ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್: ಗುರುನಾಥ್ ಮತ್ತೆ ಕಟಂಕ ಶುರು

By Mahesh
|
Google Oneindia Kannada News

ಮುಂಬೈ, ಸೆ.21:ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತ ಮುಂಬೈ ಪೊಲೀಸರ ಚಾರ್ಚ್ ಶೀಟ್ ನಲ್ಲಿ 22 ಆರೋಪಿಗಳು ಸೇರಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮತ್ತು ವಿಂದೂ ದಾರಾ ಸಿಂಗ್ ಹೆಸರುಗಳು ಸೇರಿವೆ. ಪಾಕಿಸ್ತಾನದ ಅಂಪೈರ್ ಅಸದ್ ರೌಫ್ ಹೆಸರು ಕೂಡಾ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಭಾನುವಾರ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ.

ಎಲ್ಲ 22 ಆರೋಪಿಗಳ ವಿರುದ್ಧ ವಂಚನೆ, ಜೂಜು, ಸಂಚು ಹಾಗೂ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಬೆಟ್ಟಿಂಗ್ ನಡೆಸಿರುವ ಬಗ್ಗೆ ಸಾಕ್ಷ್ಯಗಳಿವೆ ಎಂದು ಮೂಲಗಳು ತಿಳಿಸಿವೆ. ನಿರ್ದಿಷ್ಟ ಹಣಕಾಸು ವ್ಯವಹಾರ ಮತ್ತು ಧ್ವನಿ ಮುದ್ರಣಗಳನ್ನು ಆಧರಿಸಿಯೇ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆಯಂತೆ.

ಆದರೆ, ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಪಾಕಿಸ್ತಾನದ ಮಾಜಿ ಅಂಪೈರ್ ಅಸಾದ್ ರೌಫ್ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಹೆಚ್ಚಿನ ವಿವರಗಳಿಲ್ಲ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ಲಭ್ಯ ಮಾಹಿತಿ ಆಧಾರಿಸಿ ಅಸದ್ ರೌಫ್ ಆವರ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ಗೊಂದಲ ಇದೆ. ಪಾಕಿಸ್ತಾನದ ಬುಕ್ಕಿಗಳನ್ನು ಗುರುತಿಸಬೇಕಾಗಿದೆ. ಪಾಕ್ ಬುಕ್ಕಿಗಳು ಮತ್ತು ಪ್ರಕರಣದಲ್ಲಿ ಅವರ ಪಾತ್ರ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

IPL betting: Gurunath Meiyappan to be named in chargesheet

ಚೆನ್ನೈ ಸೂಪರ್ ಕಿಂಗ್ಸ್ ನ ಮಾಲೀಕರಾಗಿರುವ ಎನ್. ಶ್ರೀನಿವಾಸನ್ ಅಳಿಯ ಮೇಯಪ್ಪನ್ ವಿರುದ್ಧ ವಂಚನೆ ಮತ್ತು ಬೆಟ್ಟಿಂಗ್ ಆರೋಪ ಎದುರಿಸಲಿದ್ದಾರೆ. ಆರೋಪಿಗಳ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಸೆಕ್ಷನ್ 4 ಹಾಗೂ 5 ಹಾಗೂ ಜೂಜು ನಿಯಂತ್ರಣ ಕಾಯ್ದೆ ಸೆಕ್ಷನ್ 465,466,468,471,490, ಐಪಿಸಿ ಸೆಕ್ಷನ್ 420,212,120ಬಿ ಹಾಗೂ 34ರ ಅನ್ವಯ ಕೇಸು ದಾಖಲಿಸಿ ದೋಷಾರೋಪಣ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಪೊಲೀಸರು 92 ಮೊಬೈಲ್ ಫೋನ್ 18 ಸಿಮ್ ಕಾರ್ಡ್, ಲ್ಯಾಪ್ ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನ, ದುಬೈ ಹಾಗೂ ಭಾರತದ ಬುಕ್ಕಿಗಳ ವಿಚಾರಣೆ ನಡೆಸಿದ್ದಾರೆ.

English summary
Mumbai Police will "very soon" file a charge sheet in connection with the Indian Premier League (IPL) betting scandal case naming, among others, Chennai Super Kings team principal Gurunath Meiyappan, Bollywood actor Vindoo Singh and Pakistani umpire Asad Rauf in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X