ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಹೆಸರಲ್ಲಿ ಆದಿತ್ಯ ಪ್ರಮಾಣ, ಶಿವಸೇನೆಯದು ಡೋಂಗಿ ಹಿಂದುತ್ವ ಎಂದ ಬಿಜೆಪಿ

|
Google Oneindia Kannada News

ಮುಂಬೈ, ನವೆಂಬರ್ 26: ಶಿವಸೇನಾ ಯುವ ನಾಯಕ ಆದಿತ್ಯ ಠಾಕ್ರೆ ಅವರು ಸೋನಿಯಾ ಗಾಂಧಿ ಹೆಸರಿನಲ್ಲಿ ಪ್ರಮಾಣ ಮಾಡಿರುವುದನ್ನು ನಾವು ನೋಡಿದ್ದೇವೆ. ಇದರಿಂದ ಶಿವಸೇನೆಯದು ಢೋಂಗಿ ಹಿಂದುತ್ವ ಎಂದು ಬಿಜೆಪಿ ಟೀಕಿಸಿದೆ. ಸಾಮಾನತ್ಯವಾಗಿ ಇಂತಹ ಪರೇಡ್ ಕ್ರಿಮಿನಲ್ ಗಳಿಗೆ ಪೊಲೀಸ್ ಸ್ಟೇಶನ್ ನಲ್ಲಿ ಮಾಡುತ್ತಾರೆ ಹೊರತು ಶಾಸಕರಿಗಲ್ಲ ಎಂದಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್ಸಿಪಿ ಸರ್ಕಾರ ರಚನೆಯಾದ ಬೆನ್ನಲ್ಲೇ , ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ಬಲಪ್ರದರ್ಶನ ಸೋಮವಾರ ಸಂಜೆ ಮುಂಬೈನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ. ಈ ವಿಚಾರವನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಟ್ವೀಟ್ ಮೂಲಕ ಮೊದಲು ಪ್ರಕಟಿಸಿದ್ದರು. 162 ಶಾಸಕರ ಪರೇಡ್ ನಡೆಯಲಿದೆ, ರಾಜ್ಯಪಾಲರನ್ನು ಆಹ್ವಾನಿಸಲಾಗಿದೆ ಎಂದಿದ್ದರು.

ಮಹಾರಾಷ್ಟ್ರ: ಅಜಿತ್ ಪವಾರ್‌ಗೆ ಹಗರಣ ಆರೋಪದಿಂದ ಕ್ಲೀನ್‌ಚಿಟ್ ಗಿಫ್ಟ್?ಮಹಾರಾಷ್ಟ್ರ: ಅಜಿತ್ ಪವಾರ್‌ಗೆ ಹಗರಣ ಆರೋಪದಿಂದ ಕ್ಲೀನ್‌ಚಿಟ್ ಗಿಫ್ಟ್?

ಸಂಜೆ ಏಳು ಗಂಟೆಗೆ ಹೋಟೆಲ್ ನಲ್ಲಿ ಸೇರಿದ ಮೂರೂ ಪಕ್ಷದ ನಾಯಕರು ಮತ್ತು ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸಿದರು. ಸೋನಿಯಾ ಗಾಂಧಿ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಹೆಸರಿನಲ್ಲಿ ಪ್ರಮಾಣ ಮಾಡಿ, ಬಲ ಪ್ರದರ್ಶನ ಮಾಡಿದರು. ಇಂದು ಸುಪ್ರೀಂ ಕೋರ್ಟ್ ನಿಂದ ಆದೇಶ ಹೊರಬಿಳಲಿದೆ.

In Sonias name Aditya Oath, Shiv Sena is Pretension Hindutva

ನಮಗೆ ಸಂಖ್ಯಾಬಲ ಇರುವ ಬಗ್ಗೆ ನಮಗೆ ವಿಶ್ವಾಸವಿದೆ. ಬಹುಮತ ಸಾಬೀತು ಮಾಡಿ ತೋರಿಸುತ್ತೇವೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ನೇತೃತ್ವದಲ್ಲಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಆಶಿಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

In Sonias name Aditya Oath, Shiv Sena is Pretension Hindutva

ಮಹಾರಾಷ್ಟ್ರದಲ್ಲಿ ದಿನೇದಿನೇ ರಾಜಕೀಯ ಚಟುವಟಿಕೆಗಳು ಕುತೂಹಲ ಮೂಡಿಸುತ್ತಿದ್ದು, ಒಂದು ಕಡೆ ಮೂರು ಪಕ್ಷಗಳ ಎಲ್ಲ 162 ಶಾಸಕರು ಒಂದೆಡೆ ಸೇರಿದ್ದಾರೆ. ಮತ್ತೊಂದೆಡೆ ಬಿಜೆಪಿ ಪಕ್ಷ 102 ಶಾಸಕರನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿದೆ. ಬಹುಮತ ಸಾಬೀತು ಮಾಡಲು 145 ಶಾಸಕರ ಅವಶ್ಯಕತೆ ಇದ್ದು ಉಳಿದ ಶಾಸಕರನ್ನು ಹೇಗೆ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

English summary
We Have Seen Shiv Sena youth Leader Aditya Thackeray Swearing In The Name Of Sonia Gandhi. The BJP Has Criticized The Shiv Sena For Being a Pretension Hindutva.In General Such a Parade Of Criminals Is Done At The Police Station, Not By MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X