ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಯಲ್ಲಿ ಅತ್ತ ಸರ್ಕಾರ ರಚನೆ ಕಗ್ಗಂಟು: ಇತ್ತ ಸರಣಿ ಐಟಿ ದಾಳಿ!

|
Google Oneindia Kannada News

ಮುಂಬೈ, ನವೆಂಬರ್ 15: ಮಹಾರಾಷ್ಟ್ರದಲ್ಲಿ ಒಂದೆಡೆ ಸರ್ಕಾರ ರಚನೆಯು ಕಗ್ಗಂಟಾದರೆ ಇನ್ನೊಂದೆಡೆ ಸರಣಿ ಐಟಿ ದಾಳಿ ಅಧಿಕಾರಿಗಳನ್ನು ಕಂಗೆಡಿಸಿದೆ.

ಬೃಹನ್ಮುಂಬೈ ಮಹಾನಗರ ಪಾಲಿಕೆಯ ಕಂಟ್ರಾಕ್ಟರ್ ಗಳನ್ನೇ ಗುರಿಯಾಗಿಸಿ ಸುಮಾರು 30 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಎಂಸಿ ಗೆ ಸಂಬಂಧಿಸಿದ ಯೋಜನೆಗಳಲ್ಲಿ ಕಂಡುಬಂದ 735 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ .

ಶಶಿಕಲಾಗೆ ಮತ್ತೆ ಸಂಕಷ್ಟ: 1,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಸ್ವಾಧೀನಶಶಿಕಲಾಗೆ ಮತ್ತೆ ಸಂಕಷ್ಟ: 1,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಸ್ವಾಧೀನ

ದೇಶದಲ್ಲೇ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆ ಎನ್ನಿಸಿರುವ ಬಿಎಂಸಿ ಸದ್ಯಕ್ಕೆ ಬಿಜೆಪಿ-ಶಿವಸೇನೆಯ ಮೈತ್ರಿ ತೆಕ್ಕೆಯಲ್ಲಿದೆ. ಈ ದಾಳಿಯಿಂದಾಗಿ ದೊಡ್ಡ ಮಟ್ಟದ ಅಕ್ರಮ ಹಣ, ತೆರಿಗೆ ವಂಚನೆ ಹೊರಬರಲಿದೆ ಎಂದು ವರದಿಗಳು ತಿಳಿಸಿವೆ.

Income Tax Raids In Mumbai on Contractors in Civic Body

ಇತ್ತ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಗ್ಗಂಟಾಗಿದ್ದು, ಈಗಾಗಲೇ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಆದರೂ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಯೋಚನೆಯಲ್ಲಿದೆ.

Breaking:ಬೆಂಗಳೂರು ಐಟಿ ಇಲಾಖೆಗೆ ಬಾಂಬ್ ಬೆದರಿಕೆಯ ಇ-ಮೇಲ್ Breaking:ಬೆಂಗಳೂರು ಐಟಿ ಇಲಾಖೆಗೆ ಬಾಂಬ್ ಬೆದರಿಕೆಯ ಇ-ಮೇಲ್

ಬೃಹನ್ಮುಂಬೈ ಮಹಾನಗರ ಪಾಲಿಕೆಯ 227 ಸೀಟುಗಳಲ್ಲಿ 94 ಶಿವಸೇನೆ ಪಾಲಾಗಿದ್ದರೆ, 82 ಬಿಜೆಪಿ ಪಾಲಾಗಿದೆ. ಇದೀಗ ಐಟಿ ದಾಳಿ ನಡೆದಿರುವುದು ಉಭಯ ಪಕ್ಷಗಳಿಗೂ ಭಾರೀ ಆಘಾತ ನೀಡಿದೆ. ದಾಳಿಯಲ್ಲಿ ಹಲವು ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

English summary
Income Tax Raids In Mumbai on Contractors in Brihanmumbai Municipal Corporation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X