• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಬ್ಬರು ಕೊರೊನಾ ಸೋಂಕಿತರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ

|
Google Oneindia Kannada News

ಮುಂಬೈ, ಜೂನ್ 14: ಕೊರೊನಾ ಸೋಂಕಿನ ಜತೆಗೆ ಬೇರೆ ಬೇರೆ ಕಾಯಿಲೆಗಳನ್ನು ಹೊಂದಿರುವ ಇಬ್ಬರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಪ್ರಯೋಗ ನಡೆಸಲಾಗಿದೆ.

ಮುಂಬೈನ್ ವೋಕ್‌ಹಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗಿದೆ. ಇಬ್ಬರು ಕೊರೊನಾ ಸೋಂಕಿತರಿಗೆ ಇಂಟರ್‌ವೀನಸ್ ಮೂಲಕ ಒಂದು ಡೋಸ್ ಆಂಟಿವೈರಲ್ ಕಾಕ್‌ಟೈಲ್ ಔಷಧವನ್ನು ನೀಡಲಾಗಿದೆ. ಔಷಧ ಪಡೆದ ನಂತರ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ವೈದ್ಯರಾದ ಡಾ. ಜಿನೇಂದ್ರ ಜೈನ್ ಮಾತನಾಡಿದ್ದು,''65 ವರ್ಷಕ್ಕಿಂತ ಹೆಚ್ಚಿನವರು, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಆಮ್ಲಜನಕ ಮಟ್ಟ 93ಕ್ಕೂ ಹೆಚ್ಚು ಇರುವವರಿಗೆ ಆಂಟಿ ಬಾಡಿ ಕಾಕ್‌ಟೇಲ್ ಥೆರಪಿ ಉತ್ತಮ, ಆದರೆ, ಈ ಚಿಕಿತ್ಸೆ ಪಡೆಯುವ ರೋಗಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಯಕೃತ್ ಹಾಗೂ ದೀರ್ಘಕಾಲೀನ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದಲ್ಲಿ, ಅವರಿಗೆ ತೀವ್ರ ಸ್ವರೂಪದ ಸೋಂಕು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ''.

ಸೌಮ್ಯ ಕೊರೊನಾ ಸೋಂಕಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಮೇ ತಿಂಗಳಲ್ಲಿ ಮೊನೊಕ್ಲೋನಲ್ ಆಂಟಿಬಾಡಿ ಕಾಕ್‌ಟೈಲ್ ಚಿಕಿತ್ಸೆಯನ್ನು ಭಾರತದಲ್ಲಿ ಅನುಮೋದಿಸಲಾಗಿದೆ.

60 ವರ್ಷ ವಯಸ್ಸಾಗಿರುವ ಇಬ್ಬರು ಮಹಿಳಾ ಕೊರೊನಾ ಸೋಂಕಿತರಿಗೆ ನೀಡಲಾಗಿತ್ತು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ವರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ಕಳೆದ ವರ್ಷ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೇ ರೀತಿ ಇಂಟರ್‌ವೀನಸ್ ಮೂಲಕ ಆಂಟಿವೈರಲ್ ಔಷಧ ನೀಡಲಾಗಿತ್ತು. ಕೋವಿಡ್ ರೋಗಿಗಳಿಗೆ ಈ ಚಿಕಿತ್ಸೆ ಸಹಕಾರಿಯಾಗಿದೆ.

English summary
The Wockhardt Hospital at Mumbai's Mira Road has successfully administered antibody cocktail therapy to two patients having a history of comorbidities. They were given one dose of the cocktail intravenously and both are stable, post-infusion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X