ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಡುಡುಗೆ ತೊಟ್ಟಿದ್ದಕ್ಕೆ ವಿಮಾನಕ್ಕೆ 'ನೋ' ಎಂಟ್ರಿ

By Mahesh
|
Google Oneindia Kannada News

ಮುಂಬೈ, ಅ.30: ತುಂಡುಡುಗೆ ತೊಟ್ಟ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫ್ರಾಕ್ ತೊಟ್ಟು ಬಂದಿದ್ದ ಪ್ರಯಾಣಿಕರೊಬ್ಬರನ್ನು ಇಂಡಿಗೋ ಏರ್ ಲೈನ್ಸ್ ವಿಮಾನದವರು ಬಲವಂತವಾಗಿ ಕೆಳಗಿಳಿಸಿದ್ದಾರೆ.

ಮೊಣಕಾಲಿನ ಮಟ್ಟಕ್ಕಿಂತ ಮೇಲಕ್ಕಿರುವ ಫ್ರಾಕ್ ಧರಿಸಿದ ಮಹಿಳೆ ಈ ಹಿಂದೆ ಇದೇ ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದರು ಎಂದು ತಿಳಿದು ಬಂದಿದೆ. ಇಂಡಿಗೋ ಸಂಸ್ಥೆಯಲ್ಲಿ ಆಕೆಯ ತಂಗಿ ಈಗ ಉದ್ಯೋಗಿಯಾಗಿದ್ದು,
ಮುಂಬೈನಿಂದ ದೆಹಲಿ ಪ್ರಯಾಣ ಬೆಳೆಸಲೆಂದು ವಿಮಾನವೇರಿದ್ದರು.

IndiGo says NO to woman in 'short dress

ಇಂಡಿಗೋ ವಿಮಾನ ಸಂಸ್ಥೆ ತನ್ನ ನೌಕರರಿಗೆ ಮತ್ತು ನೌಕರರ ಸಂಬಂಧಿಗಳಿಗೆ ನೀಡುವ ಉಚಿತ ಟಿಕೆಟ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಕೊನೆಗೆ ಎಲ್ಲಾ ಗಲಾಟೆ ನಂತರ ಫ್ರಾಕ್ ಬದಲಿಸಿ, ಪ್ಯಾಂಟ್ ಧರಿಸಿಕೊಂಡು ಬಂದ ಬಳಿಕ ಈ ಮಹಿಳೆಗೆ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ.

ಆದರೆ, ಇಂಡಿಗೋ ಸಿಬ್ಬಂದಿ ಅದನ್ನೇ ನೆಪವಾಗಿಸಿಕೊಂಡು ಮಹಿಳೆಯನ್ನು ವಿಮಾನದಿಂದ ಕೆಳಕ್ಕಿಳಿಸಿದ್ದಾರೆ. ಈ ಬಗ್ಗೆ ಆಕೆ ಪ್ರಶ್ನಿಸಿದ್ದಕ್ಕೆ ಇಂಡಿಗೋ, ಪ್ರಯಾಣಕ್ಕೆಂದು ತಾನು ಉಚಿತವಾಗಿ ನೀಡುವ ಟಿಕೆಟ್​ನಲ್ಲಿ ಪ್ರಯಾಣಿಕರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ತುಂಡುಡುಗೆಯಲ್ಲಿ ಪ್ರಯಾಣವನ್ನೂ ನಿಷೇಧಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ಸಮರ್ಥನೆ ನೀಡಿದೆ.

English summary
A woman was denied permission to fly with IndiGo as she was accused of wearing an "indecent dress". The incident brought severe criticism for the airline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X