ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಭಾರಿ ಮಳೆ ಮುನ್ಸೂಚನೆ, ಆರೆಂಜ್ ಅಲರ್ಟ್

|
Google Oneindia Kannada News

ಮುಂಬೈ, ಜುಲೈ 2: ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈನಲ್ಲಿ ಈಗ ಮಳೆ ಭೀತಿ ಆವರಿಸಿದೆ. ಜುಲೈ 2ರಿಂದ ವಾರಾಂತ್ಯದ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ವರದಿ ಬಂದಿದೆ.

ಮುಂಬೈ, ಥಾಣೆ ಹಾಗೂ ಪಾಲ್ಘಾರ್ ನಲ್ಲಿ ಇಂದಿನಿಂದ ಮೂರು ದಿನಗಳ ಭಾರಿ ಮಳೆ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ.

IMD issues Orange Alert in Mumbai IMD forecasts heavy rain

ನೈಋತ್ಯ ಮಳೆ ಮಾರುತಗಳು ಜೂನ್ 14ರಂದು ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಹಲವೆಡೆ ತುಂತುರು ಮಳೆ ಮಾತ್ರ ಸುರಿಯುತ್ತಿದೆ. ಜುಲೈ 3ರಿಂದ ಮಳೆ, ಗಾಳಿ ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ, ಉಳಿದ ಜಿಲ್ಲೆಗಳಲ್ಲಿ ಸಾಧಾರಣ

ಇದಲ್ಲದೆ ಕರ್ನಾಲ್(ಹರ್ಯಾಣ), ನಜಿಬಾಬಾದ್, ಬಿಜ್ನೊರ್, ಮುಝಾಫರ್ ನಗರ್, ಖಾತೌಲಿ, ಹಸ್ತಿನಾಪುರ್, ಚಂದಾಪುರ್ (ಎಲ್ಲವೂ ಉತ್ತರ ಪ್ರದೇಶ) ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಅತ್ತ ಬಿಹಾರದಲ್ಲಿ ಭಾರಿ ಮಳೆ, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಿಡಿಲು ಬಡಿದು ಈಗಾಗಲೇ ನೂರಕ್ಕೂ ಅಧಿಕ ಮಂದಿ ಮೃತರಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

English summary
The India Meteorological Department (IMD) has issued forecasted heavy to very heavy rain in parts of Mumbai, Thane and Palghar over the weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X