ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಯನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸಿದರೆ ಮುಂಬೈ ಪೊಲೀಸ್?

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ರನ್ನ ಬಲವಂತವಾಗಿ ಬೆಂಗಳೂರಿಗೆ ಕಳಿಸಿದರಾ ಮುಂಬೈ ಪೊಲೀಸ್ | Oneindia Kannada

ಮುಂಬೈ, ಜುಲೈ 10: ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ಬಲವಂತವಾಗಿ ಬೆಂಗಳೂರಿಗೆ ಕಳಿಸುತ್ತಿದ್ದಾರೆ ಎಂದು ಮುಂಬೈ ಕಾಂಗ್ರೆಸ್ ಮುಖಂಡ ಮಿಲಿಂದ್ ದೇವ್ರಾ ಅವರ ಕಚೇರಿ ಮೂಲಗಳು ದೂರಿವೆ.

ಡಿಕೆಶಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರ ವಿರುದ್ಧ ಎಚ್ಡಿಕೆ ಗರಂಡಿಕೆಶಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರ ವಿರುದ್ಧ ಎಚ್ಡಿಕೆ ಗರಂ

"ಪೊಲೀಸ್ ವಶದಲ್ಲಿದ್ದ ಮಿಲಿಂದ್ ದೇವ್ರಾ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಬಿಡುಗಡೆ ಮಾಡಲಾಗಿದೆ. ಖುದ್ದಾಗಿ ಮುಂಬೈ ಪೊಲೀಸರೇ ಡಿಕೆ ಶಿವಕುಮಾರ್ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಡಿಕೆ ಶಿವಕುಮಾರ್ ಹೇಳಿದರು.

Live Updates: 'ಬಿಜೆಪಿಯವರು ಲಜ್ಜೆಗೆಟ್ಟವರು': ಸಿದ್ದರಾಮಯ್ಯLive Updates: 'ಬಿಜೆಪಿಯವರು ಲಜ್ಜೆಗೆಟ್ಟವರು': ಸಿದ್ದರಾಮಯ್ಯ

ಬಿಡುಗಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, "ನನಗೆ ಈಗಲೂ ಆತ್ಮವಿಶ್ವಾಸವಿದೆ. ಎಲ್ಲಾ ಶಾಸಕರೂ ವಾಪಸ್ ಬರುತ್ತಾರೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸುಭದ್ರವಾಗಿರುತ್ತದೆ. ಅವರಲ್ಲಿ ಯಾರೂ ಪಕ್ಷವನ್ನು ತೊರೆಯುತ್ತಿಲ್ಲ" ಎಂದು ಡಿಕೆ ಶಿವಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Is DK Shivakumar is being forcibly sent back to Bengaluru?

ಮುಂಬೈಯ ರೆನೈಸಾನ್ಸ್ ಹೊಟೇಲ್ ನಲ್ಲಿ ತಂಗಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ವಾಪಸ್ ಕರೆತರುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಮುಂಬೈಗೆ ತೆರಳಿದ್ದರು. ಆದರೆ ಹೊಟೇಲ್ ಒಳಗೆ ಅವರಿಗೆ ಪ್ರವೇಶಿಸಲು ಪೊಲೀಸರು ಬಿಟ್ಟಿರಲಿಲ್ಲ. ಪಟ್ತು ಬಿಡದೆ ಅಲ್ಲಿಯೇ ಇದ್ದ ಡಿಕೆ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ.

English summary
Office of Milind Deora: Mr. Milind Deora and other Congress leaders have been released. The police are taking Mr. DK Shivkumar to the airport. He is being forcibly sent back to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X