ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪರ್ಯಾಯ ಪಿಎಂ ಅಭ್ಯರ್ಥಿ' ಗಡ್ಕರಿ ಬಗ್ಗೆ ಶರದ್ ಪವಾರ್ ಆತಂಕ

|
Google Oneindia Kannada News

ಮುಂಬೈ, ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕತ್ವದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಬಿಂಬಿಸುತ್ತಿರುವುದರಿಂದ "ಆತಂಕ"ಕ್ಕೆ ಕಾರಣವಾಗಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಈಚೆಗೆ ಪಂಚ ರಾಜ್ಯಗಳ ಚುನಾವಣೆ ವೇಳೆ ಬಿಜೆಪಿ ಸೋಲು ಕಂಡ ಮೇಲೆ ಪಕ್ಷದ ನಾಯಕತ್ವದ ಬಗ್ಗೆ ನಿತಿನ್ ಗಡ್ಕರಿ ಧ್ವನಿ ಎತ್ತಿದ್ದರು.

ಮಹರಾಷ್ಟ್ರದ ಸೊಲ್ಲಾಪುರದಲ್ಲಿ ಮಾಧ್ಯಮದವರ ಮಾತನಾಡಿದ ಅವರು, ಗಡ್ಕರಿ ನನ್ನ ಮಿತ್ರರು. ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ಹೆಸರು ಈಗ ಪ್ರಧಾನಿ ಸ್ಥಾನಕ್ಕೆ ಕೇಳಿಬರುತ್ತಿದೆ. ಆದ್ದರಿಂದ ನನಗೆ ಅವರ ಬಗ್ಗೆ ಆತಂಕವಾಗುತ್ತಿದೆ ಎಂದು ಹೆಚ್ಚಿನ ವಿಚಾರ ಮಾತನಾಡದೆ ಸೂಚ್ಯವಾಗಿ ಗಡ್ಕರಿ ಅವರಿಗೆ ತೊಂದರೆ ಆಗಬಹುದು ಎಂದಿದ್ದಾರೆ.

ಪ್ರಧಾನಿ ಅಭ್ಯರ್ಥಿ ವದಂತಿ ಬಗ್ಗೆ ನಿತಿನ್ ಗಡ್ಕರಿ ಪ್ರತಿಕ್ರಿಯೆ ಪ್ರಧಾನಿ ಅಭ್ಯರ್ಥಿ ವದಂತಿ ಬಗ್ಗೆ ನಿತಿನ್ ಗಡ್ಕರಿ ಪ್ರತಿಕ್ರಿಯೆ

ಲೋಕಸಭಾ ಚುನಾವಣೆಗೆ ಮೈತ್ರಿ ಕುರಿತಾಗಿ ಮಾತನಾಡಿದ ಶರದ್ ಪವಾರ್, ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ (ಎಂಎನ್ ಎಸ್) ಜತೆಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದಿದ್ದಾರೆ.

I am worried about Nitin Gadkari, says NCP chief Sharad Pawar

ರಾಜ್ ಠಾಕ್ರೆ ಅವರಿಗೆ ಯುವ ಸಮೂಹದಲ್ಲಿ ಉತ್ತಮ ಬೆಂಬಲ ಇದೆ. ಅವರ ಪಕ್ಷದ ಜತೆಗೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಬೇಕೆ ಎಂಬ ಬಗ್ಗೆ ಇನ್ನೂ ಯಾವುದೇ ಮಾತುಕತೆ ಆಡಿಲ್ಲ ಎಂದು ಪವಾರ್ ಹೇಳಿದ್ದಾರೆ.

ಮೋದಿಯ ತೆಗಳಿ ನಿತಿನ್ ಗಡ್ಕರಿಯ ಹೊಗಳಿದ ರಾಹುಲ್: ಹೊಸ ತಂತ್ರ?ಮೋದಿಯ ತೆಗಳಿ ನಿತಿನ್ ಗಡ್ಕರಿಯ ಹೊಗಳಿದ ರಾಹುಲ್: ಹೊಸ ತಂತ್ರ?

ಸಾರ್ವಜನಿಕ ಸಮಸ್ಯೆಗಳನ್ನು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಜತೆಗೆ ಆಗಾಗ ಪವಾರ್ ಮಾತನಾಡುತ್ತಾರೆ. ಆದರೆ ಚುನಾವಣೆಗೆ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಶರದ್ ಪವಾರ್ ತಿಳಿಸಿದ್ದಾರೆ.

English summary
Sharad Pawar said Saturday that he was “worried” about Union minister Nitin Gadkari as he is being projected as a possible alternative to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X