ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲಿನ ಹಲ್ಲೆ ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ

|
Google Oneindia Kannada News

ರಿಪಬ್ಲಿಕ್ ಟಿವಿ ಮುಖ್ಯಸ್ಥ ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ನಡೆದ ದುಷ್ಕರ್ಮಿಗಳ ದಾಳಿಯನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.

'ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ್ದೇ ಈ ದಾಳಿಗೆ ಕಾರಣವಾಗಿದ್ದರೆ ಮನೆಗೊಬ್ಬ ಅರ್ನಬ್ ಹುಟ್ಟಿಯಾರು ಎಂಬುದನ್ನು ಕಾಂಗ್ರೆಸ್ ನೆನಪಿಡಬೇಕಿದೆ' ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.

''ಪತ್ರಕರ್ತ ಅರ್ನಬ್ ಗೋಸ್ವಾಮಿಯವರ ಮೇಲೆ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ವಾಕ್ ಸ್ವಾತಂತ್ರ್ಯ ಕಾಂಗ್ರೆಸ್‌ಗೆ ಮಾತ್ರ ಇರುವುದು ಎಂದು ಅವರು ತಿಳಿದಿರುವುದೇ ನಿನ್ನೆ ನಡೆದ ದಾಳಿಗೆ ಸಾಕ್ಷಿ. ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ್ದೇ ಈ ದಾಳಿಗೆ ಕಾರಣವಾಗಿದ್ದರೆ ಮನೆಗೊಬ್ಬ ಅರ್ನಬ್ ಹುಟ್ಟಿಯಾರು ಎಂಬುದನ್ನು ಕಾಂಗ್ರೆಸ್ ನೆನಪಿಡಬೇಕಿದೆ'' ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪ

ಇದೇ ಘಟನೆ ಕುರಿತು ಕೇಂದ್ರ ಸಚಿವ, ಕರ್ನಾಟಕದ ಸಂಸದ ಡಿವಿ ಸದಾನಂದ ಗೌಡ ಕೂಡ ಪ್ರತಿಕ್ರಿಯಿಸಿದ್ದು ''ಮಹಾರಾಷ್ಟ್ರದಲ್ಲಿ ಹಿಂದೂ ಸಾಧುಗಳ ಜನಸಮೂಹ ಹತ್ಯೆ ಕುರಿತು ಸೋನಿಯಾ ಸೇನಾ ಮೌನವನ್ನು ಪ್ರಶ್ನಿಸುವ ಧೈರ್ಯಕ್ಕಾಗಿ ಅರ್ನಬ್ ಗೋಸ್ವಾಮಿ ದಂಪತಿ ಮೇಲೆ ದಾಳಿ ಖಂಡನೀಯ. ಇದು ಅಸಹಿಷ್ಣು ಮನಸ್ಥಿತಿ. ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು'' ಎಂದಿದ್ದಾರೆ.

Karnataka BJP President Condemns Attack On Arnab Goswami

ಅಂದ್ಹಾಗೆ, ಗುರುವಾರ ಬೆಳಿಗ್ಗೆ ಕಚೇರಿ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಅರ್ನಬ್ ಗೋಸ್ವಾಮಿ ದಂಪತಿ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ವಿರುದ್ಧ ಮಾತನಾಡಿದ್ದಕ್ಕಾಗಿ ಈ ಹಲ್ಲೆಯಾಗಿದೆ ಎಂದು ಸ್ವತಃ ಅರ್ನಬ್ ಆರೋಪಿಸಿದ್ದಾರೆ.

ಈ ಕುರಿತು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈಗಾಗಲೇ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

English summary
Karnataka BJP President Naveen kumar kateel and MP sadananda gowda condemns attack on journalist Arnab Goswami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X