• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಲಿವುಡ್ ನಟಿ ಕಂಗನಾಗೆ ''ವೈ+'' ಶ್ರೇಣಿ ಭದ್ರತಾ ವ್ಯವಸ್ಥೆ

|

ಮುಂಬೈ, ಸೆ. 7: ನಟಿ ಕಂಗನಾ ರನೌತ್ ಅವರು ಮುಂಬೈ ಒಂದು ರೀತಿ ಪಾಕ್ ಆಕ್ರಮಿತ ಕಾಶ್ಮೀರವಾಗಿಬಿಟ್ಟಿದೆ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಜಯ್ ಅವರು ಅಹಮಹಾಬಾದ್ ಕೂಡಾ ಮಿನಿ ಪಾಕಿಸ್ತಾನದಂತಿದೆ ಎಂದಿದ್ದರು. ಇವರಿಬ್ಬರ ನಡುವಿನ ವಾಕ್ಸಮರ ಮುಂದುವರೆದಿರುವ ಸಂದರ್ಭದಲ್ಲೇ ಕಂಗನಾಗೆ ಜೀವ ಬೆದರಿಕೆ ಕರೆಗಳು ಬಂದಿರುವ ಸುದ್ದಿ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಕಂಗನಾಗೆ ''ವೈ+'' ಶ್ರೇಣಿ ಭದ್ರತಾ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂಬ ಸುದ್ದಿ ಬಂದಿದೆ.

"ಕಂಗನಾ ಹಿಮಾಚಲ ಪ್ರದೇಶದ ಮಗಳು ಮತ್ತು ಸೆಲೆಬ್ರಿಟಿ ಕೂಡ ಹೌದು. ಅವರಿಗೆ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿದ್ದೇನೆ" ಎಂದು ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಭರವಸೆ ನೀಡಿದ್ದಾರೆ.

ಅಹಮದಾಬಾದ್ ''ಮಿನಿ ಪಾಕಿಸ್ತಾನ'' ಎಂದ ಸಂಜಯ್, ಬಿಜೆಪಿ ಗರಂ

ಏನಿದರ ಹಿನ್ನೆಲೆ?: ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಂಗನಾ, ತಮ್ಮನ್ನು 'ಹರಾಮ್ ಕೋರ್' ಎಂದು ಕರೆದ ಶೀವಸೇನಾ ಪಕ್ಷದ ಮುಖಂಡ ಸಂಜಯ್ ರಾವತ್‌ ಗೆ ಅವರು ಪ್ರತ್ಯುತ್ತರ ನೀಡಿ ವಿಡಿಯೋ ಸಂದೇಶ ನೀಡಿದ್ದರು. ಇದರಲ್ಲಿ ಶಿವಸೇನಾ ಕಾರ್ಯಕರ್ತರು ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿದ್ದರು.

ಹರಾಮ್ ಕೋರ್ ಎಂದಿದ್ದ ಸಂಜಯ್

ಹರಾಮ್ ಕೋರ್ ಎಂದಿದ್ದ ಸಂಜಯ್

ಈ ಹಿಂದೆ 'ದೇಶ ಬಿಟ್ಟು ಹೋಗೋಣ ಎನಿಸುತ್ತಿದೆ' ಎಂದು ಅಮೀರ್ ಖಾನ್ ನೇರವಾಗಿ ಹೇಳಿದ್ದರು. ಅವರನ್ನು ಯಾರೂ ಹರಾಮ್ ಕೋರ್ ಎಂದು ಹೇಳಲಿಲ್ಲ, ನಾಸಿರುದ್ಧೀನ್ ಶಾ ಸಹ ಹೀಗೆಯೇ ಹೇಳಿದ್ದರು, ಅವರನ್ನು ಯಾರೂ ಸಹ ಹರಾಮ್ ಕೋರ್ ಎನ್ನಲಿಲ್ಲ. ಈಗ ನಾನು ಮುಂಬೈ ಬಗ್ಗೆ ಮಾತನಾಡಿದೆ ಎಂದು ನನ್ನನ್ನು ಹೀಗಳೆಯುತ್ತಿದ್ದಾರೆ, ಮುಂಬೈಗೆ ಬರುವುದು ಬೇಡ ಎನ್ನಲು ಇವರು ಯಾರು? ನಾನು ಸೆ. 9ರಂದು ಮುಂಬೈಗೆ ಬರುತ್ತಿದ್ದೇನೆ ಎಂದಿದ್ದಾರೆ.

ಶಿವಸೇನಾ ಸರ್ಕಾರಕ್ಕೆ ಛಾಟಿಯೇಟು ಕೊಟ್ಟಿದ್ದ ಕಂಗನಾ

ಶಿವಸೇನಾ ಸರ್ಕಾರಕ್ಕೆ ಛಾಟಿಯೇಟು ಕೊಟ್ಟಿದ್ದ ಕಂಗನಾ

ಈ ಸರ್ಕಾರದ ಅವಧಿಯಲ್ಲಿ ಮುಂಬೈ ಪೊಲೀಸ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸುಶಾಂತ್ ಸಿಂಗ್ ತಂದೆಯ ದೂರು ತೆಗೆದುಕೊಳ್ಳಲಿಲ್ಲ, ನನ್ನ ಹೇಳಿಕೆ ಸಹ ದಾಖಲಿಸಿಕೊಳ್ಳಲಿಲ್ಲ' ಎಂದು ಕಂಗನಾ ಆರೋಪಿಸಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣ, ರಿಯಾ ಡ್ರಗ್ಸ್ ಕೇಸ್, ಬಿಹಾರದ ಪೊಲೀಸರನ್ನು ನಡೆಸಿಕೊಂಡ ರೀತಿ ಎಲ್ಲದರ ಬಗ್ಗೆ ಕಂಗನಾ ಪ್ರತಿಕ್ರಿಯಿಸಿ, ಶಿವಸೇನಾ, ಎನ್ ಸಿಪಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು. ಮಹಿಳೆಯರಿಗೆ ಮುಂಬೈ ಸುರಕ್ಷಿತವಲ್ಲ ಎಂಬ ಭಾವನೆ ಬಂದಿದೆ ಎಂದಿದ್ದರು

ಕಂಗನಾ ಹೇಳಿಕೆ ರಾಜಕೀಯವಾಗಿಸಲು ಯತ್ನಿಸಿದ್ದರು

ಕಂಗನಾ ಹೇಳಿಕೆ ರಾಜಕೀಯವಾಗಿಸಲು ಯತ್ನಿಸಿದ್ದರು

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿ ಅನುಸರಿಸಿದೆ ಎಂದು ಆಡಳಿತ ಪಕ್ಷದ ವಿರುದ್ಧ ಕಂಗನಾ ಕಿಡಿಕಾರಿದ್ದರು. ಕಂಗನಾ ಹೇಳಿಕೆಯನ್ನು ಖಂಡಿಸುತ್ತಾ ಬಂದಿರುವ ಸಂಜಯ್ ಮಾತನಾಡಿ, ಆ ಯುವತಿ ಮುಂಬೈ ಹಾಗೂ ಮಹಾರಾಷ್ಟ್ರದ ಕ್ಷಮೆಯಾಚಿಸಬೇಕು, ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದಾಳೆ. ಇದನ್ನೇ ಆಕೆ ಅಹಮದಾಬಾದ್ ಗೂ ಕೂಡಾ ಹೇಳಲು ಸಾಧ್ಯವೇ ಎಂದು ಸಂಜಯ್ ಪ್ರಶ್ನಿಸಿದ್ದರು.

ಸಂಜಯ್ ಅವರ ಹೇಳಿಕೆ ಖಂಡಿಸಿರುವ ಗುಜರಾತ್ ಬಿಜೆಪಿ

ಸಂಜಯ್ ಅವರ ಹೇಳಿಕೆ ಖಂಡಿಸಿರುವ ಗುಜರಾತ್ ಬಿಜೆಪಿ

ಸಂಜಯ್ ಅವರ ಹೇಳಿಕೆ ಖಂಡಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ ಅವರು ಸೇನಾ ಮುಖಂಡ ಅಹಮದಾಬಾದ್ ನಗರಕ್ಕೆ ಅಪಮಾನ ಮಾಡಿದ್ದಾರೆ. ಗುಜರಾತ್, ಅಹಮಹಾಬಾದ್ ಹಾಗೂ ಅಂದವಾಡಿಸ್ ಕ್ಷಮೆಯಾಚಬೇಕು ಎಂದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಇಬ್ಬರು ಗುಜರಾತಿಗಳು, ಮಹಾತ್ಮಾ ಗಾಂಧೀಜಿ, ಸರ್ದಾರ್ ಪಟೇಲ್ ಅವರನ್ನು ಸ್ಮರಿಸದೆ ನೀವು ಮುಂಬೈನಂಥ ನಗರದಲ್ಲಿ ಹೇಗಿದ್ದೀರಿ, ಗುಜರಾತಿಗಳನ್ನು ಸುಮ್ಮನೆ ಟೀಕಿಸಬೇಡಿ ಎಂದಿದ್ದಾರೆ.

English summary
Bollywood actor Kangana Ranaut given Y+ category security by central agencies: officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X