ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಐಆರ್‌ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆ

|
Google Oneindia Kannada News

ಮುಂಬೈ, ಮೇ 30; ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದ ಐಆರ್‌ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆಯಾಗಿದೆ.

ಸೋಮವಾರ ಎನ್‌ಸಿಬಿ ಮುಂಬೈ ವಿಭಾಗದ ಮಾಜಿ ವಲಯ ನಿರ್ದೇಶಕ ಸಮೀರ್ ವಾಖಂಡೆಯನ್ನು ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ. 2008ನೇ ಬ್ಯಾಚ್ ಐಆರ್‌ಎಸ್ ಅಧಿಕಾರಿ ಸಮೀರ್ ವಾಖಂಡೆ 2020ರ ಸೆಪ್ಟೆಂಬರ್‌ನಿಂದ ಎನ್‌ಸಿಬಿಯಲ್ಲಿದ್ದರು.

ಡ್ರಗ್ಸ್ ಪ್ರಕರಣ ಕಳಪೆ ತನಿಖೆ: ಸಮೀರ್ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆ ಡ್ರಗ್ಸ್ ಪ್ರಕರಣ ಕಳಪೆ ತನಿಖೆ: ಸಮೀರ್ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆ

2021ರ ಡಿಸೆಂಬರ್ 31ರಂದು ಅವರ ಎನ್‌ಸಿಬಿ ಅವಧಿ ಮುಕ್ತಾಯಗೊಂಡಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಂಡಿದ್ದರು. ಈಗ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಆರ್ಯನ್ ಖಾನ್ ಡ್ರಗ್ ಪ್ರಕರಣ: ಎನ್‌ಸಿಬಿಯಲ್ಲಿ ಸಮೀರ್ ವಾಂಖೆಡೆ ಅಧಿಕಾರಾವಧಿ ಕೊನೆಗೊಂಡಿದೆಆರ್ಯನ್ ಖಾನ್ ಡ್ರಗ್ ಪ್ರಕರಣ: ಎನ್‌ಸಿಬಿಯಲ್ಲಿ ಸಮೀರ್ ವಾಂಖೆಡೆ ಅಧಿಕಾರಾವಧಿ ಕೊನೆಗೊಂಡಿದೆ

IRS Officer Sameer Wankhede Transferred From Mumbai To Chennai

ಕಳೆದ ವರ್ಷ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು. ಶಾರೂಖ್ ಪುತ್ರ ಹಲವು ದಿನಗಳ ಕಾಲ ಜೈಲುವಾಸ ಅನುಭವಿಸುವಂತೆಯೂ ಆಗಿತ್ತು.

ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ನೀಡಿದ ದೂರಿನ ತನಿಖೆ ಆರಂಭ ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ನೀಡಿದ ದೂರಿನ ತನಿಖೆ ಆರಂಭ

ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು ಸಮೀರ್ ವಾಖಂಡೆ. ಈ ಪ್ರಕರಣದ ಬಳಿಕ ಸಮೀರ್ ವಾಖಂಡೆ ದೇಶಾದ್ಯಂತ ಸುದ್ದಿಯಾದರು. ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ವಾಖಂಡೆ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು.

ಆರ್ಯನ್ ಖಾನ್ ಪ್ರಕರಣದಲ್ಲಿ 25 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬುದು ಸೇರಿದಂತೆ ವೈಯಕ್ತಿಕ ವಿಚಾರಗಳನ್ನು ಸಹ ಮುಂದಿಟ್ಟುಕೊಂಡು ಆರೋಪ ಮಾಡಿದರು. ಆರೋಪಗಳಿಗೆ ಸಮೀರ್ ವಾಖಂಡೆ ದಿಟ್ಟವಾಗಿಯೇ ಉತ್ತರ ನೀಡಿದ್ದರು.

Recommended Video

ಸೋತ್ವಿ ಅಂತ ಬೇಜಾರ್ ಆಗ್ದೆ ಚಹಲ್ ಪತ್ನಿ ಜೊತೆ ಕುಣಿದು ಕುಪ್ಪಳಿಸಿದ ಜೋಸ್ ಬಟ್ಲರ್ | OneIndia Kannada

ಈ ಪ್ರಕರಣದಲ್ಲಿ ಆರ್ಯನ್‌ ಖಾನ್‌ಗೆ ಕಳೆದ ವಾರ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. ಸಮೀರ್ ವಾಖಂಡೆ ಸಹ ಸದ್ಯ ಎನ್‌ಸಿಬಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ.

English summary
2008 batch IRS officer and former Mumbai NCB zonal director Sameer Wankhede transferred from Mumbai to Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X