ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯ, ನನ್ಮೇಲೆ 'ಮೀಟೂ' ಆರೋಪ ಬರಲಿಲ್ಲ! ಶತ್ರುಘ್ನ ಸಿನ್ಹ ಹೇಳಿಕೆಯ ಅರ್ಥವೇನು?

|
Google Oneindia Kannada News

Recommended Video

ಮೀ ಟೂ ಬಗ್ಗೆ ಅನುಮಾನಾಸ್ಪದ ಹೇಳಿಕೆ ಕೊಟ್ಟ ನಟ ಹಾಗು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ | Oneindia Kannada

ನವದೆಹಲಿ, ಫೆಬ್ರವರಿ 07: 2018 ರ ಅಂತ್ಯದ ಒಂದೆರಡು ತಿಂಗಳು ಸಿನಿಮಾ ರಂಗ, ರಾಜಕಾರಣಿಗಳ ನಿದ್ದೆ ಕೆಡಿಸಿದ್ದ ಮೀಟೂ ಆರೋಪ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡಂದಂತಿದೆ.

ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಾಷೆ ಮಾಡುವುದಕ್ಕೆಂದೋ, ಅಥವಾ ಮಾತಿನ ಓಘದಲ್ಲೋ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಆಡಿದ ಮಾತೊಂದು ಸಾಕಷ್ಟು ಅಪಾರ್ಥಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ

"ನಾನು ನಿಜಕ್ಕೂ ಅದೃಷ್ಟವಂತ ಎಂದು ನಾನೇ ಹೇಳಿಕೊಳ್ಳುತ್ತೇನೆ. ಏಕೆಂದರೆ ನನ್ನ ಮೇಲೆ ಯಾರೂ ಮೀಟೂ ಆರೋಪ ಮಾಡಲಿಲ್ಲ" ಎಂದು ಸಿನ್ಹಾ ಹೇಳಿದ್ದರು.

I am fortunate that my name didnt come out in MeToo, says Shatrughan Sinha

ಅಷ್ಟಕ್ಕೂ ಅವರ ಮಾತಿನ ಅರ್ಥವೇನು? 'ನನ್ನ ಮೇಲೆ ಆರೋಪ ಮಾಡಬೇಕಿತ್ತು' ಎಂಬುದೇ? 'ತಪ್ಪು ಮಾಡಿದರೂ ನನ್ನನ್ನು ಯಾರೂ ಹಳಿಯಲಿಲ್ಲ ಎಂಬುದೇ?' ಅಥವಾ 'ಈ ಮೀಟೂ ಆರೋಪಗಳು ಆಧಾರ ರಹಿತವಾದುದು' ಎಂಬುದೆ?

"ಪ್ರತಿಯೊಬ್ಬ ಯಶಸ್ವೀ ಪುರುಷನ ಸೋಲಿನ ಹಿಂದೆಯೂ ಓರ್ವ ಮಹಿಳೆ ಇರುತ್ತಾಳೆ ಎಂಬುದು ಮೀಟೂ ಆಂದೋಲನದಿಂದ ತಿಳಿದಿದೆ. ನನ್ನ ಮೇಲೆ ಮೀಟೂ ಆರೋಪ ಮಾಡುವುದಕ್ಕೆ ಯಾರಾದರೂ ಯೋಚಿಸಿದ್ದರೆ, ದಯವಿಟ್ಟು ಮಾಡಬೇಡಿ" ಎಂದು ಅವರು ಹೇಳಿದರು.

ಅಲೋಕ್ ನಾಥ್ ವಿರುದ್ಧ ದೂರು ದಾಖಲಿಸಲಿರುವ ವಿನ್ತಾ ನಂದಾ ಅಲೋಕ್ ನಾಥ್ ವಿರುದ್ಧ ದೂರು ದಾಖಲಿಸಲಿರುವ ವಿನ್ತಾ ನಂದಾ

ತಮ್ಮ ಹೇಳಿಕೆಯ ಬಗ್ಗೆ ನಂತರ ಸಮಜಾಯಿಷಿ ನೀಡಿದ ಸಿನ್ಹಾ, 'ನಾನು ತಮಾಷೆಗಾಗಿ ಹೇಳಿದೆ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ' ಎಂದರು.

ಕಳೆದ ವರ್ಷ ಹಲವು ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೀಟೂ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದರು. ಕೇಂದ್ರ ಸಚಿವ ಎಂಜೆ ಅಕ್ಬರ್, ಹಿಂದಿ ನಟರಾದ ಅಲೋಕ್ ನಾಥ್, ನಾನಾ ಪಾಟೇಕರ್ ಮುಂತಾದವರ ವಿರುದ್ಧ ಕೇಳಿಬಂದ ಈ ಆರೋಪದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು.

English summary
Bollywood actor and BJP leader, MP Shatrughan Sinha said, "I really call myself fortunate that, my name hasn't come out in the #MeToo movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X