ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಲ್ಲಿ ಐಟಿ ಇಲಾಖೆ ಸಮೀಕ್ಷೆ

|
Google Oneindia Kannada News

ಮುಂಬೈನಲ್ಲಿ ನಟ ಸೋನುಸೂದ್ ಅವರ ನಿವಾಸಗಳು ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಸೋನುಸೂದ್ ಅವರಿಗೆ ಸಂಪರ್ಕವಿರುವ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಈ ಸಮೀಕ್ಷೆ ನಡೆದಿದೆ.

ಕೊರೊನಾ ಸಂದರ್ಭದಲ್ಲಿ ನಟ ಸೋನುಸೂದ್ ಸಾವಿರಾರು ಮಂದಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಲಾಕ್‌ಡೌನ್‌ನಲ್ಲಿ ಬೇರೆ ರಾಜ್ಯ ಅಥವಾ ಬೇರೆ ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ನೆರವಾಗಿದ್ದರು.

I-T Department Surveys 6 Places Linked To Actor Sonu Sood

ಅವರು ರಾಜಕೀಯ ಸೇರಲು ಯಾವತ್ತೂ ಒಲವು ತೋರಿಲ್ಲ, ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಹಲವರಿಗೆ ಈ ಅನುಮಾನ ಕಾಡಿತ್ತು. ಮುಂದಿನ ವರ್ಷದ ಪಂಜಾಬ್ ಚುನಾವಣೆಯಲ್ಲಿ ಸೋನುಸೂದ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡಿದ್ದವು.

ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಯಾವುದೇ ವ್ಯಕ್ತಿ ಯಾರನ್ನಾದರೂ ಭೇಟಿಯಾಗಬಹುದು, ಆದಾಯ ತೆರಿಗೆ ಇಲಾಖೆ ಸ್ವತಂತ್ರ ವಿಭಾಗವಾಗಿದ್ದು, ತನ್ನದೇ ಆದ ಪ್ರೊಟೊಕಾಲ್‌ಗಳ ಪ್ರಕಾರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಹೇಳಿದ್ದಾರೆ.

ಶಿವಸೇನಾ ಮುಖಂಡ ಆನಂದ್ ದುಬೆ ಮಾತನಾಡಿ, ''ಆದಾಯ ತೆರಿಗೆ ಇಲಾಖೆ ದಾಳಿಯಿಂದ ಆಘಾತವಾಗಿದೆ, ಅವರು ಸಾವಿರಾರು ಮಂದಿಗೆ ಸಹಾಯ ಮಾಡಿದ್ದು, ಹೀಗೆ ಐಟಿ ಅಧಿಕಾರಿಗಳು ಸಮೀಕ್ಷೆ ನಡೆಸಲಿ ಎಂದೇ?, ಅವರು ಕಾನೂನು ಬಾಹಿರವಾಗಿ ಏನಾದರೂ ಮಾಡಿರಬಹುದು ಎಂದು ನನಗೆ ಅನಿಸುತ್ತಿಲ್ಲ'' ಎಂದರು.

ದೇಶದ ಅರ್ಧಕ್ಕಿಂತ ಆಸ್ತಿ ಶೇ.10 ಶ್ರೀಮಂತರ ಕೈಯಲ್ಲಿದೆ: ದೇಶದ ಶೇ.10ರಷ್ಟು ಅತಿ ಶ್ರೀಮಂತರು ಭಾರತದ ಒಟ್ಟು ಭೌತಿಕ ಹಾಗೂ ಹಣಕಾಸು ಆಸ್ತಿಗಳ ಪೈಕಿ ಅರ್ಧದಷ್ಟು ಹೊಂದಿದ್ದರೆ, ತಳಮಟ್ಟದ ಶೇ.50ರಷ್ಟು ಮಂದಿ ಶೇ.10ಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎನ್ನುವ ಅಂಶ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಬಹಿರಂಗವಾಗಿದೆ.

ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ 2019ರಿಂದ ತಿಳಿದು ಬರುವಂತೆ ದೇಶದ ಶೇ.10ರಷ್ಟು ಅತಿ ಶ್ರೀಮಂತರ ಕೈಯಲ್ಲಿ ದೇಶದ ಶೇ.55.7ರಷ್ಟು ನಗರ ಹಾಗೂ ಶೇ.50.8ರಷ್ಟು ಗ್ರಾಮೀಣ ಆಸ್ತಿಗಳಿವೆ.

ಭೂಹಿಡುವಳಿ, ಕಟ್ಟಡಗಳು, ಜಾನುವಾರು, ವಾಹನಗಳು ಹಾಗೂ ಕಂಪನಿಗಳ ಷೇರುಗಳು, ಬ್ಯಾಂಕ್, ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಪ್ರತಿ ಕುಟುಂಬಗಳು ಹೊಂದಿರುವ ಆಸ್ತಿಗಳ ಹಣಕಾಸು ಮೌಲ್ಯವನ್ನು ಲೆಕ್ಕಾಚಾರ ಹಾಕಿ ಈ ಅಂದಾಜು ಸಿದ್ಧಪಡಿಸಲಾಗಿದೆ.

2019ರ ಜನವರಿಯಿಂದ ಡಿಸೆಂಬರ್ ನಡುವೆ ಈ ಸಮೀಕ್ಷೆ ನಡೆಸಲಾಗಿತ್ತು. ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಜನತೆಯ ಭೌತಿಕ ಮತ್ತು ಹಣಕಾಸು ಆಸ್ತಿಯ ಮೌಲ್ಯ 274.6 ಲಕ್ಷ ಕೋಟಿ ರೂ. ಆಗಿದ್ದು, ಈ ಪೈಕಿ ಶೇ.10ರಷ್ಟು ಶ್ರೀಮಂತರು 139.6 ಲಕ್ಷ ಕೋಟಿಯ ಒಡೆತನ ಹೊಂದಿದ್ದಾರೆ.

ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಶೇ.10ರಷ್ಟು ಅತಿ ಶ್ರೀಮಂತರು ಒಟ್ಟು 238.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಪೈಕಿ 132.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ತಳಹಂತದ ಶೇ.50ರಷ್ಟು ಮಂದಿ ಕೇವಲ 10.2ರಷ್ಟು ಆಸ್ತಿಯನ್ನು ಗ್ರಾಮೀಣ ಭಾಗದಲ್ಲಿ ಹೊಂದಿದ್ದರೆ, ನಗರ ಪ್ರದೇಶದ ತಳಮಟ್ಟದ ಶೇ.50ರಷ್ಟು ಜನರ ಕೈಯಲ್ಲಿರುವ ಆಸ್ತಿ ಶೇ.6.2ರಷ್ಟು ಮಾತ್ರ.

English summary
Actor Sonu Sood's premises in Mumbai and a company in Lucknow linked to him were "surveyed" by the Income Tax department, sources said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X