ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ನಟನೆಯ 'ಪುಷ್ಪಕ ವಿಮಾನ' ವಿರುದ್ಧ ಕೇಸ್ ದಾಖಲು

ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿದ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.

By Mahesh
|
Google Oneindia Kannada News

ಮುಂಬೈ, ಮಾರ್ಚ್ 22: 'ಅಭಿನಯ ಚತುರ' ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿ, ಕಥೆ ಕದ್ದಿರುವ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.

ನಿರ್ದೇಶಕ ಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ವಿರುದ್ಧ ಕ್ರೋಸ್ ಪಿಕ್ಚರ್ಸ್ ಇಂಡಿಯಾ ದಾವೆ ಹೂಡಿದೆ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ']

ಕನ್ನಡದಲ್ಲಿ ತೆರೆ ಕಂಡಿರುವ ಪುಷ್ಪಕ ವಿಮಾನ 2017 ಚಿತ್ರವು ಕೊರಿಯನ್ ಚಿತ್ರ 'ಮಿರಾಕಲ್ ಇನ್ ಸೆಲ್ ನಂ.7' ದ ರಿಮೇಕ್ ಆಗಿದೆ. ಈ ಮೂಲದ ಚಿತ್ರದ ರಿಮೇಕ್ ಹಕ್ಕುಗಳು ಕ್ರೋಸ್(Kross) ಪಿಕ್ಚರ್ಸ್ ಇಂಡಿಯಾ ಹಾಗೂ ಕ್ರೋಸ್ ಟೆಲಿವಿಷನ್ ಇಂಡಿಯಾ ಸಂಸ್ಥೆ ಬಳಿ ಇವೆ. ಆದರೆ, ಕೊರಿಯನ್ ಚಿತ್ರದ ಆಧಾರ ಮೇಲೆ(ಚಿತ್ರದ ನೋಡಿದವರ ಅನಿಸಿಕೆಯಂತೆ ಸೀನ್ ಟು ಸೀನ್ ಭಟ್ಟಿ ಇಳಿಸಿರುವುದು) ಪುಷ್ಪಕ ವಿಮಾನವನ್ನು ಕನ್ನಡದಲ್ಲಿ ನಿರ್ಮಿಸಲಾಗಿದೆ.

Infringement Case filed against makers of the movie Pushpaka Vimana (2017)

ಆದರೆ, ಚಿತ್ರ ನಿರ್ಮಿಸಲುಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್, ಸುಕ್ರುತ್ ದೇವೇಂದ್ರ, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವಂತ್ ಅವರು ಯಾವುದೇ ಅನುಮತಿ ಪಡೆದಿಲ್ಲ.

ಈ ಮೂಲಕ ರಿಮೇಕ್ ಹಕ್ಕು ಉಲ್ಲಂಘಿಸಿ ಚಿತ್ರ ನಿರ್ಮಿಸಿದ್ದಲ್ಲದೆ ಚಿತ್ರ ಪ್ರದರ್ಶಿಸಿದ್ದಾರೆ. ಟಿವಿ ರೈಟ್ಸ್ ಕೂಡಾ ಮಾರಾಟ ಮಾಡಿದ್ದು, ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದೆ.[ಕಮಲ್ -ರಮೇಶ್ ಜೋಡಿ ಉತ್ತಮ ವಿಲನ್ ನಿಷೇಧಕ್ಕೆ ಕರೆ]

ಈ ಕೂಡಲೇ ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಹಾಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಕ್ರೊಸ್ ಇಂಡಿಯಾ ಸಂಸ್ಥೆ ಈಗ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿದೆ.

2004 ರಲ್ಲಿ ಸ್ಥಾಪನೆಯಾದ ಕ್ರೊಸ್ ಪಿಕ್ಚರ್ಸ್ ಒಂದು ಗಡಿಯಾಚೆಗಿನ ಸಿನಿಮಾ ಹಾಗೂ ಟೆಲಿವಿಷನ್ ಪ್ರೊಡೆಕ್ಷನ್ ಸಂಸ್ಥೆಯಾಗಿದೆ. ಸಿಯೋಲ್, ಲಾಸ್ ಏಂಜಲೀಸ್ ಹಾಗೂ ಮುಂಬೈನಲ್ಲಿ ಕಚೇರಿ ಹೊಂದಿದೆ. 2015ರಿಂದ ಭಾರತದಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, ಸದ್ಯ ಸುಜೊಯ್ ಘೋಶ್ ನಿರ್ದೇಶನ 'ಸಸ್ಪೆಕ್ಟ್ ‍‍X' ಚಿತ್ರದ ನಿರ್ಮಾಣದಲ್ಲಿ ತೊಡಗಿದೆ.

English summary
According to a suit filed against the makers of the Kannada movie Pushpaka Vimana (2017), they have not purchased the Kannada-language remake rights of the movie. It is an infringement of the rights owned by Kross Pictures India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X