ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂಸಿ ಬ್ಯಾಂಕ್ ನಲ್ಲಿ 90 ಲಕ್ಷ ಇಟ್ಟಿದ್ದ ಜೆಟ್ ಏರ್ ವೇಸ್ ಮಾಜಿ ಉದ್ಯೋಗಿ ಸಾವು

|
Google Oneindia Kannada News

ಮುಂಬೈ, ಅಕ್ಟೋಬರ್ 15: ಬ್ರಹ್ಮಾಂಡ ವಂಚನೆಯ ಸುಳಿಗೆ ಸಿಲುಕಿರುವ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಐವತ್ತೊಂದು ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ. ಬ್ಯಾಂಕ್ ವಿರುದ್ಧ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಅವರು ಮೃತಪಟ್ಟಿದ್ದಾರೆ.

Recommended Video

ಪೆಟ್ರೋಲ್, ಡೀಸೆಲ್ ಬೆಲೆ ತ್ವರಿತ ಏರಿಕೆ, ಮುಂಬೈನಲ್ಲಿ ಅಧಿಕ | Oneindia Kannada

ಸಂಜಯ್ ಗುಲಾಟಿ ಮೃತರು. ಅವರು ಜೆಟ್ ಏರ್ ವೇಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು. ಪಿಎಂಸಿ ಬ್ಯಾಂಕ್ ನ ಓಶಿವಾರ ಶಾಖೆಯಲ್ಲಿ ಖಾತೆ ಹೊಂದಿದ್ದರು. ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಸಂಜಯ್ ಗುಲಾಟಿ ಅವರಿಗೆ ಸೇರಿದ ತೊಂಬತ್ತು ಲಕ್ಷ ರುಪಾಯಿ ಬ್ಯಾಂಕ್ ನಲ್ಲಿ ತಗಲ್ಹಾಕಿಕೊಂಡಿತ್ತು.

ಪಿಎಂಸಿ ಬ್ಯಾಂಕ್ ಪ್ರಮುಖ ಆರೋಪಿಯ ಖಾಸಗಿ ವಿಮಾನ, 22 ರೂಮ್ ಬಂಗಲೆ...ಪಿಎಂಸಿ ಬ್ಯಾಂಕ್ ಪ್ರಮುಖ ಆರೋಪಿಯ ಖಾಸಗಿ ವಿಮಾನ, 22 ರೂಮ್ ಬಂಗಲೆ...

ಪ್ರತಿಭಟನಾ ಮೆರವಣಿಗೆಯಿಂದ ವಾಪಸಾದ ಮೇಲೆ ಊಟ ಮಾಡುವ ವೇಳೆ ಪಾರ್ಶ್ವ ವಾಯುವಿನಿಂದ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ಗುಲಾಟಿ ಅವರಿಗೆ ಬೇರೆ ವೈದ್ಯಕೀಯ ಸಮಸ್ಯೆಗಳು ಏನಾದರೂ ಇದ್ದವೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Jet Airways Former Employee Who Had Account In PMC Bank, Died

ಪಿಎಂಸಿ ಬ್ಯಾಂಕ್ ಖಾತೆದಾರರು ಹಣ ವಿಥ್ ಡ್ರಾ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಇಪ್ಪತ್ತೈದರಿಂದ ನಲವತ್ತು ಸಾವಿರಕ್ಕೆ ಹೆಚ್ಚಳ ಮಾಡಿದೆ. ಇದಕ್ಕೂ ಮುನ್ನ ಪಿಎಂಸಿ ಬ್ಯಾಂಕ್ ನಲ್ಲಿ ನಾಲ್ಕು ಸಾವಿರದ ಮುನ್ನೂರು ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ಬಯಲಾಗಿತ್ತು. ಬ್ಯಾಂಕ್ ನಿಂದ ನೀಡಲಾದ ಒಟ್ಟಾರೆ ಸಾಲದಲ್ಲಿ ಶೇಕಡಾ ಎಪ್ಪತ್ಮೂರರಷ್ಟನ್ನು ಮುಂಬೈ ಮೂಲದ ಎಚ್ ಡಿಐಎಲ್ ಗೆ ನೀಡಲಾಗಿದೆ.

English summary
Sanjay Gulati, Jet airways former employee who had an account in PMC bank, died on Monday in Mumbai. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X