ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಗೆ ಕೆಲವೇ ಗಂಟೆಗಳು ಬಾಕಿ, ಮುಂಬೈ ಆಸ್ಪತ್ರೆಯಲ್ಲಿ ಜೆಡಿಎಸ್ ಶಾಸಕ!

|
Google Oneindia Kannada News

ಮುಂಬೈ, ಫೆಬ್ರವರಿ 08: ಬಹಳ ಕುತೂಹಲ ಕೆರಳಿಸಿರುವ ಕರ್ನಾಟಕ ಬಜೆಟ್ ಮಂಡನೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ಎಲ್ಲಿದ್ದಾರೆ ಎಂಬುದು ಕೊನೆಗೂ ಪತ್ತೆಯಾಗಿದೆ!

Karnataka Budget 2019 LIVE : ಇಂದು ಬಜೆಟ್ ಮಂಡನೆಯಾಗುತ್ತಾ?

"ನಾನು ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದದ್ದೇನೆ. ನನಗೆ ಫುಡ್ ಪಾಯ್ಸನ್ ಆಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಾನು ಅಧಿವೇಶನಕ್ಕೆ ಮರಳುತ್ತೇನೆ" ಎಂದು ನಾರಾಯಣಗೌಡರೇ ಖುದ್ದು ಹೇಳಿಕೆ ನೀಡಿರುವ ವಿಡಿಯೋ ಲಭ್ಯವಾಗಿದೆ. ಅವರು ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದು, ಇದನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೂ ತಲುಪಿಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎಚ್ಡಿಕೆ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ತಾವು ಭೇಟಿ ಮಾಡುವುದಾಗಿ ನಾರಾಯಣಗೌಡ ಹೇಳಿಕೊಂಡಿದ್ದಾರೆ.

Karnataka Budget 2019: KR Pet MLA Narayana Gowda is in Mumbai hospital

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಬಜೆಟ್ ಅಧಿವೇಶನ ಆರಂಭವಾಗುವುದಕ್ಕೂ ಮುನ್ನಾದಿನ, ಅಂದರೆ ಜ.5 ರಿಂದ ನಾಪತ್ತೆಯಾಗಿದ್ದರು. ಅವರು ಮುಂಬೈಗೆ ಹಾರಿದ್ದಾರೆ ಎಂದು ಗುರುವಾರ ಅಧಿವೇಶನದ ಸಮಯದಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದರು.

ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ

ಈಗಾಗಲೇ ಕಾಂಗ್ರೆಸ್ ನ ಕೆಲವು ಅತೃಪ್ತ ಶಾಸಕರು ಬಿಜೆಪಿ ಶಾಸಕರ ಸುಪರ್ದಿಯಲ್ಲಿ ಮುಂಬೈಯ ಹೊಟೇಲ್ ವೊಂದರಲ್ಲಿ ತಂಗಿದ್ದಾರೆ. ಇಂದು ಮಂಡನೆಯಾಗಲಿರುವ ಬಜೆಟ್ ಗೆ ಅಡ್ಡಿಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಈ ಎಲ್ಲ ಕಾರ್ಯತಂತ್ರ ಹೆಣೆದಿದೆ ಎಂದು ದೂರಲಾಗುತ್ತಿದೆ.

English summary
Karnataka Budget 2019: Chief minister HD Kumaraswamy will be presenting Karnataka budget today. JDS MLA from KR pet, Mandya is undergoing treatment in Mumbai. He might not be comming to assembly today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X