ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್ಟ್ರಿಕ್ ಗೆ ಮಾತ್ರೆ ತೆಗೆದುಕೊಳ್ತೀರಾ..? ಕಿಡ್ನಿ ವೈಫಲ್ಯವಾದೀತು ಜೋಕೆ!

|
Google Oneindia Kannada News

ಮುಂಬೈ, ನವೆಂಬರ್ 06: ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಬಳಸುವ ಮಾಗತ್ರೆಗಳ ಮೇಲೆ "ಕಿಡ್ನಿ ವೈಫಲ್ಯವಾದೀತು ಎಚ್ಚರ" ಎಂಬ ಒಕ್ಕಣೆಯನ್ನು ನಮೂದಿಸುವಂತೆ ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ (DCG) ನಿರ್ದೇಶಿಸಿದೆ. ಈ ಕುರಿತು ಎಲ್ಲಾ ರಾಜ್ಯಗಳ ನಿಯಂತ್ರಕ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಗ್ಯಾಸ್ಟ್ರಿಕ್ ಗೆಂದು ಬಳಸುವ ಕೆಲವು ಮಾತ್ರೆಗಳ ಅಡ್ಡ ಪರಿಣಾಮದಿಂದಾಗಿ ಕಿಡ್ನಿ ವೈಫಲ್ಯ ಕಂಡುಬರುತ್ತಿರುವುದನ್ನು ಮನಗಂಡ DCG ಈ ನಿರ್ಧಾರ ತೆಗೆದುಕೊಂಡಿದೆ.

15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ

ಈ ಮಾತ್ರೆಗಳನ್ನು ತೆಗದುಕೊಳ್ಳುವಂತೆ ಸಲಹೆ ನೀಡುವ ವೈದ್ಯರು ಸಹ, ಚೀಟಿ ನೀಡುವ ಸಮಯದಲ್ಲೇ ಅದರ ಅಡ್ಡ ಪರಿಣಾಮದ ಬಗ್ಗೆ ತಿಳಿಸಬೇಕು ಎಂದು ಅದು ಹೇಳಿದೆ.

Kidney Damage Warning on Antacids, Gastric Patients Should Be Careful

ಗ್ಯಾಸ್ಟ್ರಿಕ್, ಎದೆಯುರಿಗೆಂದು ನೀಡುವ ಕಾಯಿಲೆಯನ್ನು ನಿರಂತರವಾಗಿ ಸೇವಿಸುವುದರಿಂದ ಕಿಡ್ನಿ ವೈಫಲ್ಯ, ಮೂತ್ರಕೋಶಕ್ಕೆ ಸಂಬಮಧಿಸಿದ ಸಮಸ್ಯೆ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ ನಂಥ ಅಪಾಯಕಾರಿ ಸಮಸ್ಯೆ ಉಂಟಾಗಬಹುದು ಎಂದು ಇತ್ತೀಚಿನ ಕೆಲವು ವೈದ್ಯಕೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಬರಹಗಳು ಬಂದಿವೆ. ಇವೆಲ್ಲವನ್ನೂ ಪರಿಗಣಿಸಿ, ಮಾತ್ರೆಯ ಹೊರಕವಚದ ಮೇಲೆಯೇ "ಕಿಡ್ನಿ ವೈಫಲ್ಯವಾಗಬಹುದು ಎಚ್ಚರ" ಎಂಬ ಎಚ್ಚರಿಕೆಯ ಸಂದೇಶವನ್ನು ಮುದ್ರಿಸಲು ನಿರ್ದೇಶನ ನೀಡಲಾಗಿದೆ.

ಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿ

ಹಾಗಾದರೆ ಗ್ಯಾಸ್ಟ್ರಿಕ್ ಗೆಂದು ಬಳಸುವ ಜೆಲ್ಯುಸಿಲ್, ಡಿಜೀನ್ ಮುಂತಾದ ಮಾತ್ರಗಳ ಮೇಲೂ ಈ ನಿಯಮ ಪರಿಣಾಮ ಬೀರಬಹುದು.

English summary
Kidney Damage Warning on Antacids, Gastric Patients Should Be Careful,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X