ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮುಂಬೈಗೆ ಬರ್ತೀನಿ, ತಾಕತ್ತಿದ್ದರೆ ತಡೆಯಿರಿ: ಕಂಗನಾ ರಣಾವತ್ ಸವಾಲು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 4: ಮುಂಬೈ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತಾಗಿದೆ ಎಂಬ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ಮಹಾರಾಷ್ಟ್ರ ಸರ್ಕಾರವನ್ನು ಕೆರಳಿಸಿದೆ. ಕಂಗನಾ ರಣಾವತ್‌ಗೆ ಮುಂಬೈನಲ್ಲಿ ಬಂದು ವಾಸಿಸಲು ಯಾವುದೇ ಹಕ್ಕು ಇಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಕಿಡಿಕಾರಿದ್ದಾರೆ.

ಮುಂಬೈ ಪೊಲೀಸರನ್ನು ಬ್ರಿಟನ್‌ನ ಸ್ಕಾಟ್ಲಾಂಡ್ ಯಾರ್ಡ್ ಪೊಲೀಸರಿಗೆ ಹೋಲಿಸಲಾಗುತ್ತಿದೆ. ಆದರೆ ಕೆಲವು ಜನರು ಮುಂಬೈ ಪೊಲೀಸರನ್ನು ಟಾರ್ಗೆಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಂಗನಾ ರಣಾವತ್ ಮುಂಬೈ ಪೊಲೀಸರ ಬಗ್ಗೆ ಹೋಲಿಕೆ ಮಾಡಿದ ಬಳಿಕ, ಇದರ ವಿರುದ್ಧ ಐಪಿಎಸ್ ಅಧಿಕಾರಿಯೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ವಾಸಿಸಲು ಆಕೆಗೆ ಯಾವುದೇ ಅಧಿಕಾರವಿಲ್ಲ ಎಂದು ಅನಿಲ್ ದೇಶ್ ಮುಖ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ: ಶಿವಸೇನೆಗೆ ಯಾಕೆ ನಡುಕ?ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ: ಶಿವಸೇನೆಗೆ ಯಾಕೆ ನಡುಕ?

ಇದಕ್ಕೂ ಮುನ್ನ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಸೇನಾ ಸಂಸದ ಸಂಜಯ್ ರಾವತ್, ಮಹಾರಾಷ್ಟ್ರವನ್ನು ಅವಮಾನಿಸಲು ಕಂಗನಾ ಪ್ರಯತ್ನಿಸುತ್ತಿದ್ದಾರೆ. ಆಕೆಗೆ ಯಾವುದೋ ರಾಜಕೀಯ ಪಕ್ಷ ಅಥವಾ ಅಧಿಕಾರ ಕೇಂದ್ರದ ಬೆಂಬಲವಿದೆ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಮುಂಬೈ ಹಾಗೂ ಮುಂಬೈ ಪೊಲೀಸರ ವರ್ಚಸ್ಸನ್ನು ಕೆಡಿಸಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಮುಂದೆ ಓದಿ...

ಇಲ್ಲಿ ವಾಸಿಸಲು ಹಕ್ಕಿಲ್ಲ

ಇಲ್ಲಿ ವಾಸಿಸಲು ಹಕ್ಕಿಲ್ಲ

ಮುಂಬೈ ಪೊಲೀಸರು ಕೊರೊನಾ ವೈರಸ್ ಸೋಂಕಿನಿಂದ ಹೇಗೆ ಜೀವ ಕಳೆದುಕೊಂಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪೊಲೀಸರ ಬಗ್ಗೆ ನಟಿ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಅದನ್ನು ಖಂಡಿಸುತ್ತೇವೆ. ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ವಾಸಿಸಲು ಸುರಕ್ಷಿತವಲ್ಲ ಎಂದೆನಿಸಿದರೆ ಅವರಿಗೆ ಇಲ್ಲಿ ವಾಸಿಸಲು ಹಕ್ಕಿಲ್ಲ ಎಂದು ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ತಾಕತ್ತಿದ್ದರೆ ತಡೆಯಿರಿ

ತಾಕತ್ತಿದ್ದರೆ ತಡೆಯಿರಿ

'ಮುಂಬೈಗೆ ಮರಳದಂತೆ ನನಗೆ ಅನೇಕ ಜನರು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಮುಂದಿನ ವಾರ ಸೆ. 9ರಂದು ಮುಂಬೈಗೆ ಪ್ರಯಾಣಿಸಲು ನಾನು ನಿರ್ಧರಿಸಿದ್ದೇನೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಸಮಯವನ್ನು ತಿಳಿಸುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ತಡೆಯಿರಿ' ಎಂದು ಕಂಗನಾ ಸವಾಲು ಹಾಕಿದ್ದಾರೆ,

ಸುಶಾಂತ್ ಸಾವಿನ ದಿನ ಕಾಣಿಸಿಕೊಂಡಿದ್ದ ಮುಸುಕುಧಾರಿ ಮಹಿಳೆಯ ಗುರುತು ಪತ್ತೆಸುಶಾಂತ್ ಸಾವಿನ ದಿನ ಕಾಣಿಸಿಕೊಂಡಿದ್ದ ಮುಸುಕುಧಾರಿ ಮಹಿಳೆಯ ಗುರುತು ಪತ್ತೆ

ಪಿಒಕೆಯಿಂದ ತಾಲಿಬಾನ್‌ಗೆ

ಪಿಒಕೆಯಿಂದ ತಾಲಿಬಾನ್‌ಗೆ

ಅನಿಲ್ ದೇಶ್‌ಮುಖ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳ ಬಗ್ಗೆ ಅವರೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂಬೈಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಅವರು, ಒಂದೇ ದಿನಕ್ಕೆ ಪಿಒಕೆಯಿಂದ ತಾಲಿಬಾನ್‌ಗೆ ಅದನ್ನು ಕೊಂಡೊಯ್ದಿದ್ದಾರೆ ಎಂದು ಮತ್ತೆ ಲೇವಡಿ ಮಾಡಿದ್ದಾರೆ.

ಪಲ್ಗಾರ್ ಸಾಧುಗಳ ಹತ್ಯೆ ಸಿಬಿಐಗೆ ಒಪ್ಪಿಸಿ

ಪಲ್ಗಾರ್ ಸಾಧುಗಳ ಹತ್ಯೆ ಸಿಬಿಐಗೆ ಒಪ್ಪಿಸಿ

ನಾನು ಮುಂಬೈಗೆ ಬಂದರೆ ಪಲ್ಗಾರ್ ಸಾಧುಗಳನ್ನು ಕಲ್ಲುಗಳು ಮತ್ತು ರಾಡ್‌ನಿಂದ ಹೊಡೆದಂತೆ ನನ್ನನ್ನು ಕೊಲ್ಲುವುದಾಗಿ ನೀವು ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದೀರ. ಏಕೆಂದರೆ ಮುಗ್ಧ ಜನರನ್ನು ಕೊಂದು ಪಾರಾಗಿದ್ದೀರಿ. ಅದಕ್ಕೆ ಯಾವ ಪರಿಣಾಮವನ್ನೂ ನೀವು ಎದುರಿಸಲಿಲ್ಲ. ಇದರಿಂದ ನಿಮಗೆ ಮತ್ತಷ್ಟು ಧೈರ್ಯ ಬಂದಿದೆ ಎಂದಿರುವ ಕಂಗನಾ, ಪಲ್ಗಾರ್ ಸಾಧುಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

English summary
Maharashtra Home Minister Anil Deshmukh said Kangana Ranaut has no right to stay in Mumbai after she said Mumbai has become like PoK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X