ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಗೇರಿಗೆ ತೆರಳಲು ಕೋರ್ಟ್ ಅನುಮತಿ ಕೋರಿದ ಕಂಗನಾ ರನೌತ್

|
Google Oneindia Kannada News

ಮುಂಬೈ, ಜೂನ್ 15: ಜನಪ್ರಿಯ ನಟಿ ಕಂಗನಾ ರನೌತ್ ವಿರುದ್ಧ ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಆಕೆ ಪಾಸ್‌ಪೋರ್ಟ್‌ ನವೀಕರಣಕ್ಕೆ ಪ್ರಾಧಿಕಾರ ಆಕ್ಷೇಪಿಸಿದೆ. ಈ ನಡುವೆ ಚಿತ್ರೀಕರಣಕ್ಕಾಗಿ ಹಂಗೇರಿಗೆ ತೆರಳಲು ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಕಂಗನಾ ಕೋರಿದ್ದಾರೆ.

ಭಾರತೀಯ ಪಾಸ್‌ಪೋರ್ಟ್‌ ಪ್ರಾಧಿಕಾರವು ಪಾಸ್‌ಪೋರ್ಟ್‌ ನವೀಕರಿಸಲು ಆಕ್ಷೇಪಿಸುತ್ತಿದ್ದು, ಪಾಸ್‌ಪೋರ್ಟ್‌ ನವೀಕರಿಸಲು ಸೂಕ್ತ ನಿರ್ದೇಶನವನ್ನು ಪ್ರಾಧಿಕಾರಕ್ಕೆ ನೀಡುವಂತೆ ಕಂಗನಾ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ದ್ವೇಷಪೂರಿತ ಹಾಗೂ ದೇಶದ್ರೋಹದ ಟ್ವೀಟ್‌ಗಳನ್ನು ಮಾಡಿದ ಆರೋಪದಲ್ಲಿ ಮುಂಬೈನ ಬಾಂದ್ರಾ ಪೊಲೀಸರು ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಕಂಗನಾ ಸಹೋದರಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ (ಎರಡು ಸಮುದಾಯಗಳ ನಡುವೆ ದ್ವೇಷ ಹರಡುವುದು), 295ಎ (ಧಾರ್ಮಿಕ ಭಾವನೆ ಕೆರಳಿಸುವುದು), 124ಎ (ದೇಶದ್ರೋಹ) ಜೊತೆಗೆ 34 ರ (ಪಿತೂರಿ) ಅಡಿ ದೂರು ದಾಖಲಿಸಿದ್ದಾರೆ.

Kangana Ranaut moves Bombay HC against authority’s objection to renew passport

ಕಂಗನಾರ ಪಾಸ್‌ಪೋರ್ಟ್‌ನ ಅವಧಿ ಕಳೆದ ಸೆಪ್ಟೆಂಬರ್‌ ತಿಂಗಳಿಗೆ ಮುಗಿದಿದೆ. ಸದ್ಯ ಎಫ್ಐಆರ್ ದಾಖಲಾಗಿದ್ದು, ಪಾಸ್ ಪೋರ್ಟ್ ನವೀಕರಿಸಲು ಸಾಧ್ಯವಿಲ್ಲ ಭಾರತೀಯ ಪಾಸ್‌ಪೋರ್ಟ್‌ ಪ್ರಾಧಿಕಾರ ಹೇಳಿದೆ.

''ದೇಶದ ವಿವಿಧೆಡೆ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ತೆರಳಬೇಕಿರುವುದು ವೃತ್ತಿ ಬದ್ಧತೆಯಾಗಿದೆ. ಚಿತ್ರವೊಂದರಲ್ಲಿ ತಾನು ಪ್ರಧಾನ ಭೂಮಿಕೆಯಲ್ಲಿರುವುದರಿಂದ ಜೂನ್‌ 15 ರಿಂದ ಆಗಸ್ಟ್‌ವರೆಗೆ ಹಂಗರಿಯ ಬುಡಾಪೆಸ್ಟ್‌ಗೆ ತೆರಳಬೇಕಿದೆ. ಇದಕ್ಕಾಗಿ ನನ್ನ ಪಾಸ್ ಪೋರ್ಟ್ ನವೀಕರಣ ಅಗತ್ಯ'' ಎಂದು ಕಂಗನಾ ಕೋರಿದ್ದಾರೆ.

ರನೌತ್‌ ಸಹೋದರಿಯ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ನ್ಯಾಯಾಲಯವು ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಈ ಹಿಂದೆಯೇ ಆದೇಶ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Kangana Ranaut's interim application stated that needs to fly to Hungary for the shooting of her movie ‘Dhaakad’, from June 15 to August 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X