ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತಿನ್ ಗಡ್ಕರಿ ಹೇಳಿದ ಸೂಕ್ಷ್ಮತೆಯನ್ನು ಅರಿಯದೇ ಹೋದ ಶಿವಸೇನೆ

|
Google Oneindia Kannada News

ಮುಂಬೈ, ನ 23: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಶಿವಸೇನೆಯನ್ನು ಕೈಕೈಹಿಸುಕಿಕೊಳ್ಳುವಂತೆ ಮಾಡಿದೆ. ಉದ್ದವ್ ಠಾಕ್ರೆ ಕೈಗೆ ಬಂದ ತುತ್ತನ್ನು, ಫಡ್ನವೀಸ್ ಕಸಿದುಕೊಂಡಿದ್ದಾರೆ.

ಶಿವಸೇನೆ-ಎನ್ಸಿಪಿ-ಕಾಂಗ್ರೆಸ್, ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಇನ್ನೇನು ಬರುತ್ತೆ ಎನ್ನುವಷ್ಟರಲ್ಲಿ, ದೆಹಲಿಯಲ್ಲಿ ಕೂತು, ಅಮಿತ್ ಶಾ ಇಟ್ಟ ನಡೆಯೇ ಬೇರೆಯಿತ್ತು. ಶನಿವಾರ (ನ 23) ಬೆಳ್ಳಂಬೆಳಗ್ಗೆ ಫಡ್ನವೀಸ್ ಸಿಎಂ ಆದರು, ಅಜಿತ್ ಪವಾರ್ ಡಿಸಿಎಂ ಆದರು.

ಅಂದು ದೇವೇಗೌಡ್ರು, ಇಂದು ಶರದ್ ಪವಾರ್: ಬಕ್ರಾ ಆಗಿದ್ದು ಯಾರು? ಅಂದು ದೇವೇಗೌಡ್ರು, ಇಂದು ಶರದ್ ಪವಾರ್: ಬಕ್ರಾ ಆಗಿದ್ದು ಯಾರು?

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರಕಾರವೇ ಬರುತ್ತೆ ಎನ್ನುವುದನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಕ್ಷ್ಮವಾಗಿ ಹೇಳಿದ್ದರು. ಆದರೆ, ಇದರ ಒಳಾರ್ಥವನ್ನು ಅರಿಯದೇ ಶಿವಸೇನೆ, ಮುಖಭಂಗ ಅನುಭವಿಸುವಂತಾಗಿದೆ.

In Politics And Cricket Nothing Can Predict: Earlier Hint Given By Nitin Gadkari On Maharasthra Government Formation

"Edge - 2019" ಉದ್ಯಮಿಗಳ ಜೊತೆ ಸಂವಾದದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸಂಬಂಧ ಪ್ರಶ್ನೆ ಕೇಳಿ ಬಂತು.

"ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನನ್ನೂ ಮೊದಲೇ ಊಹಿಸಲೂ ಸಾಧ್ಯವಿಲ್ಲ. ಇನ್ನೇನು, ಮ್ಯಾಚ್ ಕೈತಪ್ಪಿತು ಎನ್ನುವಷ್ಟರಲ್ಲಿ ಫಲಿತಾಂಶ ಬೇರೆ ಬಂದಿರುತ್ತದೆ" ಎಂದು ನಿತಿನ್ ಗಡ್ಕರಿ ಹೇಳಿದ್ದರು.

ಅಂದು ಮುಫ್ತಿ,ಇಂದು ಶರದ್ ಪವಾರ್: ಅಧಿಕಾರಕ್ಕಾಗಿ, ಮುಂದೆ ಓವೈಸಿಯೂ ಬಿಜೆಪಿಗೆ ಓಕೆ? ಅಂದು ಮುಫ್ತಿ,ಇಂದು ಶರದ್ ಪವಾರ್: ಅಧಿಕಾರಕ್ಕಾಗಿ, ಮುಂದೆ ಓವೈಸಿಯೂ ಬಿಜೆಪಿಗೆ ಓಕೆ?

ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆಗಳನ್ನು ಮತ್ತು ನಿತಿನ್ ಗಡ್ಕರಿ ಹೇಳಿಕೆಯನ್ನು, ಒಂದಕ್ಕೊಂದು ತುಲನೆ ಮಾಡುವುದಾದರೆ, ಬಿಜೆಪಿಯ ಕೇಂದ್ರ ನಾಯಕರು, ಯಾರಿಗೂ ತಿಳಿಯದಂತೇ, ಗೇಮ್ ಪ್ಲಾನ್ ಮಾಡುತ್ತಲೇ ಇದ್ದರು. ಇದನ್ನು ಶಿವಸೇನೆಯ ಮುಖಂಡರು ಅರಿಯದೇ ಹೋದರು.

English summary
In Politics And Cricket Nothing Can Predict: Earlier Hint Given By Union Minister Nitin Gadkari Over Maharasthra Government Formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X