ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13 ಅಂತಾರಾಷ್ಟ್ರೀಯ ಮಾರ್ಗಗಳ ಹಾರಾಟ ರದ್ದು ಪಡಿಸಿದ ಜೆಟ್ ಏರ್‌ವೇಸ್

|
Google Oneindia Kannada News

ಮುಂಬೈ, ಮಾರ್ಚ್ 23: ಈಗಾಗಲೇ ನಷ್ಟದಲ್ಲಿರುವ ಜೆಟ್ ಏರ್‌ವೇಸ್ 13 ಅಂತಾರಾಷ್ಟ್ರೀಯ ಮಾರ್ಗಗಳಿಗೆ ಹಾರಾಟವನ್ನು ರದ್ದುಪಡಿಸಿದೆ.

ಏಪ್ರಿಲ್ ಅಂತ್ಯದವರೆಗೆ 13 ಅಂತಾರಾಷ್ಟ್ರೀಯ ಮಾರ್ಗಗಳಿಗೆ ಹಾರಾಟ ನಡೆಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ದೆಹಲಿ, ಮುಂಬೈಗೆ ಸಂಚರಿಸುವ ವಿಮಾನಗಳ ಹಾರಾಟ ಅಂತರವನ್ನು ಕೂಡ ಕಡಿಮೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನೌಕರರಿಗೆ ವೇತನ ನೀಡದ ಕಾರಣ ಜೆಟ್‌ಲೈಟ್‌ನ ಎರಡು ವಿಮಾನ ಸೇರಿ ಏಳು ವಿಮಾನಗಳ ಹಾರಾಟವು ಕೂಡ ಶುಕ್ರವಾರಕ್ಕೆ ಸ್ಥಗಿತಗೊಂಡಿದೆ.

ಮುಂಬೈ-ಮ್ಯಾನ್‌ಚೆಸ್ಟರ್ ನಡುವಿನ ಹಾರಾಟವನ್ನು ಈಗಾಗಲೇ ಸ್ಥಗಿತಗೊಳಿಸಿದೆ. ದೆಹಲಿಯಿಂದ ಅಬುಧಾಬಿ ಒಂದು ವಾರಕ್ಕೆ 9 ವಿಮಾನ, ಢಾಕಾ(11) ಹಾಂಗ್‌ಕಾಂಗ್ ಹಾಗೂ ರಿಯಾದ್‌ಗೆ ವಾರಕ್ಕೆ ಏಳು ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

Jet Airways Suspends Services To 13 International Routes Till April End

ಬೆಂಗಳೂರಿನಿಂದ ಸಿಂಗಾಪುರಕ್ಕೆ ದಿನಕ್ಕೆ ಎರಡು ಬಾರಿ ಹಾರಾಟ ನಡೆಸುತ್ತಿದ್ದ ವಿಮಾನ ಸಂಚಾರವನ್ನೂ ಕೂಡ ಸ್ಥಗಿತಗೊಳಸಿಲಾಗಿದೆ.

ದೆಹಲಿ , ಮುಂಬೈನಿಂದ ಕಟ್ಮಂಡು, ಬ್ಯಾಂಗ್‌ಕಾಕ್, ದೋಹಾ, ಕವೈತ್, ಸಿಂಗಾಪುರಕ್ಕೆ ತೆರಳುವ ವಿಮಾನಗಳ ಹಾರಾಟ ಇಳಿಕೆ ಮಾಡಲಾಗಿದೆ.ಜೆಟ್ ಏರ್ವೇಸ್ ಸಂಸ್ಥೆಯಲ್ಲಿ ಹತ್ತಿರ ಹತ್ತಿರ 23 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ.

ವಿಮಾನ ಸಂಸ್ಥೆಯ ಸದ್ಯ ಪರಿಸ್ಥಿತಿಯಲ್ಲಿ ಉದ್ಯೋಗ ಉಳಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದು ಜೆಟ್ ಏರ್ವೇಸ್ ಇದಕ್ಕಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ಗಾಳ ಹಾಕಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಜೆಟ್ ಏರ್ವೇಸ್ ನಲ್ಲಿರುವ ಉದ್ಯೋಗಗಳನ್ನು ಉಳಿಸಿವುದೂ ಸಹ ಅನಿವಾರ್ಯವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಪೈಕಿ ಸ್ಥಗಿತಗೊಂಡಿರುವ ಉಳಿದಿರುವ 40 ವಿಮಾನಗಳನ್ನು ಖರೀದಿಸುವಂತೆ ಮನವಿ ಮಾಡುವ ಆಯ್ಕೆಯನ್ನೂ ಪರಿಗಣಿಸಿದೆ.

English summary
Jet Airways, on the verge of going belly-up, has suspended operations on as many as 13 more international routes till end-April even as it grounded seven more planes due to non-payment of rentals, taking the number of suchaircraft to 54.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X