಸರು ಸಮೀರ್ ದಾವೂದ್ ವಾಂಖೆಡೆ ಎಂದಿದೆ. ಅಂದಹಾಗೆ ಸಮೀರ್ ಈ ಎಲ್ಲ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಎಲ್ಲಾ ಆರೋಪಗಳನ್ನು ತಪ್ಪು ಎಂದು ಹೇಳಿದ್ದಾರೆ. ಇದರೊಂದಿಗೆ ಅವರು ತಮ್ಮ ಮೂಲ ಪ್ರಮಾಣಪತ್ರವನ್ನು ಸಹ ಹಂಚಿಕೊಂಡಿದ್ದಾರೆ.

Recommended Video

ಭಾರತವನ್ನು ಸೋಲಿಸಿದ್ರೂ ಪಾಕ್ ಆಟಗಾರರು ಸಂಭ್ರಮ ಪಡ್ಲೇ ಇಲ್ಲ!! ಯಾಕೆ? | Oneindia Kannada

ಈ ಎಲ್ಲಾ ಆರೋಪಗಳನ್ನು ಸಮೀರ್ ವಾಂಖೆಡೆ ತಳ್ಳಿ ಹಾಕಿದ್ದು, ಪತಿ ಸಮೀರ್ ಪರ ಪತ್ನಿ ಕ್ರಾಂತಿ ವಾಂಖೆಡೆ ಕೂಡ ಬೆಂಬಲ ನೀಡಿದ್ದಾರೆ. ಟ್ವೀಟ್ ಮೂಲಕ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

English summary
Drugs-On-Cruise Case Witness Kiran Gosavi has told that he will surrender shortly in Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X