ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಶಿವಸೇನೆ ನಾಯಕತ್ವಕ್ಕೆ ಬೆದರುವುದಿಲ್ಲ ಎಂದಿದ್ದೇಕೆ ಸಚಿವ ನಾರಾಯಣ್ ರಾಣೆ?

|
Google Oneindia Kannada News

ಮುಂಬೈ, ಆಗಸ್ಟ್ 25: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರಿತು ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಎಲ್ಲ ಪ್ರಕರಣಗಳಲ್ಲಿ ತಮ್ಮ ಪರವಾಗಿ ತೀರ್ಪು ಬಂದಿದೆ ಎಂದು ಕೇಂದ್ರ ಸಚಿವ ನಾರಾಯಣ್ ರಾಣೆ ಹೇಳಿದ್ದಾರೆ.

ಬುಧವಾರ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. "ನನ್ನ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಶಿವಸೇನೆಯಿಂದ ಸಲ್ಲಿಸಲಾದ ಎಲ್ಲಾ ಪ್ರಕರಣಗಳ ತೀರ್ಪು ನನ್ನ ಪರವಾಗಿದೆ. ದೇಶವು ಕಾನೂನುಗಳಿಂದ ನಡೆಸಲ್ಪಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ," ಎಂದು ಹೇಳಿದರು.

Explained: ಭಾರತದಲ್ಲಿ ಕೇಂದ್ರ ಸಂಪುಟ ಸಚಿವರ ಬಂಧನಕ್ಕೆ ನಿಯಮಗಳೇನು?Explained: ಭಾರತದಲ್ಲಿ ಕೇಂದ್ರ ಸಂಪುಟ ಸಚಿವರ ಬಂಧನಕ್ಕೆ ನಿಯಮಗಳೇನು?

"ರಾಜ್ಯದಲ್ಲಿ ಶಿವಸೇನೆ ನಾಯಕತ್ವಕ್ಕೆ ನಾನು ಯಾವುದೇ ಕಾರಣಕ್ಕೂ ಭಯ ಪಡುವುದಿಲ್ಲ. ನನ್ನ ಹಿಂದೆ ನಮ್ಮ ಪಕ್ಷದ ನಾಯಕರಿದ್ದು, ನಾನು ಎಲ್ಲರಿಗೂ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇನ್ನೆರೆಡು ದಿನಗಳಲ್ಲಿ ಮತ್ತೆ ಜನಾಶೀರ್ವಾದ ಯಾತ್ರೆಯನ್ನು ಮುಂದುವರಿಸಲಾಗುವುದು," ಎಂದು ನಾರಾಯಣ್ ರಾಣೆ ಹೇಳಿದ್ದಾರೆ. ರಾಣೆಯ ಪ್ರವಾಸದ ಮಾರ್ಗ ಒಂದೇ ಆಗಿದ್ದು, ಅದರ ಪುನರಾರಂಭದ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು.

I am Not Afraid of Shiv Sena Leadership, BJP Minister Narayan Rane Says After Get Bail

ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ:

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಬಿಜೆಪಿ ನಾಯಕ ನಾರಾಯಣ್ ರಾಣೆ ಕಳೆದ ಆಗಸ್ಟ್ 19 ರಂದು ಮುಂಬೈನಿಂದ ತಮ್ಮ ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದರು. ಏಳು ದಿನಗಳ ಯಾತ್ರೆ ಸಿಂಧುದುರ್ಗದಲ್ಲಿ ಮುಕ್ತಾಯಗೊಳ್ಳಬೇಕಿತ್ತು.

ಕೇಂದ್ರ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆ:

ಕಳೆದ ಸೋಮವಾರ ರಾಯಗಢದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಆಗಸ್ಟ್ 15ರಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಬಗ್ಗೆ ಮಾಹಿತಿಯಿಲ್ಲ, ಪಕ್ಕದವರನ್ನು ಕೇಳಿ ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲದ ಸಿಎಂ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರನ್ನು ಬಂಧಿಸುವಂತೆ ಆಗ್ರಹಿಸಿತ್ತು.

ನಾರಾಯಣ್ ರಾಣೆ ವಿರುದ್ಧ ನಾಲ್ಕು ಪ್ರಕರಣ:

ಕೇಂದ್ರ ಸಚಿವ ನಾರಾಯಣ್ ರಾಣೆ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿತು. ಮಹಾರಾಷ್ಟ್ರದಲ್ಲಿ ಸಚಿವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಹಲವೆಡೆ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಣೆ ಬಂಧನಕ್ಕೆ ಆಗ್ರಹಿಸಿದ್ದರು. ನಾಸಿಕ್‌ನಲ್ಲಿ ರಾಣೆ ವಿರುದ್ಧ ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2), (ಸಾರ್ವಜನಿಕ ಕಿಡಿಗೇಡಿತನ) ಮತ್ತು 153 (ಬಿ) (1) (ಸಿ) (ಅಸಾಮರಸ್ಯ ಅಥವಾ ದ್ವೇಷದ ಭಾವನೆ ಅಥವಾ ದ್ವೇಷದ ಭಾವನೆ ಅಥವಾ ಇಚ್ಛಾಶಕ್ತಿ) ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ರತ್ನಗಿರಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಾರಾಯಣ್ ರಾಣೆಯವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ರಾತ್ರಿ ವೇಳೆಗಾಗಲೇ ರಾಯಗಢದ ಮಹಾದ್ ಕೋರ್ಟ್, ಜಾಮೀನು ಮಂಜೂರು ಮಾಡಿತು.

English summary
I am Not Afraid of Shiv Sena Leadership, BJP Minister Narayan Rane Says After Get Bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X