ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ

|
Google Oneindia Kannada News

ಮುಂಬೈ, ಏಪ್ರಿಲ್ 26: ಆರ್ಥಿಕ ಸಂಕಷ್ಟದಿಂದ ಮುಚ್ಚುವ ಸ್ಥಿತಿಗೆ ತಲುಪಿರುವ ಜೆಟ್ ಏರ್‌ವೇಸ್ ವಿಮಾನಸಂಸ್ಥೆಯ ಸಿಬ್ಬಂದಿಗೆ ಉದ್ಯೋಗ ನೀಡುವುದಾಗಿ ಹೇಳುವ ಮೂಲಕ ಸ್ಪೈಸ್ ಜೆಟ್ ಅವರೆಡೆಗೆ ಸಹಾಯಹಸ್ತ ಚಾಚಿತ್ತು. ಆದರೆ, ಅದೇ ಸ್ಪೈಸ್ ಜೆಟ್ ಹಿರಿಯ ಅಧಿಕಾರಿಯೊಬ್ಬರು ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ತಮಗೆ ಅವಮಾನ ಎಸಗಿದ್ದಾರೆ ಎಂದು ಜೆಟ್ ಏರ್ ವೇಸ್ ಸಿಬ್ಬಂದಿ ಆರೋಪಿಸಿದ್ದಾರೆ.

ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ಗೆ ಸ್ಪೈಸ್‌ಜೆಟ್ ಬಣ್ಣ! ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ಗೆ ಸ್ಪೈಸ್‌ಜೆಟ್ ಬಣ್ಣ!

ಸ್ಪೈಸ್ ಜೆಟ್‌ನ ಹಿರಿಯ ಸಿಬ್ಬಂದಿಯೊಬ್ಬರು ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆ ವೇಳೆ ಜೆಟ್ ಏರ್‌ವೇಸ್‌ನಿಂದ ಕೆಲವು ಪೈಲಟ್‌ಗಳಿಗೆ ತಾವು ದಯಾಧರ್ಮ ಮಾಡುತ್ತಿರುವುದಾಗಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಜೆಟ್ ಏರ್‌ವೇಸ್ ಆಘಾತ ವ್ಯಕ್ತಪಡಿಸಿದೆ.

ಜೆಟ್ ಏರ್‌ವೇಸ್ ಉದ್ಯೋಗಿಗಳ ಪಾಲಿಗೆ ಆಶಾಕಿರಣವಾದ ಸ್ಪೈಸ್ ಜೆಟ್ಜೆಟ್ ಏರ್‌ವೇಸ್ ಉದ್ಯೋಗಿಗಳ ಪಾಲಿಗೆ ಆಶಾಕಿರಣವಾದ ಸ್ಪೈಸ್ ಜೆಟ್

ಜೆಟ್ ಏರ್ ವೇಸ್ ಏಪ್ರಿಲ್ 17ರಿಂದ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದ ಬಳಿಕ 1,300 ಪೈಲಟ್‌ಗಳು ಬೀದಿಗೆ ಬಂದಿದ್ದಾರೆ. 20 ಸಾವಿರಕ್ಕೂ ಅಧಿಕ ಉದ್ಯೋಗಿಗಳ ಉದ್ಯೋಗ ಡೋಲಾಯಮಾನವಾಗಿದೆ.

Jet Airways pilots alleged humilation by SpiceJet official at job Interview

'ಇತ್ತೀಚೆಗೆ ಸ್ಪೈಸ್‌ಜೆಟ್‌ನ ಉನ್ನತ ಮ್ಯಾನೇಜ್ಮೆಂಟ್‌ನೊಂದಿಗೆ ನೇಮಕಾತಿ ಸಂದರ್ಶನದಲ್ಲಿ ಪಾಲ್ಗೊಂಡ ನಮ್ಮ ಸದಸ್ಯರನ್ನು ನಡೆಸಿಕೊಂಡಿರುವ ರೀತಿ ಕೇಳಿ ಅಘಾತ ಮತ್ತು ತೀವ್ರ ಬೇಸರವಾಗಿದೆ. ಇದು ಸತ್ಯವಾದರೆ, ಇಂತಹ ವೃತ್ತಿಪರವಲ್ಲದ ವರ್ತನೆಯನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಏಕೆಂದರೆ ಅದು ಅವಮಾನಕಾರಿ ಹಾಗೂ ನಮ್ಮ ಸಹೋದ್ಯೋಗಿಗಳಿಗೆ ತೀವ್ರ ಘಾಸಿ ಉಂಟುಮಾಡಿದೆ' ಎಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ ಹೇಳಿದೆ.

ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್ ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್

ಈ ಆರೋಪ ಸಂಪೂರ್ಣ ಸುಳ್ಳು ಮತ್ತು ತಿರುಚಿರುವಂಥದ್ದು ಎಂದು ಸ್ಪೈಸ್ ಜೆಟ್ ತಳ್ಳಿಹಾಕಿದೆ. ತನ್ನ ತಂಡ ಪೈಲಟ್‌ಗಳ ನೇಮಕಾತಿಗೆಂದು ನಗರಕ್ಕೆ ಬಂದಿದೆಯೇ ಹೊರತು, ಅವರನ್ನು ಅವಮಾನ ಮಾಡುವುದ್ದಕ್ಕಲ್ಲ ಎಂದಿದೆ.

English summary
Jet Airways pilot union expressed shock over allegation by Some Jet Airways pilots of humiliation by a senior SpiceJet executive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X