ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾನ್‌ ಸ್ವಾಮಿಯನ್ನು ಶ್ಲಾಘಿಸಿದ್ದ ಹೇಳಿಕೆ ಹಿಂಪಡೆದ ನ್ಯಾಯಮೂರ್ತಿ ಶಿಂಧೆ

|
Google Oneindia Kannada News

ಮುಂಬೈ, ಜು.23: ಎಲ್ಗಾರ್‌ ಪರಿಷತ್ ಆರೋಪಿ, ದಿವಂಗತ ಫಾದರ್ ಸ್ಟಾನ್ ಸ್ವಾಮಿ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದ ಬಳಿಕ ನ್ಯಾಯಮೂರ್ತಿ ಎಸ್.ಎಸ್. ಶಿಂಧೆ ನೇತೃತ್ವದ ಬಾಂಬೆ ಹೈಕೋರ್ಟ್‌ನ ಪೀಠವು ಸ್ಟಾನ್‌ ಸ್ವಾಮಿಯನ್ನು ಹೊಗಳಿದ್ದು ಈಗ ಆ ಹೇಳಿಕೆಯನ್ನು ನ್ಯಾಯಮೂರ್ತಿ ಶಿಂಧೆ ಹಿಂತೆಗೆದುಕೊಂಡಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅನಿಲ್ ಸಿಂಗ್ ಶುಕ್ರವಾರ ನಡೆದ ವಿಚಾರಣೆಯ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ ಇದು ಸಂಭವಿಸಿದೆ.

ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನ

ಬಾಂಬೆ ಹೈಕೋರ್ಟ್ ಸೋಮವಾರ ದಿವಂಗತ ಜೆಸ್ಯೂಟ್ ಪಾದ್ರಿ ಸ್ಟಾನ್ ಸ್ವಾಮಿಯನ್ನು ಸ್ಮರಿಸಿದೆ. ಕಾನೂನು ವಿಷಯವನ್ನು ಲೆಕ್ಕಿಸದೆ, ಸ್ಟಾನ್‌ ಸ್ವಾಮಿ ಸಮಾಜಕ್ಕಾಗಿ ಮಾಡಿದ ಕಾರ್ಯಗಳಿಗೆ ಪೀಠವು ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೆಯೇ ಸ್ಟಾನ್‌ ಸ್ವಾಮಿಯ ಸಾವನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.

 Justice Shinde withdraws comments praising late Stan Swamy after NIA raises objection

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪರ ವಕೀಲ ಅನಿಲ್‌ ಸಿಂಗ್‌, ಎನ್ಐಎ ವಿರುದ್ಧ ನಕಾರಾತ್ಮಕ ಗ್ರಹಿಕೆ ಸೃಷ್ಟಿಯಾಗುತ್ತಿದೆ. ಇದು ತನಿಖಾಧಿಕಾರಿಗಳ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ನ್ಯಾಯಮೂರ್ತಿ ಶಿಂಧೆ ಮುಕ್ತ ನ್ಯಾಯಾಲಯದಲ್ಲಿ ಈ ಅಭಿಪ್ರಾಯಗಳನ್ನು ನೀಡಿದ ನಂತರ, ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ ಎಂದು ಎಎಸ್‌ಜಿ ಸಲ್ಲಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್.ಎಸ್. ಶಿಂಧೆ, ನ್ಯಾಯಾಧೀಶರು ಸಹ ಮಾನವರು. ಜುಲೈ 5 ರಂದು ಫಾದರ್ ಸ್ಟಾನ್ ಸ್ವಾಮಿ ಸಾವಿನ ಸುದ್ದಿ ಹಠಾತ್ ಆಗಿದೆ ಎಂದು ಹೇಳಿದ್ದಾರೆ.

ಸ್ಟಾನ್ ಸ್ವಾಮಿ ನಿಧನ: ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟಸ್ಟಾನ್ ಸ್ವಾಮಿ ನಿಧನ: ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟ

"ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇದು ವಿಭಿನ್ನವಾಗಿದೆ ಎಂದು ನಾನು ಹೇಳಿದ್ದೇನೆ. ನಾನು ವೈಯಕ್ತಿಕವಾಗಿ ಹೇಳಿದ್ದೇನೆ. ಅದು ನಿಮಗೆ ನೋವುಂಟಾಗಿದೆ ಎಂದು ಭಾವಿಸೋಣ. ನಾನು ಆ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ನಮ್ಮ ಪ್ರಯತ್ನವು ಯಾವಾಗಲೂ ಸಮತೋಲನದಲ್ಲಿರಬೇಕು. ನಾವು ಎಂದಿಗೂ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಆದರೆ ಸಿಂಗ್‌ರವರೇ, ನಾವು ಕೂಡಾ ಮಾನವರು. ಇದ್ದಕ್ಕಿದ್ದಂತೆ ಈ ರೀತಿ ಏನಾದರೂ ಸಂಭವಿಸುತ್ತದೆ," ಎಂದು ತಿಳಿಸಿದ್ದಾರೆ.

"ಇದು ಯಾರಿಗಾದರೂ ನೋವುಂಟುಮಾಡಿದರೆ, ತಮ್ಮ ಅಭಿಪ್ರಾಯವನ್ನು ಹಿಂತೆಗೆದುಕೊಳ್ಳುತ್ತೇನೆ. ಈ ಪ್ರಕರಣದಲ್ಲಿ ಯಾವುದೇ ವಕೀಲ ಅಥವಾ ಏಜೆನ್ಸಿಯ ವಿರುದ್ಧ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡಿಲ್ಲ," ಎಂದು ನ್ಯಾಯಮೂರ್ತಿ ಶಿಂಧೆ ಆರಂಭದಲ್ಲಿಯೇ ಸ್ಪಷ್ಟಪಡಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
Bombay High Court headed by Justice SS Shinde has withdrawn the oral statements made in praise of Elgar Parishad accused, late Father Stan Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X