ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ 10 ವರ್ಷದೊಳಗಿನ ಮಕ್ಕಳಲ್ಲೂ ಹೆಚ್ಚುತ್ತಿದೆ ಕೊರೊನಾ ಸೋಂಕು, ಆತಂಕದಲ್ಲಿ ಜನತೆ

|
Google Oneindia Kannada News

ಮುಂಬೈ, ಮೇ 02: ಮಹಾರಾಷ್ಟ್ರದಲ್ಲಿ 10 ವರ್ಷದೊಳಗಿನ ಮಕ್ಕಳೂ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, ಜನರಲ್ಲಿ ಆತಂಕ ಇಮ್ಮಡಿಗೊಂಡಿದೆ.

ಏಪ್ರಿಲ್ 3 ರವರೆಗೂ ರಾಜ್ಯದಲ್ಲಿ 10 ವರ್ಷದೊಳಗಿನ 1,34,470 ರಷ್ಟು ಮಕ್ಕಳು ಸೋಂಕಿಗೊಳಗಾಗಿದ್ದಾರೆ. ಕೇವಲ 25 ದಿನಗಳಲ್ಲಿ 75,387 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಶೇ.51ರಷ್ಟು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ

ಒಂದು ತಿಂಗಳಲ್ಲಿ ರಾಜ್ಯದಲ್ಲಿನ ಮಕ್ಕಳಿಗೆ ಶೇ.51 ರಷ್ಟು ಸೋಂಕು ಹೆಚ್ಚಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

In Maharashtra More Kids Below 10 Years Get Infected With COVID-19

ದೇಶದಲ್ಲಿ ಈ ವರೆಗೂ 2.48 ಲಕ್ಷ ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಮಹಾರಾಷ್ಟ್ರ ಒಂದು ರಾಜ್ಯದಲ್ಲಿಯೇ 67,214 ಸಾವು ಸಂಭವಿಸಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಶೇ.1.50ಕ್ಕೆ ತಲುಪಿದೆ.

ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 10 ವರ್ಷ ವಯಸ್ಸಿನವರಲ್ಲಿ ಶೇ. 3.04 ರಷ್ಟು ಮಕ್ಕಳು ಸೋಂಕಿಗೆ ಒಳಗಾಗಿದ್ದರೆ, 11-20 ವಯಸ್ಸಿನವರಲ್ಲಿ ಶೇ. 6.80 ರಷ್ಟು, 21-30 ವಯಸ್ಸಿನವರಲ್ಲಿ ಶೇ.17.51 ರಷ್ಟು ಮಂದಿ ಸೋಂಕಿಗೊಳಗಾಗಿದ್ದಾರೆಂದು ತಿಳಿದುಬಂದಿದೆ.

ರಾಜ್ಯದಲ್ಲಿ 31-40 ವರ್ಷದವರಲ್ಲೇ ಹೆಚ್ಚಿನ ಸೋಂಕು ಪತ್ತೆಯಾಗಿದ್ದು, ಶೇ.22.09 ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 61 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಲ್ಲಿ ಪಾಸಿಟಿವಿ ಪ್ರಮಾಣವು ಶೇ.17.15 ರಷ್ಟಿದೆ. ಮಕ್ಕಳ ಬಳಿಕ ಯುವ ಜನರಲ್ಲಿ 21-60 ವಯಸ್ಸಿನವರು ಹೆಚ್ಚು ಸೋಂಕಿಗೊಳಲಾಗುತ್ತಿದ್ದಾರೆ.

ರಾಜ್ಯದಲ್ಲಿ 72.6 ರಷ್ಟು ಯುವ ಜನರು ಸೋಂಕಿಗೊಳಗಾಗಿದ್ದಾರೆ. ಮಹಿಳೆಯರಿಗೆ ಹೋಲಿಸದರೆ ಪುರುಷರಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
The Maharashtra government's health department data has revealed that more and more children are getting infected with the COVID virus in the second wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X