ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಗೆ ಹೋಗುವೆ ಎಂದು ಸವಾಲು ಹಾಕಿದ ಸಂಜಯ್ ರಾವುತ್

|
Google Oneindia Kannada News

ಮುಂಬೈ, ಜನವರಿ 17 : " ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತೇನೆ, ಏನಾಗುತ್ತದೆಯೋ ನೋಡೋಣ" ಎಂದು ಶಿವಸೇನೆ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಸವಾಲು ಹಾಕಿದ್ದಾರೆ.

Recommended Video

IND vs AUS 2nd ODI : Rahul the opener and also a finisher | KL RAHUL | ONEINDIA KANNADA

ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಸನ್ಮಾನ ಕಾರ್ಯಕ್ರಮವನ್ನು ಜನವರಿ 18ರ ಶನಿವಾರ ಆಯೋಜಿಸಿದ್ದಾರೆ. ಸಮಾರಂಭಕ್ಕೆ ಹೋಗುವುದಾಗಿ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.

ಬೆಳಗಾವಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರಲ್ಲ: ನಾರಾಯಣ ಗೌಡಬೆಳಗಾವಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರಲ್ಲ: ನಾರಾಯಣ ಗೌಡ

ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲರನ್ನು ಕರ್ನಾಟಕದ ಪೊಲೀಸರ ವಶಕ್ಕೆ ಪಡೆದಿದ್ದನ್ನು ಸಂಜತ್ ರಾವುತ್ ಟೀಕಿಸಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಘಟಕಕ್ಕೆ ಇದನ್ನು ಖಂಡಿಸುವ ಧೈರ್ಯವಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

 ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ!: ಶಾಸಕನ ಹೇಳಿಕೆಗೆ ತೀವ್ರ ಆಕ್ರೋಶ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ!: ಶಾಸಕನ ಹೇಳಿಕೆಗೆ ತೀವ್ರ ಆಕ್ರೋಶ

I Will Visit Belagavi Challenges Sanjay Raut

ಸಂಜಯ್ ರಾವುತ್ ಟ್ವೀಟ್ ಮಾಡಿದ್ದು, "ಕರ್ನಾಟಕದ ಪೊಲೀಸರು ರಾಜೇಂದ್ರ ಅವರ ಮೇಲೆ ದಬ್ಬಾಳಿಕೆ ನಡೆಸಲಿದ್ದಾರೆ. ಹುತ್ಮಾತ್ಮರ ಕಾರ್ಯಕ್ರಮದಲ್ಲಿ ಅವರನ್ನು ತಡೆಯಲಾಗಿದೆ. ಜನವರಿ 18ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತೇನೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಕುರಿತು ಯಡಿಯೂರಪ್ಪ ಸಭೆಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಕುರಿತು ಯಡಿಯೂರಪ್ಪ ಸಭೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳಗಾವಿ ವಿವಾದವನ್ನು ಕೆದಕಿತ್ತು. ಇದರಿಂದಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಪುನಃ ಚರ್ಚೆ ಆರಂಭವಾಗಿತ್ತು.

ಸೋಮವಾರ ಬೆಳಗಾವಿಯ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಮಹಾರಾಷ್ಟ್ರದ ನಾಯಕರು ಕರ್ನಾಟಕಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಪ್ರತಿಭಟನೆ ನಡೆಸಿದ್ದರು.

English summary
Shiv Sena leader Sanjay Raut has made challenge that he will visit Karnataka's Belagavi district on January 18, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X