• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎತಿಹಾದ್ ವಿಮಾನದಲ್ಲೇ ಮಗು ಹೆತ್ತ ಮಹಿಳೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

|

ಮುಂಬೈ, ಅಕ್ಟೋಬರ್ 24: ಇಂಡೋನೇಷ್ಯಾದ ಮಹಿಳೆಯೊಬ್ಬರು ಎತಿಹಾದ್ ವಿಮಾನ ಯಾನ ಸಂಸ್ಥೆಯ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆ ವಿಮಾನವು ಬುಧವಾರದಂದು ಬೆಳಗ್ಗೆ ಅಬುಧಾಬಿಯಿಂದ ಜಕಾರ್ತಕ್ಕೆ ತೆರಳುತ್ತಿತ್ತು ಎಂದು ಮುಂಬೈನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ತುರ್ತು ಕಾರಣಕ್ಕಾಗಿ ವಿಮಾನವನ್ನು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಆ ನಂತರ ಮುಂಬೈನ ಅಂಧೇರಿ ಪೂರ್ವದಲ್ಲಿ ಇರುವ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ತಾಯಿ ಹಾಗೂ ಮಗುವಿನ ಚಿಕಿತ್ಸೆ ನಡೆಯುತ್ತಿದೆ.

ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ

ಅಂದ ಹಾಗೆ ಎತಿಹಾದ್ EY-474 ವಿಮಾನವು ನಿಗದಿಯಾದ ಸಮಯಕ್ಕಿಂತ ಕನಿಷ್ಟ ಎರಡು ಗಂಟೆ ತಡವಾಗಿ ಜಕಾರ್ತವನ್ನು ತಲುಪಿದೆ. ಅಂದರೆ ಈ ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 3.05ಕ್ಕೆ ಜಕಾರ್ತವನ್ನು ತಲುಪಬೇಕಿತ್ತು. ಆದರೆ ವೈದ್ಯಕೀಯ ತುರ್ತಿನ ಕಾರಣ ಹೀಗೆ ತಡವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!

ಈ ರೀತಿ ವಿಮಾನದಲ್ಲೇ ಹೆರಿಗೆಯಾದರೆ ಆ ಮಕ್ಕಳಿಗೆ ವಿಮಾನ ಯಾನ ಸಂಸ್ಥೆಯು ವಿಶೇಷ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

English summary
An Indonesian woman delivered a baby on-board an Etihad Airways flight from Abu Dhabi to Jakarta today morning, officials said in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X