ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಜೆಟ್ ಬಗ್ಗೆ ಮೂಡೀಸ್ ಗಿಲ್ಲ ಉತ್ತಮ ಅಭಿಪ್ರಾಯ!

|
Google Oneindia Kannada News

ಮುಂಬೈ, ಫೆಬ್ರವರಿ 02: ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರ ಮಂದಿಸಿದ ಬಜೆಟ್ ಬಗ್ಗೆ ಮಧ್ಯಮ ವರ್ಗದವರಂತೂ ಖುಷಿ ವ್ಯಕ್ತಪಡಿಸಿದ್ದಾರೆ.

ಆದರೆ ಜಾಗತಿಕ ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಈ ಬಜೆಟ್ ಆರ್ಥಿಕತೆಯ ಮೇಲೆ ಬೀರಬಹುದಾದ ಋಣಾತ್ಮಕ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಬಜೆಟ್‌ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಗಳುಕೇಂದ್ರ ಬಜೆಟ್‌ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಗಳು

Interim union budget 2019: Moodys says it credit negative!

"ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ವಿತ್ತೀಯ ಕೊರತೆಯನ್ನು ನೀಗಿಸಲು ಯಾವುದೇ ಕ್ರಮಗಳಿಲ್ಲ. ಆದಾಯ ಸೃಷ್ಟಿಗೆ ಯಾವುದೇ ಯೋಜನೆಗಳಿಲ್ಲ. ಬದಲಾಗಿ ಸರ್ಕಾರದ ವೆಚ್ಚವೇ ಆದಾಯಕ್ಕಿಂತ ಹೆಚ್ಚಾಗುವುದರಿಂದ ಇದು ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವಿತ್ತೀಯ ಕೊರತೆ ಬಹುದೊಡ್ಡ ಸಮಸ್ಯೆಯಾಗಬಹುದು" ಎಂದು ಮೂಡೀಸ್ ಹೇಳಿದೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

2019 ರ ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮುನ್ನ ಮೋದಿ ಸರ್ಕಾರ ಈ ಅವಧಿಯಲ್ಲಿ ಮಂಡಿಸಿದ ಕೊನೆಯ ಬಜೆಟ್ ಇದಾಗಿದ್ದು, ನಿರೀಕ್ಷೆಯಂತೆಯೇ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದು ತಿಳಿಯುತ್ತದೆ.

ಸರ್ಕಾರಿ ನೌಕರರ ವೇತನ ಏರಿಕೆ, ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲಸರ್ಕಾರಿ ನೌಕರರ ವೇತನ ಏರಿಕೆ, ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲ

ಮಧ್ಯಮ ವರ್ಗ, ರೈತರು ಮತ್ತು ಕಾರ್ಮಿಕರನ್ನೇ ತನ್ನ ಆದ್ಯತೆಯನ್ನಾಗಿಸಿಕೊಂಡಿರುವುದು ಬಿಜೆಪಿಯ ಚುನಾವಣಾ ಅಸ್ತ್ರವೇ ಅನ್ನಿಸುತ್ತದೆ. ಆದರೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಆರ್ಥಿಕತೆಯ ಮೇಲೆ ಹೆಚ್ಚು ಋಣಾತ್ಮಕ ಪರಿಣಾಮವನ್ನೇ ಬೀರಬಹುದು ಎಂಬ ಕಳವಳವನ್ನು ಮೂಡೀಸ್ ವ್ಯಕ್ತಪಡಿಸಿದೆ.

English summary
Global rating agency Moody's said in the interim budget there is an absence of new policies to boost revenues but has many measures leading to higher expenditure which though will increase consumption will also increase the fiscal burden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X