ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಹಬ್ಬದ ಸಂದರ್ಭದಲ್ಲಿ ಓಡಲಿವೆ 72 ವಿಶೇಷ ರೈಲು

|
Google Oneindia Kannada News

ಮುಂಬೈ, ಜುಲೈ 6: ದೇಶದೆಲ್ಲೆಡೆ ಕೋವಿಡ್ 19 ನಿಯಂತ್ರಣ ಬಂದಿಲ್ಲದಿದ್ದರೂ ರೈಲ್ವೆ ನಿರಂತರವಾಗಿ ಸಂಚಾರ ಮುಂದುವರೆಸಿದೆ. ಗಣೇಶ ಚತುರ್ಥಿ ವೇಳೆಗೆ ಭಕ್ತಾದಿಗಳ ಅಗತ್ಯವನ್ನು ನೋಡಿಕೊಂಡು ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚುವರಿ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಮುಂದಾಗಿದೆ.

ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಮುಂಬೈ ಹಾಗೂ ಕೊಂಕಣ ಭಾಗದಲ್ಲಿ 72 ವಿಶೇಷ ರೈಲುಗಳು ಸೆಪ್ಟೆಂಬರ್ ತಿಂಗಳಲ್ಲಿ ಸಂಚರಿಸಲಿವೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್/ ಪನ್ವೇಲ್ ಹಾಗೂ ಸಾವಂತ್‌ವಾಡಿ ರಸ್ತೆ/ ರತ್ನಗಿರಿಯಿಂದ ವಿಶೇಷ ರೈಲುಗಳು ಸಂಚಾರ ನಡೆಸಲಿವೆ ಎಂದು ಸೆಂಟ್ರಲ್ ರೈಲ್ವೆ ಪ್ರಕಟಣೆ ಹೊರಡಿಸಿದೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಸಂಚರಿಸಲಿರುವ ಈ ರೈಲುಗಳು ಎಸಿ-2 ಟಯರ್ ಕಮ್ ಎಸಿ 3 ಟಯರ್, ನಾಲ್ಕು ಎಸಿ- ಟಯರ್ , 11 ಸ್ಲೀಪರ್ ಕ್ಲಾಸ್ ಹಾಗೂ 6 ಸೆಕೆಂಡ್ ಕ್ಲಾಸ್ ಸೀಟಿಂಗ್ ಹೊಂದಿರಲಿದೆ ಎಂದು ಸೆಂಟ್ರಲ್ ರೈಲ್ವೆ ತಿಳಿಸಿದೆ. ಜುಲೈ 8ರಿಂದ ಟಿಕೆಟ್ ಬುಕ್ಕಿಂಗ್ ಲಭ್ಯವಿರಲಿದ್ದು, ಐಆರ್‌ಸಿಟಿಸಿ ಅಧಿಕೃತ ವೆಬ್ ತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಹೊಂದಿದ್ದು, ಕೋವಿಡ್ 19 ಮಾರ್ಗಸೂಚಿ ಅನ್ವಯ ಸೂಕ್ತವೆನಿಸಿದ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ಸಿಗಲಿದೆ.

ಸಿಎಸ್‌ಎಂಟಿ-ಸಾವಂತ್‌ವಾಡಿ ರಸ್ತೆ ಪ್ರತಿದಿನ ವಿಶೇಷ (36 ಟ್ರಿಪ್ಸ್)

ಸಿಎಸ್‌ಎಂಟಿ-ಸಾವಂತ್‌ವಾಡಿ ರಸ್ತೆ ಪ್ರತಿದಿನ ವಿಶೇಷ (36 ಟ್ರಿಪ್ಸ್)

01227: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಪ್ರತಿದಿನ 00.20 ಗಂಟೆಗೆ ಹೊರಟು ಸಾವಂತ್‌ವಾಡಿ ರಸ್ತೆ ನಿಲ್ದಾಣವನ್ನು 14:00 ಗಂಟೆಗೆ ತಲುಪಲಿದೆ. ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 22ರ ತನಕ ವಿಶೇಷ ರೈಲು ಸಂಚರಿಸಲಿದೆ.

01228: ಸಾವಂತ್‌ವಾಡಿ ರಸ್ತೆ ನಿಲ್ದಾಣವನ್ನು 14:40 ಗಂಟೆಗೆ ಬಿಟ್ಟು 04:35ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ ತಲುಪಲಿದೆ.

ತಂಗುದಾಣಗಳು: ದಾದರ್, ಥಾಣೆ, ಪನ್ವೆಲ್, ರೋಹಾ, ಮನಗಾವ್, ವೀರ್, ಖೇದ್, ಚಿಲ್ಪುನ್, ಸವರ್ದ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡಾವಳಿ, ವಿಲಾವಡೆ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ಕಂಕವಾಲಿ, ನಂದಗಾಂವ್ ರಸ್ತೆ, ಸಿಂಧುದುರ್ಗ ಮತ್ತು ಕೂಡಲ್.

ಸಿಎಸ್‌ಎಂಟಿ-ರತ್ನಗಿರಿ ವಾರಕ್ಕೆರಡು ಬಾರಿ ವಿಶೇಷ (10 ಟ್ರಿಪ್ಸ್)

ಸಿಎಸ್‌ಎಂಟಿ-ರತ್ನಗಿರಿ ವಾರಕ್ಕೆರಡು ಬಾರಿ ವಿಶೇಷ (10 ಟ್ರಿಪ್ಸ್)

01229: ವಾರಕ್ಕೆರಡು ಬಾರಿ ವಿಶೇಷ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ 13.10 ಗಂಟೆಗೆ ಹೊರಟು ಅದೇ ದಿನ 22.35 ಗಂಟೆಗೆ ರತ್ನಗಿರಿಗೆ ಬರಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 20 ರವರೆಗೆ ಸಂಚರಿಸಲಿದೆ.

01230: ವಾರಕ್ಕೆರಡು ಬಾರಿ ವಿಶೇಷ ರೈಲು ಪ್ರತಿ ಭಾನುವಾರ ಮತ್ತು ಗುರುವಾರ 23.30 ಗಂಟೆಗೆ ರತ್ನಗಿರಿಯಿಂದ ಹೊರಟು ಮರುದಿನ 08.20 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ ತಲುಪಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 23 ರವರೆಗೆ ಸಂಚರಿಸಲಿದೆ.

ನಿಲುಗಡೆಗಳು: ದಾದರ್, ಥಾಣೆ (01229ಕ್ಕೆ ಮಾತ್ರ), ಪನ್ವೆಲ್, ರೋಹಾ, ಮನಗಾಂವ್, ವೀರ್, ಖೇಡ್, ಚಿಲ್ಪುನ್, ಸವರ್ದ, ಅರಾವಳಿ ರಸ್ತೆ ಮತ್ತು ಸಂಗಮೇಶ್ವರ ರಸ್ತೆ,

ಪನ್ವೆಲ್-ಸಾವಂತ್‌ವಾಡಿ ರಸ್ತೆ ವಾರಕ್ಕೆ ಮೂರು ಬಾರಿ ವಿಶೇಷ (16 ಟ್ರಿಪ್ಸ್)

ಪನ್ವೆಲ್-ಸಾವಂತ್‌ವಾಡಿ ರಸ್ತೆ ವಾರಕ್ಕೆ ಮೂರು ಬಾರಿ ವಿಶೇಷ (16 ಟ್ರಿಪ್ಸ್)

01231 ವಾರಕ್ಕೆ ಮೂರು ಬಾರಿ ವಿಶೇಷ ರೈಲು ಪ್ರತಿ ಮಂಗಳವಾರ, ಬುಧವಾರ ಮತ್ತು ಶನಿವಾರ 08.00 ಗಂಟೆಗೆ ಪನ್ವೇಲ್‌ನಿಂದ ಹೊರಟು ಅದೇ ದಿನ 20.00 ಗಂಟೆಗೆ ಸಾವಂತವಾಡಿ ರಸ್ತೆಗೆ ಬರಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 22 ರವರೆಗೆ ಸಂಚರಿಸಲಿದೆ.

01232 ತ್ರಿ-ವಾರಕ್ಕೆ ಮೂರು ಬಾರಿ ವಿಶೇಷ ರೈಲು ಸಾವಂತವಾಡಿ ರಸ್ತೆಯಿಂದ ಪ್ರತಿ ಮಂಗಳವಾರ, ಬುಧವಾರ ಮತ್ತು ಶನಿವಾರ 20.45 ಗಂಟೆಗೆ ಹೊರಟು ಮರುದಿನ 07.10 ಗಂಟೆಗೆ ಪನ್ವೇಲ್ ಗೆ ಬರಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 22 ರವರೆಗೆ ಸಂಚರಿಸಲಿದೆ.

ತಂಗುದಾಣಗಳು: ರೋಹಾ, ಮನಗಾಂವ್, ವೀರ್, ಖೇಡ್, ಚಿಲ್ಪುನ್, ಸವರ್ದ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡಾವಳಿ, ವಿಲಾವಡೆ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ಕಂಕಾವಲಿ, ನಂದಗಾಂವ್ ರಸ್ತೆ, ಸಿಂಧುದುರ್ಗ ಮತ್ತು ಕೂಡಲ್.

ಪನ್ವೆಲ್-ರತ್ನಗಿರಿ ರಸ್ತೆ ವಾರಕ್ಕೆರಡು ಬಾರಿ ವಿಶೇಷ (10 ಟ್ರಿಪ್ಸ್)

ಪನ್ವೆಲ್-ರತ್ನಗಿರಿ ರಸ್ತೆ ವಾರಕ್ಕೆರಡು ಬಾರಿ ವಿಶೇಷ (10 ಟ್ರಿಪ್ಸ್)

01233 ವಾರಕ್ಕೆರಡು ಬಾರಿ ವಿಶೇಷ ರೈಲು ಪ್ರತಿ ಗುರುವಾರ, ಭಾನುವಾರ 08.00ಗಂಟೆಗೆ ಪನ್ವೇಲ್‌ನಿಂದ ಹೊರಟು ಅದೇ ದಿನ 15.40 ಗಂಟೆಗೆ ರತ್ನಗಿರಿ ತಲುಪಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 23 ರವರೆಗೆ ಸಂಚರಿಸಲಿದೆ.

01234 ವಾರಕ್ಕೆರಡು ಬಾರಿ ವಿಶೇಷ ರೈಲು ರತ್ನಗಿರಿಯಿಂದ ಪ್ರತಿ ಸೋಮವಾರ, ಶುಕ್ರವಾರ23.30 ಗಂಟೆಗೆ ಹೊರಟು ಮರುದಿನ 06.00 ಗಂಟೆಗೆ ಪನ್ವೇಲ್ ತಲುಪಲಿದೆ. ಈ ವಿಶೇಷ ರೈಲು ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 22 ರವರೆಗೆ ಸಂಚರಿಸಲಿದೆ.

ತಂಗುದಾಣಗಳು: ರೋಹಾ, ಮನಗಾಂವ್, ವೀರ್, ಖೇಡ್, ಚಿಲ್ಪುನ್, ಸವರ್ದ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ.

English summary
Indian Railway to Run 72 Special Trains During Ganesh Chaturthi. Check Timings, Route And Other Details in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X