• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದ್ರಾಣಿ ಮುಖರ್ಜಿ ಸೇರಿದಂತೆ 38 ಕೈದಿಗಳಿಗೆ ಕೊರೊನಾ

|

ಮುಂಬೈ, ಏಪ್ರಿಲ್ 22: ಶೀನಾ ಬೋರಾ ಹತ್ಯೆ ಮತ್ತು ಐಎನ್‌ಎಕ್ಸ್ ಮೀಡಿಯಾ ಹಗರಣದ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ 38 ಮಂದಿ ಕೈದಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಇಂದ್ರಾಣಿ ಹಾಗೂ ಇತರೆ ಸೋಂಕಿತ ಕೈದಿಗಳನ್ನು ಬೈಕುಲ್ಲಾ ಜೈಲಿನಿಂದ ಪಟನ್ಕರ್ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಐಸೊಲೇಷನ್ ಕೇಂದ್ರಕ್ಕೆ ಸೇರಿಸಲಾಗಿದೆ.

ಶೀನಾ ಬೋರಾ ಹತ್ಯೆ: ಇಂದ್ರಾಣಿ ಮುಖರ್ಜಿಗೆ ಜಾಮೀನು ಇಲ್ಲ

2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.

ಶೀನಾ ಬೋರಾ ಹತ್ಯೆ ಆರೋಪಿ ಇಂದ್ರಾಣಿ ಅವರ ಜಾಮೀನು 4 ಬಾರಿ ತಿರಸ್ಕೃತಗೊಂಡಿದೆ. ಬೈಕುಲಾ ಜೈಲಿನಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸಲಾಗಿದ್ದರೂ ಪ್ರತಿ ಕ್ಷಣ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಮಹಾರಾಷ್ಟ್ರ ಹೊಂದಿದೆ. 4,027,827 ಮಂದಿ ಸೋಂಕಿತರಿದ್ದು, 30 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ, 61, 911 ಮಂದಿ ಮೃತಪಟ್ಟಿದ್ದಾರೆ.

English summary
Indrani Mukerjea accused of murder of her daughter Sheena Bora and 38 inmates have tested Test Covid-19 Positive At Mumbai Jail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X